ಪಾಲಿಸಿ ವಿಧಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದು. |
ವೈಯಕ್ತಿಕ ಪ್ರವೇಶ ವಯಸ್ಸು91 ದಿನಗಳಿಂದ 75 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ವೈಯಕ್ತಿಕ ಆಧಾರದ ಮೇಲೆ ಈ ಪಾಲಿಸಿಯನ್ನು ಪಡೆಯಬಹುದು. |
ಫ್ಲೋಟರ್ ಪ್ರವೇಶ ವಯಸ್ಸು18 ರಿಂದ 75 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆಯಬಹುದು. ಫ್ಲೋಟರ್ ಆಧಾರದ ಅಡಿಯಲ್ಲಿ, 16 ದಿನಗಳಿಂದ 17 ವರ್ಷ ವಯಸ್ಸಿನ ಗರಿಷ್ಠ ಮೂರು ಅವಲಂಬಿತ ಮಕ್ಕಳನ್ನು ಪಾಲಿಸಿಗೆ ಸೇರಿಸಿಕೊಳ್ಳಬಹುದು. |
ವೈದ್ಯಕೀಯ ಪರೀಕ್ಷೆಈ ಪಾಲಿಸಿಯನ್ನು ಪಡೆಯಲು ಯಾವುದೇ ಪೂರ್ವ ವೈದ್ಯಕೀಯ ತಪಾಸಣೆಯ ಅಗತ್ಯವಿಲ್ಲ. ಆದಾಗ್ಯೂ, ಪ್ರತಿಕೂಲ ವೈದ್ಯಕೀಯ ಇತಿಹಾಸ ಘೋಷಿಸಿಕೊಂಡವರನ್ನು ಕಂಪನಿಯ ವೆಚ್ಚದಲ್ಲಿ ವೈದ್ಯಕೀಯ ಪೂರ್ವ ತಪಾಸಣೆಗೆ ಒಳಪಡಿಸಬಹುದು. |
ಒಳರೋಗಿ ವಿಭಾಗಕ್ಕೆ ದಾಖಲುಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ವೆಚ್ಚಗಳನ್ನು ಈ ಪಾಲಿಸಿ ಒಳಗೊಂಡಿದೆ. |
ಆಸ್ಪತ್ರೆಗೆ ದಾಖಲಾಗುವ ಮೊದಲುಒಳರೋಗಿ ವಿಭಾಗಕ್ಕೆ ಸೇರಿಸುವುದರ ಜೊತೆಗೆ, ಆಸ್ಪತ್ರೆಗೆ ದಾಖಲಾದ ದಿನಾಂಕದ 60 ದಿನಗಳ ಮೊದಲಿನ ವೈದ್ಯಕೀಯ ವೆಚ್ಚಗಳನ್ನು ಸಹ ಒಳಗೊಂಡಿದೆ |
ಆಸ್ಪತ್ರೆಯಿಂದ ಡಿಸ್‌ಚಾರ್ಜ್ ನಂತರಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ 180 ದಿನಗಳವರೆಗೆ ತಗಲುವ ಆಸ್ಪತ್ರೆಯ ನಂತರದ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿದೆ. |
ಕೊಠಡಿ ಬಾಡಿಗೆಒಳರೋಗಿ ಆಸ್ಪತ್ರೆಗೆ ದಾಖಲಾದಾಗ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ವೆಚ್ಚಗಳು ದಿನಕ್ಕೆ ವಿಮಾ ಮೊತ್ತದ 1% ವರೆಗೆ ರೂ. 5 ಲಕ್ಷ ವಿಮಾ ಮೊತ್ತಕ್ಕೆ; ಯಾವುದೇ ಕೊಠಡಿ (ಸೂಟ್ ಅಥವಾ ಮೇಲಿನ ವರ್ಗವನ್ನು ಹೊರತುಪಡಿಸಿ) ರೂ. 10/15/20/25 ಲಕ್ಷ ಮೊತ್ತದ ವಿಮಾ ಮೊತ್ತಕ್ಕೆ; ಮತ್ತು ಯಾವುದೇ ಕೊಠಡಿ ರೂ. 50/75/100/200 ಲಕ್ಷ ಮೊತ್ತದ ವಿಮಾ ಆಯ್ಕೆಗಳಿಗೆ |
ಹಂಚಿಕೆಯ ವಸತಿವಿಮಾದಾರರು ಹಂಚಿಕೆಯ ವಸತಿಯನ್ನು ಪಡೆಯಲು ತಗುಲಿದ ವೆಚ್ಚಗಳನ್ನು ಪಾಲಿಸಿ ಷರತ್ತುಗಳಲ್ಲಿ ಉಲ್ಲೇಖಿಸಲಾದ ಮಿತಿಗಳಿಗೆ ಅನುಗುಣವಾಗಿ ಭರಿಸಲಾಗುತ್ತದೆ. |
ವೈದ್ಯಕೀಯೇತರ ವಸ್ತುಗಳಿಗೆ ಕವರೇಜ್ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದರೆ, ಈ ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ವೈದ್ಯಕೀಯೇತರ ವಸ್ತುಗಳು ಪಾವತಿಸಬೇಕಾಗುತ್ತದೆ. |
ರಸ್ತೆ ಆಂಬ್ಯುಲೆನ್ಸ್ಈ ಪಾಲಿಸಿಯು ಆಸ್ಪತ್ರೆಯಲ್ಲಿ ದಾಖಲಾಗಲು, ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಮತ್ತು ಆಸ್ಪತ್ರೆಯಿಂದ ನಿವಾಸಕ್ಕೆ (ಅದು ಒಂದೇ ನಗರದಲ್ಲಿದ್ದರೆ) ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಸ್ಥಳಾಂತರಿಸಲು ಆಂಬ್ಯುಲೆನ್ಸ್ ಶುಲ್ಕಗಳನ್ನು ಒಳಗೊಂಡಿದೆ. |
ಏರ್ ಆಂಬ್ಯುಲೆನ್ಸ್ಏರ್ ಆಂಬ್ಯುಲೆನ್ಸ್ ವೆಚ್ಚಗಳು ಪ್ರತಿ ಪಾಲಿಸಿ ವರ್ಷಕ್ಕೆ ವಿಮಾ ಮೊತ್ತದ 10% ವರೆಗೆ ಭರಿಸಲ್ಪಡುತ್ತವೆ, ವಿಮಾದಾರರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಅಗತ್ಯವಿದ್ದಲ್ಲಿ ಮತ್ತು ಭೂ ಸಾರಿಗೆಯನ್ನು ಒದಗಿಸಲಾಗುವುದಿಲ್ಲ. |
ಡೊಮಿಸಿಲಿಯರಿ ಆಸ್ಪತ್ರೆಗೆಮೂರು ದಿನಗಳಿಗಿಂತ ಹೆಚ್ಚಿನ ಅವಧಿಗೆ ವೈದ್ಯರ ಸಲಹೆಯ ಮೇರೆಗೆ ಆಯುಷ್ ಸೇರಿದಂತೆ ಸ್ವಸ್ಥಳೀಯ ಆಸ್ಪತ್ರೆಗೆ ತಗಲುವ ವೆಚ್ಚವನ್ನು ಭರಿಸಲಾಗುತ್ತದೆ. |
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳು ಈ ವಿಮಾ ವ್ಯಾಪ್ತಿಯಲ್ಲಿ ಸೇರುತ್ತವೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸೆಗಳಾದ ಓರಲ್ ಕಿಮೊಥೆರಪಿ, ಇಂಟ್ರಾ ವಿಟ್ರಿಯಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಇತ್ಯಾದಿಗಳಿಗೆ ತಗಲುವ ವೆಚ್ಚವನ್ನು ವಿಮಾ ಮೊತ್ತಕ್ಕೆ ಒಳಪಡಿಸಲಾಗುತ್ತದೆ. |
ಅಂಗಾಂಗ ದಾನಿ ವೆಚ್ಚಗಳುವಿಮಾದಾರ ವ್ಯಕ್ತಿಯು ಕಸಿ ಮಾಡುವಿಕೆಗಾಗಿ ಕ್ಲೈಮ್ ಪಾವತಿಸಿದರೆ ಆತನ ಅಂಗಾಂಗ ಕಸಿಗಾಗಿ ಅಂಗಾಂಗ ದಾನಿಗೆ ತಗಲುವ ಒಳರೋಗಿ ಆಸ್ಪತ್ರೆಯ ವೆಚ್ಚವನ್ನು ಪಾವತಿಸಿಲಾಗುತ್ತದೆ. ಹೆಚ್ಚುವರಿಯಾಗಿ, ರಿಡೋ ಸರ್ಜರಿ / ಐಸಿಯು ಪ್ರವೇಶದ ಅಗತ್ಯವಿರುವ ತೊಡಕುಗಳಿಗೆ ದಾನಿಯು ಮಾಡಿದ ವೆಚ್ಚಗಳು (ಯಾವುದಾದರೂ ಇದ್ದರೆ) ಭರಿಸಲಾಗುವುದು. |
ಪುನರ್ವಸತಿ ಮತ್ತು ನೋವು ನಿರ್ವಹಣೆಪುನರ್ವಸತಿ ಮತ್ತು ನೋವು ನಿರ್ವಹಣೆಗೆ ತಗಲುವ ವೆಚ್ಚಗಳನ್ನು ಪಾಲಿಸಿ ವರ್ಷದಲ್ಲಿ ನಿರ್ದಿಷ್ಟಪಡಿಸಿದ ಉಪ-ಮಿತಿ ಅಥವಾ ಗರಿಷ್ಠ ವಿಮಾ ಮೊತ್ತದ 20% ವರೆಗೆ ಯಾವುದು ಕಡಿಮೆಯೋ ಅದನ್ನು ಭರಿಸಲಾಗುತ್ತದೆ. |
ಆಯುಷ್ ಚಿಕಿತ್ಸೆಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿಧ ಮತ್ತು ಹೋಮಿಯೋಪತಿ ಪದ್ದತಿಗಳ ಅಡಿಯಲ್ಲಿ ಚಿಕಿತ್ಸೆಗಾಗಿ ಒಳರೋಗಿ ಆಸ್ಪತ್ರೆಯ ವೆಚ ವಿಮಾ ಮೊತ್ತದಲ್ಲಿ ಭರಿಸಲಾಗುತ್ತದೆ. |
ಆರೈಕೆದಾರರ ಪ್ರಯಾಣವಿಮಾದಾರರ ಸಾಮಾನ್ಯ ವಾಸಸ್ಥಳದಿಂದ ದೂರವಿರುವ ಸ್ಥಳದಲ್ಲಿದ್ದು, ಜೀವಕ್ಕೆ-ಬೆದರಿಕೆಯ ತುರ್ತು ಸಂದರ್ಭಗಳಿಗೆ ತುತ್ತಾದರೆ, ವಿಮಾದಾರರನ್ನು ಆಸ್ಪತ್ರೆಗೆ ಸೇರಿಸುವ ಸಂದರ್ಭದಲ್ಲಿ ಆಸ್ಪತ್ರೆಗೆ ಪ್ರಯಾಣಿಸಲು ಕುಟುಂಬದ ಹತ್ತಿರದ ಸದಸ್ಯರಿಗೆ ವಿಮಾನ ಸಾರಿಗೆ ವೆಚ್ಚಗಳು ರೂ. 10,000/- ಪಾವತಿಸಲಾಗುತ್ತದೆ. |
ಮೃತದೇಹ ತರಲುವಿಮೆ ಮಾಡಿದ ವ್ಯಕ್ತಿಯ ಮೃತದೇಹವನ್ನು ಸ್ವಜಾಗಕ್ಕೆ ತರಲು ತಗಲುವ ವೆಚ್ಚವನ್ನು ಪಾಲಿಸಿ ವರ್ಷದಲ್ಲಿ ರೂ.15,000/-ಭರಿಸಲಾಗುತ್ತದೆ. |
ಗರ್ಭಾಶಯದ ಭ್ರೂಣದ ಶಸ್ತ್ರಚಿಕಿತ್ಸೆ / ಮಧ್ಯಸ್ಥಿಕೆಯಲ್ಲಿಗರ್ಭಾಶಯದ ಭ್ರೂಣದ ಶಸ್ತ್ರಚಿಕಿತ್ಸೆಗಳು ಮತ್ತು ಈ ಪಾಲಿಸಿಯಲ್ಲಿ ತಿಳಿಸಲಾದ ಕಾರ್ಯವಿಧಾನಗಳಿಗೆ ತಗಲುವ ವೆಚ್ಚಗಳು ಕಾಯುವ ಅವಧಿಯೊಂದಿಗೆ ಭರಿಸಲಾಗುತ್ತದೆ. ಗಮನಿಸಿ: ಮೇಲೆ ತಿಳಿಸಿದ ಕಾಯುವ ಅವಧಿಗಳು ಜನ್ಮಜಾತ ಆಂತರಿಕ ಕಾಯಿಲೆ/ಜನಿಸದ ಶಿಶುಗಳಿಗೆ ಸಂಬಂಧಿಸಿದ ಚಿಕಿತ್ಸೆಗೆ ಅನ್ವಯಿಸುವುದಿಲ್ಲ. |
ಮೌಲ್ಯಯುತ ಸೇವಾ ಪೂರೈಕೆದಾರರ ನೆಟ್‌ವರ್ಕ್‌ನಲ್ಲಿ ಚಿಕಿತ್ಸೆಮೌಲ್ಯಯುತವಾದ ಸೇವೆ ಒದಗಿಸುವವರಲ್ಲಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಪ್ರತಿ ಪಾಲಿಸಿ ಅವಧಿಗೆ ವಿಮಾ ಮೊತ್ತದ ಒಟ್ಟಾರ 1% ರಷ್ಟು ಗರಿಷ್ಠ ರೂ. 5,000/- ಭರಿಸಲಾಗುತ್ತದೆ |
ಸಂಚಿತ ಬೋನಸ್ಪ್ರತಿ ಕ್ಲೈಮ್ ಮಾಡದ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 100% ಕ್ಕೆ ಒಳಪಟ್ಟು ವಿಮಾ ಮೊತ್ತದ 25% ರಷ್ಟು ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ. |
ಕಡಿತಗೊಳ್ಳಬಹುದಾದ - ಐಚ್ಛಿಕ ಕವರ್ಈ ಪಾಲಿಸಿಯಲ್ಲಿ ತಿಳಿಸಿರುವಂತೆ ಯಾವುದೇ ಕಡಿತಗಳನ್ನು ಆರಿಸಿಕೊಂಡರೆ ವಿಮಾದಾರರು ಪ್ರೀಮಿಯಂ ರಿಯಾಯಿತಿಯನ್ನು ಪಡೆಯಬಹುದು. |
ಸಹ-ಪಾವತಿವಿಮಾದಾರರು 61 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಪಾಲಿಸಿಯನ್ನು ಖರೀದಿಸಿದರೆ ಅಥವಾ ನವೀಕರಿಸಿದರೆ, ಅವನು/ಅವಳು ಪ್ರತಿ ಕ್ಲೈಮ್ ಮೊತ್ತಕ್ಕೆ 10% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತಾರೆ. |
ಖಚಿತ ಆರೋಗ್ಯ ತಪಾಸಣೆಕ್ಲೈಮ್ ಅನ್ನು ಲೆಕ್ಕಿಸದೆ ಪ್ರತಿ ಪಾಲಿಸಿ ವರ್ಷಕ್ಕೆ ನಿರ್ದಿಷ್ಟಪಡಿಸಿದ ಮಿತಿಗಳವರೆಗೆ ಆರೋಗ್ಯ ತಪಾಸಣೆ ವೆಚ್ಚಗಳನ್ನು ಭರಿಸಲಾಗುತ್ತದೆ. |
ಎರಡನೇ ವೈದ್ಯಕೀಯ ಅಭಿಪ್ರಾಯಕಂಪನಿಯ ವೈದ್ಯಕೀಯ ಪ್ರಾಕ್ಟೀಸ್ ಮಾಡುವ ನೆಟ್‌ವರ್ಕ್‌ನಲ್ಲಿರುವ ವೈದ್ಯರಿಂದ ವಿಮಾದಾರರು ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಪಡೆಯಬಹುದು. |
ಸ್ಟಾರ್ ವೆಲ್‌ನೆಸ್ ಕಾರ್ಯಕ್ರಮವಿವಿಧ ವೆಲ್‌ನೆಸ್ ಚಟುವಟಿಕೆಗಳ ಮೂಲಕ ವಿಮಾದಾರರ ಆರೋಗ್ಯಕರ ಜೀವನಶೈಲಿಯನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವೆಲ್‌ನೆಸ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಗಳಿಸಿದ ವೆಲ್‌ನೆಸ್ ಪಾಯಿಂಟ್‌ಗಳನ್ನು ಗರಿಷ್ಠ 20% ವರೆಗೆ ನವೀಕರಣ ರಿಯಾಯಿತಿಗಳನ್ನು ಪಡೆಯಲು ಬಳಸಿಕೊಳ್ಳಬಹುದು. |
ಕಾಯುವ ಅವಧಿ1.ಪೂರ್ವ ಅಸ್ತಿತ್ವದಲ್ಲಿರುವ ರೋಗಗಳಿಗೆ (3 ವರ್ಷಗಳ ಅವಧಿ) - 30 ತಿಂಗಳುಗಳು
2. ಪೂರ್ವ ಅಸ್ತಿತ್ವದಲ್ಲಿರುವ ರೋಗಗಳಿಗೆ (1 ಮತ್ತು 2 ವರ್ಷಗಳ ಅವಧಿ) - 36 ತಿಂಗಳುಗಳು
3. ನಿರ್ದಿಷ್ಟ ರೋಗಗಳು/ಕಾರ್ಯವಿಧಾನಗಳಿಗೆ - 24 ತಿಂಗಳುಗಳ ಆರಂಭಿಕ ಕಾಯುವ ಅವಧಿ - 30 ದಿನಗಳು |
ಕಂತು ಆಯ್ಕೆಗಳುಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೆ ಪಾವತಿಸಬಹುದು. ಈ ಸೌಲಭ್ಯವು ದೀರ್ಘಾವಧಿಯ (2 ಮತ್ತು 3 ವರ್ಷಗಳ ಅವಧಿಯ) ಆಯ್ಕೆಗಳಿಗೆ ಲಭ್ಯವಿಲ್ಲ. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.