ವೈಯಕ್ತಿಕ ಪ್ರವೇಶ ವಯಸ್ಸು18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ. |
ಫ್ಲೋಟರ್ ಪ್ರವೇಶದ ವಯಸ್ಸು18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆದುಕೊಳ್ಳಬಹುದು. ಅವಲಂಬಿತ ಮಕ್ಕಳಿಗೆ 91 ನೇ ದಿನದಿಂದ 25 ವರ್ಷಗಳವರೆಗೆ ಕವರ್ ನೀಡಲಾಗುತ್ತದೆ. |
ಪಾಲಿಸಿ ವಿಧಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆದುಕೊಳ್ಳಬಹುದಾಗಿದೆ. |
ಪಾಲಿಸಿ ಅವಧಿಈ ಪಾಲಿಸಿಯನ್ನು ಒಂದು, ಎರಡು ಅಥವಾ ಮೂರು ವರ್ಷಗಳ ಅವಧಿಗೆ ಪಡೆದುಕೊಳ್ಳಬಹುದು. |
ವಿಮಾ ಮೊತ್ತಈ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತದ ಆಯ್ಕೆಗಳೆಂದರೆ ರೂ.5,00,000/-, ರೂ.10,00,000/-, ರೂ.15,00,000/-, ರೂ.20,00,000/-, ರೂ.25,00,000/-, ರೂ.50,00,000/-, ರೂ.75,00,000/-, ಮತ್ತು ರೂ.1,00,00,000/- .
|
ದೀರ್ಘಕಾಲಿಕ ಡಿಸ್ಕೌಂಟ್ಪಾಲಿಸಿ ಅವಧಿಯು ಒಂದು ವರ್ಷಕ್ಕಿಂತ ಹೆಚ್ಚಿದ್ದರೆ ಪ್ರೀಮಿಯಂನಲ್ಲಿ ಡಿಸ್ಕೌಂಟ್ ಲಭ್ಯವಿದೆ. |
ಕುಟುಂಬದ ಗಾತ್ರಫ್ಲೋಟರ್ ವಿಮಾ ಮೊತ್ತದ ಅಡಿಯಲ್ಲಿ ನೀವು ಸ್ವತಃ + ಸಂಗಾತಿ/ ಲಿವ್-ಇನ್ ಪಾಲುದಾರರು/ ಸಲಿಂಗ ಪಾಲುದಾರರು + ಅವಲಂಬಿತ ಮಕ್ಕಳನ್ನು ಸೇರಿಸಬಹುದಾಗಿದೆ. ಈ ಪಾಲಿಸಿಯು ಫ್ಲೋಟರ್ ವಿಮಾ ಮೊತ್ತದ ಅಡಿಯಲ್ಲಿ ಅಡಿಯಲ್ಲಿ 2 ವಯಸ್ಕರು + 3 ಮಕ್ಕಳ ಗರಿಷ್ಠ ಕುಟುಂಬದ ಗಾತ್ರವನ್ನು ಕವರ್ ಮಾಡುತ್ತದೆ. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 60 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 180 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಕೊಠಡಿ ಬಾಡಿಗೆಆಸ್ಪತ್ರೆಯಿಂದ ಒದಗಿಸಲಾದ ಕೊಠಡಿ (ಖಾಸಗಿ ಸಿಂಗಲ್ ಎ/ಸಿ ರೂಮ್), ಬೋರ್ಡಿಂಗ್ ಮತ್ತು ಶುಶ್ರೂಷಾ ಖರ್ಚುಗಳನ್ನು ಕವರ್ ಮಾಡುತ್ತದೆ. |
ರೋಡ್ ಆ್ಯಂಬ್ಯುಲೆನ್ಸ್ಈ ಪಾಲಿಸಿಯು ಆಸ್ಪತ್ರೆಗೆ ದಾಖಲಾಗುವಿಕೆ, ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ನಿವಾಸಕ್ಕೆ ಹೋಗಲು ತಗುಲುವ ಆ್ಯಂಬ್ಯುಲೆನ್ಸ್ ಶುಲ್ಕಗಳನ್ನು ಕವರ್ ಮಾಡುತ್ತದೆ. |
ಏರ್ ಆ್ಯಂಬ್ಯುಲೆನ್ಸ್ವಿಮೆದಾರರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಬೇಕೆನ್ನುವ ಪರಿಸ್ಥಿತಿ ಎದುರಾದರೆ, ಏರ್ ಆ್ಯಂಬ್ಯುಲೆನ್ಸ್ ಖರ್ಚುಗಳನ್ನು ಸಂಪೂರ್ಣ ಪಾಲಿಸಿ ಅವಧಿಗೆ ವಿಮಾ ಮೊತ್ತದ 10% ವರೆಗೆ ಕವರ್ ಮಾಡುತ್ತದೆ. |
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕವರ್ ಮಾಡುತ್ತದೆ. |
ಮನೆಯಲ್ಲೇ ಚಿಕಿತ್ಸೆಮೂರು ದಿನಗಳಿಗಿಂತ ಹೆಚ್ಚಿನ ಅವಧಿಗೆ ವೈದ್ಯರ ಸಲಹೆಯ ಮೇರೆಗೆ ಆಯುಷ್ ಸೇರಿದಂತೆ ಮನೆಯಲ್ಲಿಯೇ ಚಿಕಿತ್ಸೆಗೆ ತಗಲುವ ಖರ್ಚುಗಳನ್ನು ಕವರ್ ಮಾಡುತ್ತದೆ. |
ಹೋಮ್‌ಕೇರ್ ಚಿಕಿತ್ಸೆಪಾಲಿಸಿ ವರ್ಷವೊಂದರಲ್ಲಿ ಗರಿಷ್ಠ ರೂ. 5 ಲಕ್ಷಕ್ಕೆ ಒಳಪಟ್ಟು ನಿರ್ದಿಷ್ಟ ಸ್ಥಿತಿಗಳ ಹೋಮ್‌ಕೇರ್ ಚಿಕಿತ್ಸೆಗಾಗಿ ಉಂಟಾಗುವ ವಿಮೆದಾರರ ಖರ್ಚನ್ನು ವಿಮಾ ಮೊತ್ತದ 10% ವರೆಗೆ ಕವರ್ ಮಾಡುತ್ತದೆ. |
ಮಧ್ಯಂತರ ಸೇರ್ಪಡೆನವ ವಿವಾಹಿತ ಸಂಗಾತಿ, ನವಜಾತ ಶಿಶು ಮತ್ತು/ಅಥವಾ ಕಾನೂನುಬದ್ಧವಾಗಿ ದತ್ತು ಪಡೆದ ಮಗುವನ್ನು ಪ್ರಮಾಣಬದ್ಧ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ಪಾಲಿಸಿಯಲ್ಲಿ ಸೇರಿಸಿಕೊಳ್ಳಬಹುದು. |
ನವಜಾತ ಶಿಶುವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳುನವಜಾತ ಶಿಶುವಿನ ಚಿಕಿತ್ಸಾ ಖರ್ಚನ್ನು ಹುಟ್ಟಿದ 1 ನೇ ದಿನದಿಂದ ಪಾವತಿಸಲಾಗುತ್ತದೆ ಮತ್ತು ವಿಮಾ ಮೊತ್ತದ 10% ಮಿತಿ ಮತ್ತು ಗರಿಷ್ಠ ರೂ 2 ಲಕ್ಷಗಳಕ್ಕೆ ಒಳಪಟ್ಟಿರುತ್ತದೆ. ಜನ್ಮಜಾತ ಆಂತರಿಕ ಕಾಯಿಲೆ / ದೋಷಗಳಿಗೆ ಸಂಬಂಧಿಸಿದ ಚಿಕಿತ್ಸೆಗೆ ಇದು ಅನ್ವಯಿಸುವುದಿಲ್ಲ. |
ಆಯುಷ್ ಚಿಕಿತ್ಸೆಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಔಷಧಪದ್ಧತಿಗಳ ಅಡಿಯಲ್ಲಿ ಚಿಕಿತ್ಸೆಗಾಗಿ ತಗಲುವ ಖರ್ಚನ್ನು ಕವರ್ ಮಾಡುತ್ತದೆ. |
ಆಧುನಿಕ ಚಿಕಿತ್ಸೆಮಿದುಳಿನ ಆಳ ಪ್ರಚೋದನೆ, ಇಂಟ್ರಾ ವಿಟ್ರೆಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ಉಂಟಾಗುವ ಖರ್ಚನ್ನು ವಿಮಾ ಮೊತ್ತದವರೆಗೆ ಕವರ್ ಮಾಡುತ್ತದೆ. |
ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್ಪಾಲಿಸಿ ಅವಧಿಯಲ್ಲಿ ವಿಮಾ ಮೊತ್ತದ ಭಾಗಶಃ ಅಥವಾ ಪೂರ್ಣ ಬಳಕೆಯ ಮೇಲೆ, ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಒಮ್ಮೆ ರಿಸ್ಟೋರ್ ಮಾಡಲಾಗುತ್ತದೆ ಮತ್ತು ಅದನ್ನು ಎಲ್ಲಾ ಕ್ಲೈಮ್‌ಗಳಿಗೆ ಬಳಸಿಕೊಳ್ಳಬಹುದು. |
ಸಂಚಿತ ಬೋನಸ್ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 100% ಗೆ ಒಳಪಟ್ಟು ವಿಮಾ ಮೊತ್ತದ 50% ನಷ್ಟು ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ. |
ಮೌಲ್ಯವರ್ಧಿತ ಸೇವೆಗಳುಈ ಪಾಲಿಸಿಯು ಸ್ಟಾರ್ ಟೆಲಿ-ಹೆಲ್ತ್ ಸೇವೆಗಳು, ವೈದ್ಯಕೀಯ ಪ್ರಾಶಸ್ತ್ಯದ ಸೇವೆ, ಡಿಜಿಟಲ್ ಹೆಲ್ತ್ ವಾಲ್ಟ್, ಸ್ವಾಸ್ಥ್ಯ ವಿಷಯ, ಪೋಸ್ಟ್ ಆಪರೇಟಿವ್ ಕೇರ್, ನೆಟ್‌ವರ್ಕ್ ಪೂರೈಕೆದಾರರಿಂದ ಡಿಸ್ಕೌಂಟ್‌ಗಳು ಸೇರಿದಂತೆ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುತ್ತದೆ. |
ಸಂಚಿತ ಬೋನಸ್ ಬೂಸ್ಟರ್ಈ ಐಚ್ಛಿಕ ಕವರ್ ವಿಮೆದಾರರಿಗೆ ವಿಮಾ ಮೊತ್ತದ ಗರಿಷ್ಠ 600% ಗೆ ಒಳಪಟ್ಟು ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಿಮಾ ಮೊತ್ತದ 50% ನಷ್ಟು ಹೆಚ್ಚುವರಿ ಸಂಚಿತ ಬೋನಸ್ ಅನ್ನು ಪಡೆಯಲು ಅರ್ಹತೆ ನೀಡುತ್ತದೆ. ಆಯ್ಕೆ ಮಾಡಿದ ವಿಮಾ ಮೊತ್ತವು ರೂ.10 ಲಕ್ಷ ಮತ್ತು ಹೆಚ್ಚಿನದಾಗಿದ್ದರೆ ಇದು ಅನ್ವಯಿಸುತ್ತದೆ. |
ಕೊಠಡಿ ವರ್ಗದ ಮಾರ್ಪಾಡುಈ ಕವರ್ ವಿಮೆದಾರರಿಗೆ ಖಾಸಗಿ ಸಿಂಗಲ್ ಎ/ಸಿ ರೂಮ್‌ನಿಂದ ಯಾವುದೇ ರೂಮ್ / ಹಂಚಿಕೊಂಡ ವಸತಿಗೆ ಕೊಠಡಿ ವರ್ಗವನ್ನು ಹೆಚ್ಚಿಸಲು/ಕಡಿಮೆ ಮಾಡಲು ಅರ್ಹತೆ ನೀಡುತ್ತದೆ. |
ಪೂರ್ವಾಸ್ತಿತ್ವದ ಕಾಯಿಲೆಗಳ ವೇಟಿಂಗ್ ಅವಧಿಯ ಕಡಿತಈ ಐಚ್ಛಿಕ ಕವರ್‌ನ ಮೂಲಕ, ವಿಮೆದಾರರು ಪೂರ್ವಾಸ್ತಿತ್ವದ ಕಾಯಿಲೆಗಳ ವೇಟಿಂಗ್ ಅವಧಿಯನ್ನು 48 ತಿಂಗಳುಗಳಿಂದ 36/24/12 ತಿಂಗಳುಗಳಿಗೆ ಕಡಿಮೆ ಮಾಡಬಹುದು. ಇದು ಈ ಪಾಲಿಸಿಯ ಮೊದಲ ಖರೀದಿಗೆ ಮಾತ್ರ ಅನ್ವಯಿಸುತ್ತದೆ. |
ವೈದ್ಯಕೀಯೇತರ ಐಟಂಗಳಿಗೆ ಕವರೇಜ್ (ಉಪಭೋಗ್ಯ ವಸ್ತುಗಳು)ಪಾಲಿಸಿಯ ಅಡಿಯಲ್ಲಿ ಒಳರೋಗಿ / ಡೇ ಕೇರ್ ಚಿಕಿತ್ಸೆಗಾಗಿ ಕ್ಲೈಮ್ ಸ್ವೀಕಾರಾರ್ಹವಾಗಿದ್ದರೆ ಪಾಲಿಸಿ ವಿವರಪಟ್ಟಿಯ ಪಟ್ಟಿ I ರಲ್ಲಿ ನಿರ್ದಿಷ್ಟಪಡಿಸಿದ ವೈದ್ಯಕೀಯೇತರ ಐಟಂಗಳಿಗೆ ಕವರೇಜ್ ಅನ್ನು ಪಾವತಿಸಲಾಗುತ್ತದೆ. |
ವಿಮಾ ಮೊತ್ತದ ಅನಿಯಮಿತ ಆಟೋಮ್ಯಾಟಿಕ್ ರಿಸ್ಟೋರೇಷನ್ವಿಮಾ ಮೊತ್ತದ ಭಾಗಶಃ ಅಥವಾ ಪೂರ್ಣ ಬಳಕೆಯ ನಂತರ, ವಿಮಾ ಮೊತ್ತದ 100% ಅನ್ನು ಅನಿಯಮಿತ ಸಂಖ್ಯೆಯ ಬಾರಿ ಆಟೋಮ್ಯಾಟಿಕ್ ಆಗಿ ರಿಸ್ಟೋರ್ ಮಾಡಲಾಗುತ್ತದೆ, ಅದನ್ನು ನಂತರದ ಆಸ್ಪತ್ರೆಗೆ ದಾಖಲಾಗುವಿಕೆಗೆ ಬಳಸಿಕೊಳ್ಳಬಹುದು. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.