ಸ್ಟಾರ್ ಹೆಲ್ತ್ ವಿಮೆ
ಪ್ರಯಾಣ ವಿಮಾ ಯೋಜನೆಗಳು
ಪ್ರಯಾಣಿಸುವಾಗ ಅಪಾಯದಿಂದ ರಕ್ಷಣೆ ಪಡೆಯಲು ನಿಮ್ಮ ಪ್ಯಾಕೇಜ್‌ಗೆ ಪ್ರಯಾಣ ವಿಮೆಯನ್ನು ಸೇರಿಸಿರುವುದನ್ನು ಖಚಿತಪಡಿಸಿಕೊಳ್ಳಿ.
ಎಲ್ಲಾ ಟ್ರಾವೆಲ್ ಪ್ಲ್ಯಾನ್‌ಗಳು
ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಅತ್ಯುತ್ತಮ ಪ್ರಯಾಣ ವಿಮಾ ಯೋಜನೆಗಳು
ಸ್ಟಾರ್ ಸ್ಟುಡೆಂಟ್ ಟ್ರಾವೆಲ್ ಪ್ರೊಟೆಕ್ಟ್ ವಿಮಾ ಪಾಲಿಸಿ
ವಿದ್ಯಾರ್ಥಿಗಳಿಗೆ ಪಾಲಿಸಿ: ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿ
ವಿಶಾಲ ವ್ಯಾಪ್ತಿಯ ಕವರ್: ವಿದೇಶದಲ್ಲಿ ಉಂಟಾಗುವ ಪ್ರಯಾಣದ ಅನಾನುಕೂಲತೆಗಳು ಮತ್ತು ತುರ್ತು ವೈದ್ಯಕೀಯ ವೆಚ್ಚಗಳಿಗೆ ಕವರ್ ಪಡೆಯಿರಿ
ಡೆಂಟಲ್ ಎಮರ್ಜೆನ್ಸಿ ಕವರ್: ಪ್ರವಾಸದ ಸಮಯದಲ್ಲಿ ಗಾಯಗಳು ಉಂಟಾದರೆ ತುರ್ತು ಹಲ್ಲಿನ ಚಿಕಿತ್ಸೆಗಳಿಗೆ ಕವರ್ ಪಡೆಯಿರಿ
ಸ್ಟಾರ್ ಟ್ರಾವೆಲ್ ಪ್ರೊಟೆಕ್ಟ್ ವಿಮಾ ಪಾಲಿಸಿ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ತುರ್ತು ವೈದ್ಯಕೀಯ ಕವರ್: ವಿದೇಶದಲ್ಲಿ ಉಂಟಾಗುವ ತುರ್ತು ವೈದ್ಯಕೀಯ ವೆಚ್ಚಗಳಿಗೆ ಕವರ್ ಪಡೆಯಿರಿ
ಪ್ರಯಾಣದಲ್ಲಿನ ಅನಾನುಕೂಲತೆಗಳಿಗೆ ಕವರ್: ಪಾಸ್‌ಪೋರ್ಟ್ ನಷ್ಟ, ವಿಮಾನ ವಿಳಂಬ, ಇತ್ಯಾದಿಗಳಂತಹ ವ್ಯಾಪಕ ಶ್ರೇಣಿಯ ಪ್ರಯಾಣ ಅನಾನುಕೂಲತೆಗಳಿಗೆ ಕವರ್ ಪಡೆಯಿರಿ.
ಸ್ಟಾರ್ ಕಾರ್ಪೊರೇಟ್ ಟ್ರಾವೆಲ್ ಪ್ರೊಟೆಕ್ಟ್ ಇನ್ಶೂರೆನ್ಸ್ ಪಾಲಿಸಿ
ಕಾರ್ಪೊರೇಟ್ ಟ್ರಾವೆಲ್ ಪಾಲಿಸಿ: ಉದ್ಯಮ ಉದ್ದೇಶಗಳಿಗಾಗಿ ಆಗಾಗ್ಗೆ ಪ್ರಯಾಣಿಸುವ ಕಾರ್ಪೊರೇಟ್ ಉದ್ಯೋಗಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿ
ಇನ್ಶೂರೆನ್ಸ್ ಪೂರ್ವದ ತಪಾಸಣೆ: ಈ ಪಾಲಿಸಿಯನ್ನು ಪಡೆದುಕೊಳ್ಳಲು ಇನ್ಶೂರೆನ್ಸ್ ಪೂರ್ವದ ತಪಾಸಣೆ ಅಗತ್ಯವಾಗಿಲ್ಲ
ಟ್ರಿಪ್ ವಿಸ್ತರಣೆಗೆ ಕವರೇಜ್: ಪಾಲಿಸಿಯ ಕೊನೆಯ ದಿನಾಂಕದಂದು ನೀವು ಪ್ರಯಾಣವನ್ನು ಪ್ರಾರಂಭಿಸಿದರೆ ನಿಮ್ಮ ಪ್ರವಾಸದ ಪೂರ್ಣಗೊಳ್ಳುವವರೆಗೆ ನಿಮ್ಮ ಪಾಲಿಸಿಯನ್ನು ವಿಸ್ತರಿಸುವ ಅವಕಾಶ
ತ್ವರಿತ ಲಿಂಕ್ಗಳು
ಪ್ರಯಾಣ ವಿಮಾ ಪಾಲಿಸಿ
ಪ್ರಯಾಣ ವಿಮೆ ಎಂದರೇನು?
ಪ್ರಯಾಣ ಮಾಡುವಾಗ ಉಂಟಾಗುವ ತುರ್ತು ಪರಿಸ್ಥಿತಿಗಳನ್ನು ಸರಿದೂಗಿಸಲು ಅಗತ್ಯವಾದ ಹಣಕಾಸಿನ ನೆರವನ್ನು ಪ್ರಯಾಣದ ವಿಮೆಯು ಒದಗಿಸುತ್ತದೆ. ವಿಮೆಗಳು ವೈದ್ಯಕೀಯ ಮತ್ತು ತುರ್ತು ಹಲ್ಲಿನ ಚಿಕಿತ್ಸೆ ವೆಚ್ಚಗಳು, ಜಾಗದಲ್ಲಿ ಇಲ್ಲದ ಅಥವಾ ಕಳೆದುಹೋದ ಸಾಮಾನುಗಳು, ವಿಳಂಬವಾದ ವಿಮಾನ, ವಿಮಾನ ರದ್ದತಿ, ಹಣದ ಕಳ್ಳತನ ಅಥವಾ ಪಾಸ್‌ಪೋರ್ಟ್ ನಷ್ಟ ಮತ್ತು ಇತರ ಪ್ರಯಾಣ-ಸಂಬಂಧಿತ ಅಪಾಯಗಳಿಗೆ ಪರಿಹಾರವನ್ನು ಒಳಗೊಂಡಿರುತ್ತದೆ. ವಿದೇಶದಲ್ಲಿ ವ್ಯಕ್ತಿಯೊಬ್ಬ ಅನುಭವಿಸಬಹುದಾದ ತೊಂದರೆಗಳ ಕುರಿತು ಯೋಚಿಸುವಾಗ, ಪ್ರಯಾಣ ವಿಮೆಯು ನಿಮ್ಮ ಪ್ರವಾಸವನ್ನು ಸುರಕ್ಷಿತವಾಗಿರಿಸಲು ಪರಿಣಾಮಕಾರಿ ಮಾರ್ಗವಾಗಿದೆ.
ನೀವು ಈಗ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಸುರಕ್ಷತೆಯು ದುಬಾರಿಯಲ್ಲ. ಆದ್ದರಿಂದ ಪ್ರಯಾಣದ ಪರಿಶೀಲನಾಪಟ್ಟಿಯನ್ನು ಸಿದ್ಧಪಡಿಸುವಾಗ ಪ್ರಯಾಣ ವಿಮೆಯನ್ನು ತಪ್ಪಿಸಿಕೊಳ್ಳಬಾರದು.
ಪ್ರಯಾಣ ವಿಮೆಯ ಪ್ರಾಮುಖ್ಯತೆ
ನನಗೆ ಪ್ರಯಾಣ ವಿಮೆ ಏಕೆ ಬೇಕು?
ಪ್ರವಾಸವು ಒಂದು ಆನಂದದ ಅನುಭವವಾಗಿದೆ, ಅದು ರಜೆ, ವ್ಯಾಪಾರ ಪ್ರವಾಸಗಳು ಅಥವಾ ಅಧ್ಯಯನಕ್ಕಾಗಿ. ನಿಮ್ಮ ಮನೆಯಿಂದ ಹೊರಗೆ ಹೊರಡುವ ಹೊಸ ಸಾಹಸಕ್ಕೆ ಕೈ ಹಾಕುವಿರಿ , ಆದ್ದರಿಂದ ನಿಮ್ಮ ಪ್ರಯಾಣವು ಸುಭದ್ರ ಮತ್ತು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಪ್ರಯಾಣ ವಿಮಾ ಪಾಲಿಸಿಯನ್ನು ಪಡೆಯಿರಿ.
ಸ್ಟಾರ್ ಹೆಲ್ತ್
ಸ್ಟಾರ್ ಟ್ರಾವೆಲ್ ವಿಮೆಯನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?
ವಿಮಾ ಉದ್ಯಮದಲ್ಲಿ ಪ್ರವರ್ತಕರಾಗಿರುವುದರಿಂದ, ನಾವು ಟೇಲರ್-ನಿರ್ಮಿತ ಟ್ರಾವೆಲ್ ಇನ್ಶುರೆನ್ಸ್ ಪಾಲಿಸಿಗಳನ್ನು ನೀಡುತ್ತೇವೆ. ತ್ವರಿತ ಕ್ಲೈಮ್ ಸೆಟಲ್‌ಮೆಂಟ್ ಮಾಡುತ್ತೇವೆ. ಪ್ರತಿಷ್ಠಿತ ಕಂಪನಿಗಳೊಂದಿಗೆ ನಮ್ಮ ಮೂಲಕ ನೀವು ವಿದೇಶದಲ್ಲಿ ಗುಣಮಟ್ಟದ ಸೇವೆಗಳನ್ನು ಸ್ವೀಕರಿಸುತ್ತೀರಿ ಎಂದು ನಾವು ಖಚಿತಪಡಿಸುತ್ತೇವೆ.
ಪ್ರಯಾಣ ವಿಮಾ ಯೋಜನೆಗಳು
ಪ್ರಯಾಣದಿಂದ ನಿಮಗೆ ಅದ್ಭುತ ಕಥೆಗಳು, ಸಂಭ್ರಮ ತುಂಬಿದ ನೆನಪುಗಳು ಮತ್ತು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಬಹುದಾದ ಅಸಂಖ್ಯಾತ ಕಲಿಕೆಗಳು ದೊರೆಯುತ್ತದೆ.
ವ್ಯವಹಾರ, ಶಿಕ್ಷಣ ಅಥವಾ ಮೋಜಿನ ಪ್ರವಾಸ ಯಾವುದಕ್ಕೇ ಸಂಬಂಧಿಸಿದ ಅಂತಾರಾಷ್ಟ್ರೀಯ ಪ್ರಯಾಣ ಯಶಸ್ವಿ ಮತ್ತು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ವ್ಯಾಪಕವಾದ ತಯಾರಿ ಅಗತ್ಯವಾಗಿದೆ. ಅತ್ಯುತ್ತಮವಾಗಿ ಯೋಜಿಸಲಾದ ಪ್ರವಾಸಗಳು ಸಹ ಅನಿರೀಕ್ಷಿತ ಘಟನೆಗಳಿಂದ ಅಪಾಯಕ್ಕೆ ಒಳಗಾಗಬಹುದು. ಪಾಸ್‌ಪೋರ್ಟ್ ಅಥವಾ ನಿಮ್ಮ ಪ್ರಯಾಣಿಕರ ಚೆಕ್‌ಗಳನ್ನು ಹೊಂದಿರುವ ಚೆಕ್-ಇನ್ ಬ್ಯಾಗೇಜ್ ಅನ್ನು ಕಳೆದುಕೊಳ್ಳುವುದು ಅಥವಾ ನೀವು ಅನಾರೋಗ್ಯಕ್ಕೆ ಒಳಗಾಗಿ ವಿದೇಶದಲ್ಲಿ ಆಸ್ಪತ್ರೆಗೆ ದಾಖಲಾಗುವಿಕೆಯಂತಹ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳಿ. ಇಂತಹ ಸಂದರ್ಭಗಳು ನಿಮ್ಮ ಸಂತೋಷದಾಯಕ ಪ್ರವಾಸಕ್ಕೆ ಅಡ್ಡಿಪಡಿಯುಂಟುಮಾಡಬಹುದು ಅಥವಾ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವನ್ನು ಹಾಳುಮಾಡಬಹುದು. ಆದ್ದರಿಂದ, ಅತ್ಯುತ್ತಮ ಟ್ರಾವೆಲ್ ಇನ್ಸೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆಮಾಡುವುದು ಅಂತಹ ಘಟನೆಗಳು ನಿಮ್ಮ ಪರಿಪೂರ್ಣವಾಗಿ ಯೋಜಿಸಲಾದ ರಜಾದಿನಗಳನ್ನು ಹಾಳು ಮಾಡುವುದಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ.
ಪಶ್ಚಾತ್ತಾಪ ಪಡುವುದಕ್ಕಿಂತ ಜಾಗರೂಕರಾಗಿರುವುದು ಯಾವಾಗಲೂ ಉತ್ತಮವಾಗಿದೆ! - ಪ್ರಯಾಣ-ಸಂಬಂಧಿತ ತುರ್ತುಸ್ಥಿತಿಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸುವ ಅತ್ಯುತ್ತಮ ಕವರೇಜ್ ಆಯ್ಕೆಗಳನ್ನು ಹೊಂದಿರುವ ಟ್ರಾವೆಲ್ ಇನ್ಸೂರೆನ್ಸ್ ಪಾಲಿಸಿಯನ್ನು ಖರೀದಿಸುವ ಜಾಣ್ಮೆಯ ನಿರ್ಧಾರವನ್ನು ತೆಗೆದುಕೊಳ್ಳಿ. ವಿವಿಧ ಟ್ರಾವೆಲ್ ಇನ್ಸೂರೆನ್ಸ್ ಪ್ಲ್ಯಾನ್‌ಗಳ ಪ್ರಯೋಜನಗಳು ಮತ್ತು ಪ್ರೀಮಿಯಂಗಳನ್ನು ಹೋಲಿಸಿ ಮತ್ತು ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಸೂಕ್ತವಾದ ಪ್ಲ್ಯಾನ್ ಅನ್ನು ಆಯ್ಕೆ ಮಾಡುವ ಮೂಲಕ ನೀವು ಅತ್ಯುತ್ತಮ ಟ್ರಾವೆಲ್ ಇನ್ಸೂರೆನ್ಸ್ ಪ್ಲ್ಯಾನ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ.
ನಿಮಗೆ ಟ್ರಾವೆಲ್ ಇನ್ಸೂರೆನ್ಸ್ ಏಕೆ ಅಗತ್ಯವಾಗಿದೆ?
ನೀವು ವಿದೇಶಗಳಿಗೆ ಪ್ರಯಾಣಿಸಲು ಯೋಜಿಸುವಾಗ ನಿಮ್ಮ ಪ್ರಯಾಣವು ಸುರಕ್ಷಿತ ಮತ್ತು ಆನಂದದಾಯಕವಾಗಿರುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖವಾಗಿದೆ.
ಟ್ರಾವೆಲ್ ಇನ್ಶೂರೆನ್ಸ್ ನೀವು ವಿದೇಶ ಪ್ರವಾಸದ ಸಮಯದಲ್ಲಿರುವಾಗ ಉಂಟಾಗಬಹುದಾದ ವೈದ್ಯಕೀಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಗಳನ್ನು ಕವರ್ ಮಾಡುವ ಉದ್ದೇಶವನ್ನು ಹೊಂದಿದೆ. ಟ್ರಾವೆಲ್ ಇನ್ಶೂರೆನ್ಸ್ ಏಕೆ ಅಗತ್ಯವಾಗಿದೆ ಎಂಬುದಕ್ಕೆ ಕೆಲವು ಕಾರಣಗಳು ಕೆಳಕಂಡಂತಿವೆ.
ಅದರ ಬಗ್ಗೆ ತಿಳಿದುಕೊಳ್ಳೋಣ!
ನಿಮಗೆ ಟ್ರಾವೆಲ್ ಇನ್ಶೂರೆನ್ಸ್ ಏಕೆ ಅಗತ್ಯವಾಗಿದೆ ಎಂಬುದಕ್ಕೆ ಪ್ರಮುಖ ಕಾರಣಗಳು
ನಿಮಗೆ ಅನಾರೋಗ್ಯ ಅಥವಾ ಗಾಯ ಆಗಬಹುದು
ನಿಮಗೆ ಹಲವು ಕಾರಣಗಳಿಂದ ಅನಾರೋಗ್ಯ ಉಂಟಾಗಬಹುದು. ತಡರಾತ್ರಿಯ ವಿಮಾನಗಳು, ಹವಾನಿಯಂತ್ರಣ, ತಾಪಮಾನ ಬದಲಾವಣೆ, ಸಮಯ ವಲಯ ಬದಲಾವಣೆಗಳು ಮತ್ತು ವಿಭಿನ್ನ ಪಾಕಪದ್ಧತಿಗಳು ಇತ್ಯಾದಿ ಅವುಗಳಲ್ಲಿ ಕೆಲವು ಕಾರಣಗಳಾಗಿವೆ. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಪ್ರಯಾಣಿಕರು ನಿರ್ದಿಷ್ಟ ರೋಗಗಳಿಗೆ ಮುಂಚಿತವಾಗಿ ಲಸಿಕೆಯನ್ನು ತೆಗೆದುಕೊಳ್ಳುವುದು ವಿಶ್ವದಾದ್ಯಂತ ಕಡ್ಡಾಯವಾಗುತ್ತಿದೆ. ಇದರಿಂದಾಗಿ ನಿಮ್ಮ ಪ್ರಯಾಣದ ಸಮಯದಲ್ಲಿ ನಿಮಗೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾಗುವಿಕೆಯ ಸಂದರ್ಭ ಎದುರಾಗಬಹುದು. ನಿಮ್ಮ ಪ್ರವಾಸದ ಸಮಯದಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ಅಪಘಾತಗಳಿಂದ ಉಂಟಾಗುವ ಖರ್ಚುಗಳನ್ನು ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಕವರ್ ಮಾಡಬಹುದಾಗಿದೆ. ಇಂತಹ ಅನಿರೀಕ್ಷಿತ ಘಟನೆಗಳನ್ನು ಪಾಲಿಸಿಯಲ್ಲಿ ನಮೂದಿಸಲಾದ ನಿರ್ದಿಷ್ಟ ಮಿತಿಯವರೆಗೆ ಕವರ್ ಮಾಡಲಾಗುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಕವರೇಜ್‌ಗಳು ಒಳರೋಗಿ ಮತ್ತು ಹೊರರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು, ದೈನಂದಿನ ನಗದು ಭತ್ಯೆ, ಹತ್ತಿರದ ಆಸ್ಪತ್ರೆಗಳಿಗೆ ಸಾರಿಗೆ ಮತ್ತು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಚೆಕ್-ಇನ್ ಲಗೇಜ್ ವಿಳಂಬ ಅಥವಾ ನಷ್ಟ
ವಿದೇಶಕ್ಕೆ ಪ್ರಯಾಣಿಸುವಾಗ ಅಥವಾ ದೇಶದೊಳಗೆ ಪ್ರಯಾಣಿಸುವಾಗ ಎದುರಾಗುವ ಸಾಮಾನ್ಯ ಸನ್ನಿವೇಶವೆಂದರೆ ಲಗೇಜ್ ಕಳೆದುಹೋಗುವುದು ಅಥವಾ ಬ್ಯಾಗೇಜ್ ತಡವಾಗುವುದು. ಟ್ರಾವೆಲ್ ಇನ್ಶೂರೆನ್ಸ್‌ಗಳು ಸಾಮಾನ್ಯವಾಗಿ ನಿಮ್ಮ ವಿಳಂಬಿತ ಅಥವಾ ಕಳೆದುಹೋದ ಬ್ಯಾಗೇಜ್‌ಗಳಿಗೆ ಕವರೇಜ್ ಒದಗಿಸುತ್ತವೆ. ನಿಮ್ಮ ಕಳೆದುಹೋದ ಬ್ಯಾಗ್‌ಗಳನ್ನು ಮರುಪಡೆಯಲು ಅವುಗಳು ನಿಮಗೆ ಸಹಾಯ ಮಾಡುತ್ತವೆ ಮತ್ತು ಪಾಲಿಸಿಯ ಕರಾರುಗಳು ಮತ್ತು ಷರತ್ತುಗಳ ಪ್ರಕಾರ ಬ್ಯಾಗೇಜ್‌ನಲ್ಲಿ ಪ್ಯಾಕ್ ಮಾಡಲಾದ ಅಗತ್ಯ ವಸ್ತುಗಳ ಮೇಲೆ ಖರ್ಚು ಮಾಡಿದ ಯಾವುದೇ ಮೊತ್ತದ ವೆಚ್ಚ ಭರಿಸುವಿಕೆ ಮಾಡುವ ಮೂಲಕ ಜಂಜಾಟ-ರಹಿತ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.
ವಿಮಾನ ರದ್ದತಿ ಮತ್ತು ವಿಳಂಬ
ವಿವಿಧ ದೇಶಗಳಿಗೆ ಪ್ರಯಾಣಿಸುವಾಗ, ನೀವು ಖಂಡಿತವಾಗಿಯೂ ಪೂರ್ವ ಯೋಜಿತ ಪ್ರಯಾಣ ವಿವರವನ್ನು ಹೊಂದಿರುತ್ತೀರಿ.
ಪ್ರತಿಕೂಲ ಹವಾಮಾನ ಅಥವಾ ತಪ್ಪಿದ ಸಂಪರ್ಕ ವಿಮಾನಗಳ ಕಾರಣದಿಂದಾಗಿ ವಿಮಾನ ವಿಳಂಬವಾಗುವುದು ಅಥವಾ ಹಾರಾಟದ ಸಮಯದ ಮರುಹೊಂದಾಣಿಕೆಗಳು ಇಡೀ ಪ್ರಯಾಣಕ್ಕೆ ತೊಂದರೆಯುಂಟುಮಾಡಬಹುದು. ಇದು ರದ್ದಾದ ವಿಮಾನ ಅಥವಾ ಇತರ ಯಾವುದೇ ಕಾರಣದಿಂದ ಆಗಿರಬಹುದು. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಅಂತಹ ಸಂದರ್ಭದಲ್ಲಿ ನೆರವಿಗೆ ಬರುತ್ತದೆ; ಇದು ಬಿಲ್‌ಗಳ ಸಲ್ಲಿಕೆ ವಿಳಂಬದ ಅವಧಿವರೆಗೆ ಊಟ ಮತ್ತು ಉಪಹಾರ ಇತ್ಯಾದಿಗಳ ಖರೀದಿಗೆ ಖರ್ಚು ಮಾಡಿದ ಮೊತ್ತದ ವೆಚ್ಚ ಭರಿಸುವಿಕೆ ಮಾಡಬಹುದು.
ಪಾಸ್‌ಪೋರ್ಟ್ ನಷ್ಟ
ವಿಮೆದಾರರು ನಿಮ್ಮ ಪ್ರವಾಸಕ್ಕಿಂತ ಮೊದಲು ಅಥವಾ ನೀವು ದೂರದಲ್ಲಿರುವಾಗ ಪಾಸ್‌ಪೋರ್ಟ್ ಅನ್ನು ಕಳೆದುಕೊಂಡರೆ, ವಿಮೆದಾರರು ನಕಲಿ ಅಥವಾ ಹೊಸ ಪಾಸ್‌ಪೋರ್ಟ್ ಪಡೆದುಕೊಳ್ಳಲು ಉಂಟಾಗುವ ವಾಸ್ತವಿಕ ಖರ್ಚುಗಳ ವೆಚ್ಚ ಭರಿಸುವಿಕೆಯನ್ನು ಮಾಡಬಹುದು. ಆ ರೀತಿಯಲ್ಲಿ, ಇನ್ಶೂರೆನ್ಸ್ ಪ್ಲ್ಯಾನ್ ಆರ್ಥಿಕ ಮತ್ತು ಮಾನಸಿಕ ಒತ್ತಡವನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ನೀವು ಪ್ರಾರಂಭಿಸುವ ಮೊದಲು ನಿಮ್ಮ ಪ್ರವಾಸವನ್ನು ರದ್ದುಗೊಳಿಸುವುದು ಅಥವಾ ಬದಲಾಯಿಸುವುದು
ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಅಥವಾ ನೈಸರ್ಗಿಕ ವಿಕೋಪಗಳು ಎದುರಾದಾಗ ನಿಮ್ಮ ಪ್ರವಾಸವನ್ನು ರದ್ದುಗೊಳಿಸಲು ನೀವು ಬಯಸಬಹುದು. ಅಂತಹ ಸಂದರ್ಭಗಳಲ್ಲಿ, ಪ್ರಿ-ಪೇಯ್ಡ್ ಏರ್ ಟಿಕೆಟ್‌ಗಳನ್ನು ರದ್ದುಗೊಳಿಸುವುದು ಹೆಚ್ಚಾಗಿ ದುಬಾರಿಯಾಗುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್ ಅಡಿಯಲ್ಲಿ ಕವರ್ ಪಡೆಯುವುದರಿಂದ ನಿಮಗೆ ಅಂತಹ ಸಂದರ್ಭಗಳಲ್ಲಿ ಕವರ್ ದೊರೆಯುತ್ತದೆ ಮತ್ತು ಹಾಗಾಗಿ ನೀವು ಆರ್ಥಿಕವಾಗಿ ಚಿಂತಿಸುವ ಅಗತ್ಯವಿಲ್ಲ.
ತುರ್ತು ವರ್ಗಾವಣೆ
ಸುನಾಮಿಗಳು, ಭೂಕಂಪಗಳು, ಜ್ವಾಲಾಮುಖಿ ಬೂದಿ ಮೋಡಗಳು, ರಾಜಕೀಯ ದಂಗೆಗಳು ಮತ್ತು ಭಯೋತ್ಪಾದಕ ದಾಳಿಗಳು ಮುಂತಾದ ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ತುರ್ತು ವರ್ಗಾವಣೆ ಅತ್ಯಗತ್ಯವಾಗಿರುತ್ತದೆ. ನೀವು ಇನ್ಶೂರೆನ್ಸ್ ಕವರ್ ಅನ್ನು ಹೊಂದಿದ್ದರೆ, ನಿಮ್ಮನ್ನು ಆಯಾ ತಾಯ್ನಾಡಿಗೆ ವರ್ಗಾಯಿಸುವ ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಸಹಾಯವನ್ನು ಒದಗಿಸುವ ಜವಾಬ್ದಾರಿಯನ್ನು ಇನ್ಶೂರೆನ್ಸ್ ಕಂಪನಿಯು ತೆಗೆದುಕೊಳ್ಳುತ್ತದೆ.
24/7 ಬೆಂಬಲ
ನೀವು ವಿದೇಶದಲ್ಲಿ ಅಜ್ಞಾತ ಸ್ಥಳದಲ್ಲಿ ತುರ್ತು ಪರಿಸ್ಥಿತಿಯಲ್ಲಿದ್ದಾಗ 24x7 ತುರ್ತು ಸಹಾಯವಾಣಿಯ ಲಭ್ಯತೆ ಇನ್ಶೂರೆನ್ಸ್‌ನ ಪ್ರಯೋಜನಗಳಲ್ಲಿ ಒಂದಾಗಿದೆ. ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ನೀವು ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ಪಡೆಯಬಹುದು. ಆದ್ದರಿಂದ, ಪ್ರಯಾಣ ಮಾಡುವಾಗ ಇನ್ಶೂರೆನ್ಸ್ ದಾಖಲೆಯ ಪ್ರತಿಯನ್ನು ಕೊಂಡೊಯ್ಯುವುದು ಅತ್ಯಗತ್ಯವಾಗಿದೆ. ಸಹಾಯವಾಣಿಗಳು ಸಮೀಪದ ಆಸ್ಪತ್ರೆಯಲ್ಲಿ ನಿಮ್ಮ ವಿವರಗಳನ್ನು ಪಡೆಯಬಹುದು ಅಥವಾ ವರ್ಗಾವಣೆ ಅಥವಾ ತುರ್ತು ಸೇವೆಗಳಿಗೆ ವ್ಯವಸ್ಥೆ ಮಾಡಲು ನಿಮಗೆ ಸಹಾಯ ಮಾಡಬಹುದು.
ಈ ಎಲ್ಲಾ ಕಾರಣಗಳಿಗಾಗಿ, ಟ್ರಾವೆಲ್ ಇನ್ಶೂರೆನ್ಸ್ ಅತ್ಯಗತ್ಯವಾಗಿದೆ ಮತ್ತು ನಿಸ್ಸಂದೇಹವಾಗಿ ನೀವು ಪ್ರಯಾಣಿಸುವ ಮೊದಲು ಮಾಡಬೇಕಾದ ಬುದ್ಧಿವಂತ ಹೂಡಿಕೆಯಾಗಿದೆ.
ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಫೀಚರ್‌ಗಳು
ಟ್ರಾವೆಲ್ ಪ್ಲ್ಯಾನ್‌ಗಾಗಿ ಹೂಡಿಕೆ ಮಾಡುವುದು ಯಾವಾಗಲೂ ಲಾಭದಾಯಕವಾಗಿದೆ ಮತ್ತು ವಿದೇಶಕ್ಕೆ ಪ್ರಯಾಣಿಸುವವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಅಪರಾಧ, ಭಯೋತ್ಪಾದಕ ದಾಳಿ, ಕಳ್ಳತನ ಮತ್ತು ದರೋಡೆಗಳಿಂದಾಗಿ ಮಾನವ ಜೀವನಕ್ಕೆ ಸಂಬಂಧಿಸಿದ ಅಪಾಯಗಳು ಘಾತೀಯವಾಗಿ ಹೆಚ್ಚುತ್ತಿವೆ. ಆದ್ದರಿಂದ ಪ್ರಯಾಣದ ಸಂದರ್ಭದಲ್ಲಿ ಎದುರಾಗಬಹುದಾದ ತುರ್ತು ಪರಿಸ್ಥಿತಿಗಳಿಗಳಲ್ಲಿ ವಿಶ್ವಾದ್ಯಂತ ಕವರ್ ಒದಗಿಸುವ ಟ್ರಾವೆಲ್ ಇನ್ಶೂರೆನ್ಸ್ ನೆರವಿನಿಂದ ಸುರಕ್ಷಿತವಾಗಿರುವುದು ಯಾವಾಗಲೂ ಮಹತ್ವದ್ದಾಗಿದೆ.
ಟ್ರಾವೆಲ್ ಮೆಡಿಕಲ್ ದೈನಂದಿನ ಭತ್ಯೆ ಜೊತೆಗೆ ಒಳರೋಗಿ/ಹೊರರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಯನ್ನು ಕವರ್ ಮಾಡುತ್ತದೆ.
ಹೆಲ್ತ್ ಇನ್ಶೂರೆನ್ಸ್‌ನ ಪ್ರಮುಖ ಫೀಚರ್‌ಗಳು ಪ್ರಯಾಣದ ಸಮಯದ ಅನಾನುಕೂಲತೆಗಳ ವಿರುದ್ಧ ರಕ್ಷಣೆಯನ್ನು ಒಳಗೊಂಡಿವೆ,
- ಚೆಕ್-ಇನ್ ಬ್ಯಾಗೇಜ್‌ನ ನಷ್ಟ ಅಥವಾ ವಿಳಂಬಕ್ಕೆ ಕವರೇಜ್
- ಪಾಸ್‌ಪೋರ್ಟ್ ಮತ್ತು ಸಂಬಂಧಿತ ದಾಖಲೆಗಳ ನಷ್ಟಕ್ಕೆ ಕವರೇಜ್
- ವಿಮಾನ ವಿಳಂಬಕ್ಕೆ ಕವರೇಜ್
- ತಪ್ಪಿದ ವಿಮಾನ/ಕನೆಕ್ಟಿಂಗ್ ವಿಮಾನಕ್ಕೆ ಕವರೇಜ್
- ಹೈಜಾಕ್ ವಿಪತ್ತಿಗೆ ಕವರೇಜ್
- ಪ್ರವಾಸ ರದ್ದತಿ ಮತ್ತು ವಿಳಂಬಕ್ಕೆ ಕವರೇಜ್
- ಅಪಘಾತದ ನಂತರ ಹಲ್ಲಿನ ತುರ್ತು ಖರ್ಚುಗಳು ಸೇರಿದಂತೆ ಪ್ರಯಾಣದ ಸಮಯದಲ್ಲಿ ವೈಯಕ್ತಿಕ ಅಪಘಾತದ ಕವರೇಜ್.
- ಪುನರಾವರ್ತಿತ ಪ್ರಯಾಣಿಕರಿಗೆ ಕವರೇಜ್
- ತೃತೀಯ ಕಕ್ಷಿಯ ದೈಹಿಕ ಗಾಯ ಅಥವಾ ಆಸ್ತಿ ಹಾನಿಗಾಗಿ ಕಾನೂನುಬದ್ಧ ಬಾಧ್ಯತೆಯ ಕವರೇಜ್.
- ತಪ್ಪಿದ ನಿರ್ಗಮನ/ಸಂಪರ್ಕದಿಂದಾಗಿ ಉಂಟಾದ ಪ್ರಯಾಣ ಮತ್ತು ವಸತಿಗೆ ಸಂಬಂಧಿಸಿದ ಖರ್ಚುಗಳ ಕವರೇಜ್ ಅನ್ನು ಕವರ್ ಮಾಡಲಾಗುತ್ತದೆ.
- ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ವ್ಯಕ್ತಿಗಳಿಗೆ ಕವರೇಜ್.
ಮತ್ತು ಇತ್ಯಾದಿ.
ಈ ಸಂಗತಿಗಳು ಒಟ್ಟಾಗಿ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತವೆ. ಮತ್ತು ನೀವು ಯಾವ ಪ್ಲ್ಯಾನ್ ಅನ್ನು ಖರೀದಿಸುತ್ತೀರಿ ಎಂಬುದರ ಆಧಾರದ ಮೇಲೆ, ಕವರೇಜ್‌ಗಳು ಬದಲಾಗುತ್ತವೆ. ಕವರೇಜ್‌ಗಳು ಮತ್ತು ಹೊರಗಿಡುವಿಕೆಗಳು ಪಾಲಿಸಿಯಿಂದ ಪಾಲಿಸಿಗೆ ಬದಲಾಗುತ್ತವೆ. ಆದ್ದರಿಂದ, ನೀವು ಪಾಲಿಸಿಯನ್ನು ಖರೀದಿಸುವ ಮೊದಲು ನಿಮ್ಮ ಅದರ ಬಗ್ಗೆ ತಿಳಿದುಕೊಳ್ಳುವುದು ಎಂದಿಗೂ ಉತ್ತಮವಾಗಿದೆ.
ಸಹಾಯ ಕೇಂದ್ರ
ಗೊಂದಲವೇ? ನಮ್ಮ ಬಳಿ ಉತ್ತರಗಳಿವೆ
ಟ್ರಾವೆಲ್ ಇನ್ಶೂರೆನ್ಸ್‌ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಅನುಮಾನಗಳಿಗೆ ಉತ್ತರವನ್ನು ಪಡೆದುಕೊಳ್ಳಿ.