ಗೋಲ್ಡ್ ಪ್ಲ್ಯಾನ್ | ಸಿಲ್ವರ್ ಪ್ಲ್ಯಾನ್ | |
---|---|---|
ಒಳರೋಗಿ ಆಸ್ಪತ್ರೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ವೆಚ್ಚಗಳನ್ನು ಇದು ಒಳಗೊಂಡಿದೆ. | ||
ಆಸ್ಪತ್ರೆ ದಾಖಲಾತಿ ಪೂರ್ವಒಳರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದರ ಜೊತೆಗೆ, ಆಸ್ಪತ್ರೆಗೆ ದಾಖಲಾದ ದಿನಾಂಕದ 60 ದಿನಗಳ ಮೊದಲು ತಗಲುವ ವೈದ್ಯಕೀಯ ವೆಚ್ಚಗಳನ್ನು ಸಹ ಒಳಗೊಂಡಿದೆ. | ||
ಆಸ್ಪತ್ರೆಗೆ ದಾಖಲಾದ ನಂತರಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ದಿನಾಂಕದಿಂದ 90 ದಿನಗಳವರೆಗಿನ ಆಸ್ಪತ್ರೆ ದಾಖಲಾತಿ ನಂತರದ ವೈದ್ಯಕೀಯ ವೆಚ್ಚಗಳನ್ನು ಪಾಲಿಸಿಯ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳ ಪ್ರಕಾರ ಒಳಗೊಂಡಿದೆ. | ||
ಕೊಠಡಿಯ ಬಾಡಿಗೆಕೊಠಡಿ (ಏಕ ಖಾಸಗಿ ಎ/ಸಿ ಕೊಠಡಿ), ಒಳರೋಗಿಯು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಬೋರ್ಡಿಂಗ್ ಮತ್ತು ಶುಶ್ರೂಷೆ ವೆಚ್ಚಗಳನ್ನು ಒಳಗೊಂಡಿದೆ. | ||
ರೋಡ್ ಆ್ಯಂಬುಲೆನ್ಸ್ ಆ್ಯಂಬ್ಯುಲೆನ್ಸ್ಖಾಸಗಿ ಆ್ಯಂಬ್ಯುಲೆನ್ಸ್ ಸೇವೆಗಳ ಮೂಲಕ ವಿಮಾದಾರರನ್ನು ಆಸ್ಪತ್ರೆಗೆ ದಾಖಲಿಸಲು ಮತ್ತು ಉತ್ತಮ ಚಿಕಿತ್ಸೆಗೆ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲು ಆ್ಯಂಬ್ಯುಲೆನ್ಸ್ ಶುಲ್ಕವನ್ನು ಒಳಗೊಂಡಿರುತ್ತದೆ. | ||
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳಿಗಿಂತ ಕಡಿಮೆ ಅವಧಿಯ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರ ಚಿಕಿತ್ಸಾ ವಿಧಾನಗಳು ಕವರ್ ಆಗುತ್ತವೆ. | ||
ಆಧುನಿಕ ಚಿಕಿತ್ಸೆಓರಲ್ ಕಿಮೋಥೆರಪಿ, ಇಂಟ್ರಾ ವಿಟ್ರಿಯಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ವೆಚ್ಚಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳಿಗೆ ಒಳಪಡಿಸಲಾಗುತ್ತದೆ. | ||
ರಸ್ತೆ ಅಪಘಾತಕ್ಕೆ (RTA) ಹೆಚ್ಚುವರಿ ಮೂಲ ವಿಮಾ ಮೊತ್ತಮೂಲ ವಿಮಾ ಮೊತ್ತವು ಖಾಲಿಯಾದರೆ, ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ, ಅದು 25% ಇಂದ ಗರಿಷ್ಠ ರೂ. 10,00,000/- ಕ್ಕೆ ಹೆಚ್ಚಿಸಲಾಗುತ್ತದೆ. | ||
ಮೂಲ ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್ಪಾಲಿಸಿ ಅವಧಿಯಲ್ಲಿ ವಿಮಾ ಮೊತ್ತದ ಭಾಗಶಃ ಅಥವಾ ಪೂರ್ಣ ಬಳಕೆಯ ಮೇಲೆ, ಅದೇ ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ. | ||
ಸಂಚಿತ ಬೋನಸ್ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 100% ಗೆ ಒಳಪಟ್ಟು ವಿಮಾ ಮೊತ್ತದ 20% ನಲ್ಲಿ ಸಂಚಿತ ಬೋನಸ್ ಅನ್ನು ನೀಡಲಾಗುತ್ತದೆ. | ||
ಆನ್‌ಲೈನ್ ರಿಯಾಯಿತಿಆನ್ಲೈನ್ ಮೂಲಕ ಮೊದಲ ಬಾರಿಗೆ ಪಾಲಿಸಿಯನ್ನು ಖರೀದಿಸಲು ಪ್ರೀಮಿಯಂನಲ್ಲಿ 5% ರಿಯಾಯಿತಿ ನೀಡಲಾಗುತ್ತದೆ. | ||
ವಿಶೇಷ ರಿಯಾಯಿತಿ36 ವರ್ಷಕ್ಕಿಂತ ಮೊದಲು ಪಾಲಿಸಿಯನ್ನು ಖರೀದಿಸಲು ಮತ್ತು 40 ವರ್ಷಗಳ ನಂತರ ಅದನ್ನು ನವೀಕರಿಸಲು ಪ್ರೀಮಿಯಂನಲ್ಲಿ 10% ರಿಯಾಯಿತಿ ಅನ್ವಯಿಸುತ್ತದೆ. | ||
ಇ-ವೈದ್ಯಕೀಯ ಅಭಿಪ್ರಾಯಕಂಪನಿಯ ಪರಿಣತ ಪ್ಯಾನಲ್‌ನಿಂದ ಇ-ವೈದ್ಯಕೀಯ ಅಭಿಪ್ರಾಯ ಸೌಲಭ್ಯವು ವಿಮಾದಾರರು ಪ್ರಾರಂಭಿಸಿದ ವಿನಂತಿಯ ಮೇಲೆ ಲಭ್ಯವಿದೆ. | ||
ಆರೋಗ್ಯ ತಪಾಸಣೆನೆಟ್ವರ್ಕ್ ಆಸ್ಪತ್ರೆಗಳಲ್ಲಿ ಉಂಟಾಗುವ ಆರೋಗ್ಯ ತಪಾಸಣೆ ವೆಚ್ಚಗಳು ಕ್ಲೈಮ್‌ಗೆ ಸಂಬಂಧಪಡದೆ ನಿಗದಿತ ಮಿತಿಗಳಿಗೆ ಒಳಪಟ್ಟಿರುತ್ತದೆ. | ||
ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮಗಳುವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮಾದಾರರ ಆರೋಗ್ಯಕರ ಜೀವನಶೈಲಿಯನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸ್ವಾಸ್ಥ್ಯ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಹೆಚ್ಚುವರಿಯಾಗಿ ವಿಮಾದಾರರು ಗಳಿಸಿದ ಸ್ವಾಸ್ಥ್ಯ ಬೋನಸ್ ಪಾಯಿಂಟ್‌ಗಳನ್ನು ಗರಿಷ್ಠ 10% ವರೆಗೆ ನವೀಕರಣ ರಿಯಾಯಿತಿಗಳನ್ನು ಪಡೆದುಕೊಳ್ಳಲು ಬಳಸಬಹುದು. | ||
ಜೀವನಪರ್ಯಂತ ನವೀಕರಣಈ ಪಾಲಿಸಿಯು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಒದಗಿಸುತ್ತದೆ. | ||
ಡೆಲಿವರಿ ವೆಚ್ಚಗಳುಸಿಸೇರಿಯನ್ ಸೇರಿದಂತೆ ಡೆಲಿವರಿ ವೆಚ್ಚಗಳು ಗರಿಷ್ಠ ಎರಡು ಹೆರಿಗೆಗಳವರೆಗೆ ಪ್ರತಿ ಹೆರಿಗೆಗೆ ರೂ. 30,000/-. | ||
ಆಸ್ಪತ್ರೆ ನಗದು ಪ್ರಯೋಜನಆಸ್ಪತ್ರೆಯಲ್ಲಿ ಕಳೆದ ಪ್ರತಿಯೊಂದು ಸಂಪೂರ್ಣ ದಿನಕ್ಕೆ ರೂ.1000/- ನಗದು ಪ್ರಯೋಜನವನ್ನು ಪ್ರತಿ ಆಸ್ಪತ್ರೆಗೆ ಗರಿಷ್ಠ 7 ದಿನಗಳು ಮತ್ತು ಪ್ರತಿ ಪಾಲಿಸಿ ಅವಧಿಗೆ 14 ದಿನಗಳವರೆಗೆ ಒದಗಿಸಲಾಗುತ್ತದೆ. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.