ವಿಶೇಷವಾಗಿ ವ್ಯಕ್ತಿಗಾಗಿ ರೂಪಿಸಲಾದ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನೊಂದಿಗೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ
ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್ ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ ಕವರೇಜ್ ಅನ್ನು ಒದಗಿಸುವ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಭಾರತದಂತಹ ವ್ಯಾಪಕವಾದ ಆರೋಗ್ಯ ರಕ್ಷಣೆಯ ಅವಶ್ಯಕತೆಗಳು ಎದುರಾಗುವ ರಾಷ್ಟ್ರದಲ್ಲಿ, ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ನಿಮ್ಮನ್ನು ಆರ್ಥಿಕವಾಗಿ ಸಿದ್ಧಗೊಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್ ಪೂರ್ವನಿಶ್ಚಯವಿಲ್ಲದ ವೈದ್ಯಕೀಯ ಖರ್ಚುಗಳ ವಿರುದ್ಧ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ.
ಆಟೋಮ್ಯಾಟಿಕ್ ರಿಸ್ಟೋರೇಷನ್: ಬೇಸಿಕ್ ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಒಂದು ಬಾರಿ ರಿಸ್ಟೋರ್ ಮಾಡಲಾಗುತ್ತದೆ
ಬೈ-ಬ್ಯಾಕ್ PED: ಪೂರ್ವಾಸ್ತಿತ್ವದ ಕಾಯಿಲೆಗಳಿಗೆ ಸಂಬಂಧಿಸಿದಂತೆ ವೇಟಿಂಗ್ ಅವಧಿಯನ್ನು ಕಡಿಮೆ ಮಾಡಬಹುದಾದ ಐಚ್ಛಿಕ ಕವರ್
ಮಧ್ಯಂತರ ಸೇರ್ಪಡೆ: ನವ ವಿವಾಹಿತ ಸಂಗಾತಿ ಮತ್ತು ನವಜಾತ ಶಿಶುವನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯಲ್ಲಿ ಕವರ್ ಮಾಡಬಹುದಾಗಿದೆ
ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ಮಧ್ಯಾವಧಿ ಸೇರ್ಪಡೆ: ಪಾಲಿಸಿ ವರ್ಷದ ಮಧ್ಯದಲ್ಲಿ ಹೊಸದಾಗಿ ಮದುವೆಯಾದ ಅಥವಾ ವಿವಾಹಿತ ಸಂಗಾತಿಯನ್ನು, ಕಾನೂನುಬದ್ಧವಾಗಿ ದತ್ತು ಪಡೆದ ಮಗು ಮತ್ತು ನವಜಾತ ಶಿಶುವನ್ನು ಸೇರಿಸಲು ನಿಮಗೆ ಅರ್ಹತೆ ನೀಡಲಾಗುತ್ತದೆ
ಲಾಯಲ್ಟಿ ರಿಯಾಯಿತಿ: 36 ವರ್ಷಕ್ಕಿಂತ ಮೊದಲು ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು 40 ವರ್ಷ ಮೀರಿದ ನಂತರ ಅದನ್ನು ನಿರಂತರವಾಗಿ ನವೀಕರಿಸಲು 10% ರಿಯಾಯಿತಿ ನೀಡಲಾಗುತ್ತದೆ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ವಿಮಾ ಇನ್ಶೂರೆನ್ಸ್ ಸ್ಕ್ರೀನಿಂಗ್ ಅಗತ್ಯವಿಲ್ಲ
ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ಆಯುಷ್ ಚಿಕಿತ್ಸೆ: ಆಯುಷ್ ಚಿಕಿತ್ಸೆಗಳಿಗೆ ಆಸ್ಪತ್ರೆಗೆ ದಾಖಲಾತಿ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಗ್ರಾಮೀಣ ರಿಯಾಯಿತಿ: ಗ್ರಾಮೀಣ ಜನರಿಗೆ ಪ್ರೀಮಿಯಂನಲ್ಲಿ 20% ರಿಯಾಯಿತಿ
ಆಧುನಿಕ ಚಿಕಿತ್ಸೆಗಳು: ಆಧುನಿಕ ಚಿಕಿತ್ಸೆಗಳಿಗೆವಿಮಾ ಮೊತ್ತದ 50% ವರೆಗೆ ಕವರ್ ಪಡೆಯಿರಿ
ಆಯುಷ್ ಕವರ್: ಆಯುಷ್ ಚಿಕಿತ್ಸೆಗಳಿಗೆ ಆಸ್ಪತ್ರೆಯ ದಾಖಲಾತಿ ವೆಚ್ಚವನ್ನು ಒಳಗೊಂಡಿರುತ್ತದೆ
ವಿಶೇಷ ಕವರ್: ಕ್ಯಾನ್ಸರ್ ಇರುವಿಕೆಯು ಪತ್ತೆಯಾದ ಜನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿ
ವ್ಯಾಪಕ ಕವರ್: ಕ್ಯಾನ್ಸರ್ ಜೊತೆಗೆ, ಇದು ಕ್ಯಾನ್ಸರ್‌ಗೆ ಸಂಬಂಧಿಸದ ನಿಯಮಿತ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಸಹ ಒಳಗೊಂಡಿರುತ್ತದೆ
ಇಡಿಗಂಟಿನ ಕವರ್: ಐಚ್ಛಿಕ ರಕ್ಷಣೆಯಾಗಿ, ಕ್ಯಾನ್ಸರ್, ಮೆಟಾಸ್ಟಾಸಿಸ್ ಮತ್ತು/ಅಥವಾ ಮೊದಲು ಪತ್ತೆಯಾದ ಕ್ಯಾನ್ಸರ್‌ಗೆ ಸಂಬಂಧಿಸದ ಎರಡನೇ ಮಾರಣಾಂತಿಕ ಕ್ಯಾನ್ಸರ್‌ನ ಪುನರಾವರ್ತನೆಗಾಗಿ ಒಂದು ಇಡಿಗಂಟನ್ನು ಒದಗಿಸಲಾಗುತ್ತದೆ.
ಕಾರ್ಡಿಯಾಕ್ ಕವರ್: 10 ಮತ್ತು 65 ವರ್ಷ ವಯಸ್ಸಿನ ಹೃದಯ ಸಂಬಂಧಿತ ಕಾಯಿಲೆಗಳಿಂದ ಗುರುತಿಸಲ್ಪಟ್ಟ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುತ್ತದೆ
ನಾನ್-ಕಾರ್ಡಿಯಾಕ್ ಕವರ್: ಹೃದಯಕ್ಕೆ ಸಂಬಂಧಪಡದ ಕಾಯಿಲೆಗಳು ಮತ್ತು ಅಪಘಾತಗಳನ್ನು ಸಹ ಒಳಗೊಂಡಿರುತ್ತದೆ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ಗ್ರಾಮೀಣ ಕವರ್: ಗ್ರಾಮೀಣ ಜನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ಕಡಿಮೆ ಕಾಯುವಿಕೆ ಅವಧಿ: ಪಿಇಡಿ ಮತ್ತು ನಿರ್ದಿಷ್ಟ ರೋಗಗಳು ಕೇವಲ 6 ತಿಂಗಳ ನಂತರ ಕವರ್ ಆಗುತ್ತವೆ
ಟಾಪ್-ಅಪ್ ಪ್ಲಾನ್: ಕೈಗೆಟುಕುವ ಪ್ರೀಮಿಯಂನಲ್ಲಿ ವರ್ಧಿತ ಆರೋಗ್ಯ ಕವರೇಜ್ ಪಡೆಯಿರಿ
ರಿಚಾರ್ಜ್ ಪ್ರಯೋಜನ: ವಿಮಾ ಮೊತ್ತವು ಮುಗಿದಾಗ ಯಾವುದೇ ಹೆಚ್ಚುವರಿ ಖರ್ಚಿಲ್ಲದೇ ಹೆಚ್ಚುವರಿ ಪರಿಹಾರ ಮೊತ್ತವನ್ನು ಪಡೆಯಿರಿ
ದೀರ್ಘ-ಕಾಲಿಕ ರಿಯಾಯಿತಿ: 2 ವರ್ಷಗಳ ಅವಧಿಯ ಪಾಲಿಸಿಯನ್ನು ಆಯ್ಕೆ ಮಾಡಿದರೆ, 5% ಪ್ರೀಮಿಯಂ ರಿಯಾಯಿತಿ ಲಭ್ಯವಿರುತ್ತದೆ
ಕುಟುಂಬದ ಗಾತ್ರ: ಸ್ವಯಂ, ಸಂಗಾತಿ, ಪೋಷಕರು ಮತ್ತು ಅತ್ತೆ-ಮಾವ ಸೇರಿದಂತೆ 6 ವಯಸ್ಕರು ಮತ್ತು 3 ಮಕ್ಕಳನ್ನು ಒಳಗೊಂಡಿದೆ
ಆಟೋಮ್ಯಾಟಿಕ್ ರಿಸ್ಟೋರೇಷನ್: ವಿಮಾ ಮೊತ್ತವನ್ನು ಎಷ್ಟು ಬಾರಿಯಾದರೂ ರಿಸ್ಟೋರ್ ಮಾಡಲಾಗುತ್ತದೆ ಮತ್ತು ಪ್ರತಿ ಬಾರಿ ಗರಿಷ್ಠ 100% ವರೆಗೆ
ದೀರ್ಘಾವಧಿಯ ರಿಯಾಯಿತಿ: ಪಾಲಿಸಿಯನ್ನು 2 ಅಥವಾ 3 ವರ್ಷಗಳ ಅವಧಿಗೆ ಆರಿಸಿಕೊಂಡರೆ, ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿದೆ
ಹೊರರೋಗಿ ಕವರ್: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಮಾಲೋಚನೆ ವೆಚ್ಚಗಳನ್ನು ಇದು ಒಳಗೊಂಡಿದೆ
ರೋಗನಿರ್ಣಯ ಮತ್ತು ಔಷಧಾಲಯ: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಇವುಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ
ದಂತ ಮತ್ತು ನೇತ್ರ ಚಿಕಿತ್ಸೆ: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಇವುಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ
ವಿಶಿಷ್ಟ ಕವರ್: ಮಹಿಳೆಯರಿಗೆ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಪಾಲಿಸಿ
ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ಡೆಲಿವರಿ ವೆಚ್ಚಗಳು: ಸಾಮಾನ್ಯ ಮತ್ತು ಸಿ-ಸೆಕ್ಷನ್ ಡೆಲಿವರಿ ವೆಚ್ಚಗಳು (ಪ್ರಸವಪೂರ್ವ ಮತ್ತು ನಂತರದ ವೆಚ್ಚ ಸೇರಿದಂತೆ)
ಆಸ್ಪತ್ರೆ ದಾಖಲಾತಿಗೆ ಇಡಿಗಂಟಿನ ಪ್ರಯೋಜನ: ಆಸ್ಪತ್ರೆಗೆ ದಾಖಲಾದಾಗ ಸಾಂದರ್ಭಿಕ ವೆಚ್ಚಗಳಿಗೆ ದೈನಂದಿನ ನಗದು ಲಾಭವನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ
ಐಸಿಯು ಆಸ್ಪತ್ರೆ ನಗದು: ಆಸ್ಪತ್ರೆಯ ಐಸಿಯುನಲ್ಲಿ ದಾಖಲಾದ ಸಂದರ್ಭದಲ್ಲಿ ಆಸ್ಪತ್ರೆಯ ನಗದು ಮೊತ್ತದ (ದಿನಕ್ಕೆ) 200% ವರೆಗೆ ಪಡೆಯಬಹುದಾಗಿದೆ
ಅಪಘಾತ ಆಸ್ಪತ್ರೆ ನಗದು: ಅಪಘಾತಗಳ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ ಪ್ರತಿ 24 ಗಂಟೆಗಳಿಗೊಮ್ಮೆ ಆಸ್ಪತ್ರೆಯ ನಗದು ಮೊತ್ತದ 150% ವರೆಗೆ ಪಡೆಯಿರಿ
ರಿಸ್ಟೋರೇಷನ್ ಪ್ರಯೋಜನ: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾದಾರರ ಮೂಲ ಮೊತ್ತದ 200% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ರಸ್ತೆ ಅಪಘಾತ: ರಸ್ತೆ ಅಪಘಾತದ ಸಂದರ್ಭದಲ್ಲಿ ವಿಮಾ ಮೊತ್ತವನ್ನು ಹೆಚ್ಚಿಸಲಾಗಿದೆ
ದೀರ್ಘಾವಧಿಯ ರಿಯಾಯಿತಿ: ಪಾಲಿಸಿಯನ್ನು 2 ಅಥವಾ 3 ವರ್ಷಗಳ ಅವಧಿಗೆ ಆರಿಸಿಕೊಂಡರೆ, ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿದೆ
ವಿಶೇಷ ಪಾಲಿಸಿ: ಯಾವುದೇ ಗರಿಷ್ಠ ವಯಸ್ಸಿನ ಮಿತಿಯಿಲ್ಲದೆ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ
ಇನ್ಶೂರೆನ್ಸ್ ಪೂರ್ವದ ತಪಾಸಣೆ: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವದ ತಪಾಸಣೆ ಅಗತ್ಯವಾಗಿಲ್ಲ
ಆರೋಗ್ಯ ತಪಾಸಣೆ ಡಿಸ್ಕೌಂಟ್: ಪಟ್ಟಿ ಮಾಡಲಾದ ಆರೋಗ್ಯ ತಪಾಸಣೆ ವರದಿಗಳನ್ನು ಪಾಲಿಸಿಯ ಪ್ರಾರಂಭದಲ್ಲಿ ಸಲ್ಲಿಸಿದರೆ ಮತ್ತು ಸಲ್ಲಿಸಿದ ವರದಿಗಳಲ್ಲಿನ ತೀರ್ಮಾನಗಳಿಗೆ ಒಳಪಟ್ಟಿದ್ದರೆ 10% ಪ್ರೀಮಿಯಂ ಡಿಸ್ಕೌಂಟ್ ಲಭ್ಯವಿದೆ
ಹಿರಿಯರಿಗಾಗಿ ಕವರ್: ಜೀವನ ಪರ್ಯಂತ ನವೀಕರಣಗಳೊಂದಿಗೆ 60 - 75 ವರ್ಷ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ
ಹೊರರೋಗಿ ಕವರ್: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಯಾಗಿ ವೈದ್ಯಕೀಯ ಸಮಾಲೋಚನೆಗಳಿಗೆ ಕವರ್ ಪಡೆಯಿರಿ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ಮಧುಮೇಹದ ಕವರ್: ಟೈಪ್-1 ಮತ್ತು ಟೈಪ್-2 ಮಧುಮೇಹ ಕಂಡುಬಂದ ಜನರನ್ನು ಒಳಗೊಳ್ಳಲು ವಿನ್ಯಾಸಗೊಳಿಸಲಾಗಿದೆ
ಫ್ಯಾಮಿಲಿ ಕವರ್: ಅವರಲ್ಲಿ ಯಾರಾದರೂ ಮಧುಮೇಹಿಗಳಾಗಿದ್ದರೆ ಫ್ಲೋಟರ್ ಆಧಾರದ ಮೇಲೆ (ಸ್ವಯಂ ಮತ್ತು ಸಂಗಾತಿಯ) ಸಹ ಈ ಪಾಲಿಸಿಯನ್ನು ಪಡೆಯಬಹುದು
ಆಟೋಮ್ಯಾಟಿಕ್ ರಿಸ್ಟೋರೇಷನ್: ವೈಯಕ್ತಿಕ ಯೋಜನೆಗಾಗಿ ಪಾಲಿಸಿ ವರ್ಷದಲ್ಲಿ ಒಮ್ಮೆ ವಿಮಾ ಮೊತ್ತದ 100% ರಿಸ್ಟೋರ್ ಪಡೆಯಿರಿ
ವಿಶಾಲ ಕವರ್: ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಮತ್ತು ಹೊರರೋಗಿ ಖರ್ಚುಗಳು ಎರಡಕ್ಕೂ ವಿಶಾಲ ಕವರ್ ಒದಗಿಸುತ್ತದೆ
ಆಧುನಿಕ ಚಿಕಿತ್ಸೆ: ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ಡೇ ಕೇರ್ ಕಾರ್ಯವಿಧಾನಗಳಾಗಿ ಖರ್ಚುಗಳನ್ನು ಕವರ್ ಮಾಡುತ್ತದೆ
ಹೊರರೋಗಿ ಪ್ರಯೋಜನ: ಯಾವುದೇ ನೆಟ್‌ವರ್ಕ್ ಮಾಡಲಾದ ಸೌಲಭ್ಯದಲ್ಲಿ ಹೊರರೋಗಿ ಖರ್ಚುಗಳನ್ನು ಕವರ್ ಮಾಡುತ್ತದೆ
ವಿಶಿಷ್ಟ ಪಾಲಿಸಿ: ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅಥವಾ/ಮತ್ತು HIV/AIDS ಇರುವ ವ್ಯಕ್ತಿಗಳಿಗೆ ಕವರ್ ನೀಡಲು ಒದಗಿಸಲು ವಿನ್ಯಾಸಗೊಳಿಸಲಾಗಿದೆ
ಆಯುಷ್ ಕವರ್: ಆಯುಷ್ ಚಿಕಿತ್ಸೆಗಾಗಿ ಆಸ್ಪತ್ರೆಯ ವೆಚ್ಚಗಳು ವಿಮಾ ಮೊತ್ತದ 50% ವರೆಗೆ ಕವರ್ ಮಾಡಲಾಗುತ್ತದೆ
ವಿಮಾ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಪಾಲಿಸಿ ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ
ವರ್ಧಿತ ಕವರ್: ಕೈಗೆಟುಕುವ ಪ್ರೀಮಿಯಂನಲ್ಲಿ ನಿಮ್ಮ ಮೂಲ ಪಾಲಿಸಿಯ ವರ್ಧಿತ ಕವರೇಜ್ ಮಿತಿಗಳನ್ನು ಪಡೆಯಿರಿ
ವೈದ್ಯಕೀಯೇತರ ಐಟಂಗಳ ಕವರ್: ನಿಮ್ಮ ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದಲ್ಲಿ ವೈದ್ಯಕೀಯೇತರ ಐಟಂಗಳಿಗೆ ಕವರೇಜ್ ಪಡೆಯಿರಿ
ಆಯುಷ್ ಚಿಕಿತ್ಸೆ: ಮೂಲ ಪಾಲಿಸಿಯ ವಿಮಾ ಮೊತ್ತದವರೆಗೆ ಆಯುಷ್ ಚಿಕಿತ್ಸೆಗಳಿಗೆ ಕವರ್ ಪಡೆಯಿರಿ
ವಿಶೇಷ ಕವರ್: ಹೃದಯ ಸಂಬಂಧಿ ಕಾಯಿಲೆ ಅಥವಾ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿ
ಇನ್ಶೂರೆನ್ಸ್ ಪೂರ್ವದ ತಪಾಸಣೆ: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವದ ತಪಾಸಣೆ ಅಗತ್ಯವಾಗಿಲ್ಲ
ಹೃದಯ ಸಂಬಂಧಿ ಸಾಧನಗಳು: ಹೃದಯ ಸಂಬಂಧಿ ಸಾಧನಗಳಿಗೆ ವಿಮಾ ಮೊತ್ತದ 50% ವರೆಗೆ ಪಡೆಯಿರಿ
ಫ್ಯಾಮಿಲಿ ಅಥವಾ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗ ಳಿಗಿಂತ ಭಿನ್ನವಾಗಿ, ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ಕುಟುಂಬದ ಪ್ರತಿ ಸದಸ್ಯರಿಗೆ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.
ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್‌ನ ಕೆಲವು ಫೀಚರ್‌ಗಳು ಈ ಕೆಳಕಂಡಂತಿವೆ:
ಸ್ಟಾರ್ ಹೆಲ್ತ್‌ನ ಇಂಡಿವಿಜುಯಲ್ ಹೆಲ್ತ್ ಇನ್ಸೂರೆನ್ಸ್ ವೈಯಕ್ತಿಕ ಮೊತ್ತದ ವಿಮಾ ಆಧಾರದ ಮೇಲೆ ವ್ಯಕ್ತಿಗೆ ವೈದ್ಯಕೀಯ ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ವ್ಯಕ್ತಿಯ ಆರೋಗ್ಯದ ಅಗತ್ಯಗಳಿಗೆ ಅನುಗುಣವಾಗಿ ಪ್ಲ್ಯಾನ್ ಅನ್ನು ವೈಯುಕ್ತೀಕರಿಸಲು ನಿಮಗೆ ಅವಕಾಶವನ್ನು ನೀಡುತ್ತದೆ (ನಿಮಗಾಗಿ, ನಿಮ್ಮ ಮಕ್ಕಳು, ನಿಮ್ಮ ಸಂಗಾತಿಯ ಅಥವಾ ನಿಮ್ಮ ವಯಸ್ಸಾದ ಪೋಷಕರಿಗಾಗಿ) ಆದರೆ ಇಡೀ ಕುಟುಂಬಕ್ಕೆ ಸಂಯೋಜಿಸಲಾಗುವುದಿಲ್ಲ.
ಸ್ಟಾರ್ ಹೆಲ್ತ್ ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಲು 5 ಸರಳ ಹಂತಗಳು ಹೀಗಿವೆ:
ಹಂತ 1: ಸ್ಟಾರ್ ಹೆಲ್ತ್ ಇನ್ಶೂರೆ ನ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಪುಟದ ಮೇಲಿನ ಬಲ ಮೂಲೆಗೆ ಹೋಗಿ ಮತ್ತು 'ಈಗ ಖರೀದಿಸಿ' ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ 3: ಹೆಸರು, ಇಮೇಲ್ ಐಡಿ, ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆಯಂತಹ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಹಂತ 4: ನಿಮ್ಮ ಅಗತ್ಯಗಳನ್ನು ಪೂರೈಸುವ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆಮಾಡಿ ಮತ್ತು ಪ್ರೀಮಿಯಂ ಅನ್ನು ಪಾವತಿಸಿ.
ಹಂತ 5: ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ನಾವು ಪಾಲಿಸಿ ದಾಖಲೆಗಳನ್ನು ಕಳುಹಿಸುತ್ತೇವೆ.
ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಸ್ವಾಭಾವಿಕ ಅಥವಾ ಯಾದೃಚ್ಛಿಕವಾಗಿರಬಾರದು. ಉತ್ತಮ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನೀವು ಬಯಸಿದಂತಹ ಪ್ರಯೋಜನಗಳನ್ನು ಪಡೆದುಕೊಳ್ಳಲು ನಿಮ್ಮ ಅವಶ್ಯಕತೆಗಳು ಮತ್ತು ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್‌ನ ಮೂಲಭೂತ ಅಂಶಗಳನ್ನು ನೀವು ಮೊದಲು ಅರ್ಥಮಾಡಿಕೊಳ್ಳಬೇಕು. ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಪರಿಗಣಿಸಬೇಕಾದ ಪ್ರಮುಖ ಅಂಶಗಳ ಪಟ್ಟಿ ಹೀಗಿದೆ:
ಭಾರತದಲ್ಲಿನ ಇಂಡಿವಿಜುಯಲ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ವಿವಿಧ ಆರೋಗ್ಯ ಸೇವೆಗಳು ಮತ್ತು ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುತ್ತವೆ. ಇದು ಸಾಮಾನ್ಯವಾಗಿ ವಿಮೆಗಾರರಿಂದ ವಿಮೆಗಾರರಿಗೆ ಬದಲಾಗುತ್ತದೆ. ಭಾರತದಲ್ಲಿನ ಇಂಡಿವಿಜುಯಲ್ ಪ್ಲ್ಯಾನ್‌ಗಳಿಗೆ ಸಾಮಾನ್ಯವಾಗಿ ಹೆಲ್ತ್ ಇನ್ಶೂರೆನ್ಸ್‌ನ ಅಡಿಯಲ್ಲಿ ಕವರ್ ಮಾಡಲಾಗುವ ಕೆಲವು ಸಾಮಾನ್ಯ ಅಂಶಗಳು ಹೀಗಿವೆ:
ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕವು ಇಡೀ ಜಗತ್ತನ್ನು ಜಾಗರೂಕವಾಗುವಂತೆ ಮಾಡಿದೆ ಮತ್ತು ವೈದ್ಯಕೀಯ ತುರ್ತುಸ್ಥಿತಿಗಳು ಅನಿರೀಕ್ಷಿತವಾಗಿವೆ ಮತ್ತು ನಿಭಾಯಿಸಲು ಕಠಿಣವಾದ ಆರ್ಥಿಕ ಕ್ರಾಂತಿಯನ್ನು ಉಂಟುಮಾಡಬಹುದು. ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನ ಪ್ರಾಮುಖ್ಯತೆಯು ಜನರಿಗೆ ಹೆಚ್ಚುತ್ತಿರುವ ವೈದ್ಯಕೀಯ ಖರ್ಚುಗಳಿಂದ ಅರ್ಥವಾಗಲಾರಂಭಿಸಿದೆ. ಹಾಗೆಯೇ, ಉತ್ತಮ ವೈದ್ಯಕೀಯ ಸೌಲಭ್ಯ ಮತ್ತು ಆಸ್ಪತ್ರೆಗೆ ದಾಖಲಾಗುವಿಕೆಯು ಅನೇಕರಿಗೆ ಆರ್ಥಿಕ ಹೊರೆಯಾಗಿದೆ. ಆದ್ದರಿಂದ, ಇಂತಹ ಸಮಯದಲ್ಲಿ ಹೆಚ್ಚಿನ ದೀರ್ಘಾಕಲಿಕ ರಕ್ಷಣೆಯನ್ನು ಒದಗಿಸುವ ಹೆಲ್ತ್ ಇನ್ಶೂರೆನ್ಸ್‌ನ ಪ್ರಯೋಜನಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ನಿಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಲು ಸಾಧ್ಯವಾಗುವಂತಹ ಆರ್ಥಿಕ ಭರವಸೆಯನ್ನು ಹೊಂದಿದ್ದರೂ ಸಹ, ವೈದ್ಯಕೀಯ ಹಣದುಬ್ಬರವನ್ನು ಹಿಮ್ಮೆಟ್ಟಿಸಲು ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅತ್ಯಂತ ಉಪಯುಕ್ತವಾಗಿದೆ.
ನೀವು ಇಂದು ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಪಡೆಯಲು ಶಿಫಾರಸು ಮಾಡಬಹುದಾದ 5 ಕಾರಣಗಳು ಇಲ್ಲಿವೆ:
ಮಧುಮೇಹ, ಸ್ಥೂಲಕಾಯ, ಉಸಿರಾಟದ ಸಮಸ್ಯೆಗಳು, ಹೃದ್ರೋಗಗಳಂತಹ ಜೀವನಶೈಲಿ ರೋಗಗಳು ವಿಶೇಷವಾಗಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೆಚ್ಚುತ್ತಿವೆ. ಆರೋಗ್ಯಕರ ಜೀವನಶೈಲಿಯ ಕೊರತೆ, ಒತ್ತಡ, ಮಾಲಿನ್ಯ, ಅಶಿಸ್ತಿನ ಜೀವನ ಕ್ರಮ, ಇಂತಹ ತೊಡಕುಗಳಿಗೆ ಕಾರಣವಾಗಬಹುದು. ನೀವು ಮುನ್ನೆಚ್ಚರಿಕೆ ಕ್ರಮಗಳನ್ನು ಹೊಂದಿದ್ದರೂ ಸಹ ಹಠಾತ್ ಆಗಿ ಬರುವ ಆಸ್ಪತ್ರೆ ವೆಚ್ಚಗಳನ್ನು ಭರಿಸಲು, ದುರದೃಷ್ಟಕರ ಘಟನೆಯನ್ನು ಎದುರಿಸಲು ಕಷ್ಟಕರವಾಗಿರುತ್ತದೆ. ಆದ್ದರಿಂದ ನಿಯಮಿತ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುವ ಮೆಡಿಕ್ಲೈಮ್ ಪಾಲಿಸಿಯಲ್ಲಿ ಹೂಡಿಕೆ ಮಾಡುವುದು ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು ಕಿಕ್-ಸ್ಟಾರ್ಟ್ ಆಗಿರಬಹುದು. ಇದು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ.
ನೀವು ಹೆಚ್ಚು ಪ್ರಯೋಜನಕಾರಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ದುಕೊಂಡಾಗ, ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವ ಇನ್ಶೂರೆನ್ಸ್ ಪ್ಲ್ಯಾನ್‌ನೊಂದಿಗೆ ಇಡೀ ಕುಟುಂಬವನ್ನು ಸುರಕ್ಷಿತವಾಗಿರಿಸುವ ಆಯ್ಕೆಯನ್ನು ನೀವು ಆಯ್ದುಕೊಳ್ಳಬೇಕು (ಅಂದರೆ) ನೀವು ಸೂಕ್ತವಾದ ಮೆಡಿಕಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಉತ್ತಮವಾದ ಮತ್ತು ಸುಧಾರಿತ ಚಿಕಿತ್ಸೆಯನ್ನು ಪಡೆಯುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಟಾಪ್-ಅಪ್ ಪ್ಲ್ಯಾನ್‌ನೊಂದಿಗಿನ ಬೇಸಿಕ್ ಪ್ಲ್ಯಾನ್ ಸೂಕ್ತವಾಗಿರುತ್ತದೆ. ಅಲ್ಲದೆ, ನೀವು ಗರಿಷ್ಠ ಪ್ರಯೋಜನವನ್ನು ಪಡೆಯುವ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು ಹೆಲ್ತ್ ಇನ್ಶೂರೆನ್ಸ್ ಕಂಪನಿಯು ಯಾವಾಗಲೂ ವೃತ್ತಿಪರ ಸಲಹೆಯನ್ನು ನೀಡುತ್ತದೆ.
ಚಿಕಿತ್ಸೆಯ ವೆಚ್ಚದ ಹೊರತಾಗಿ, ನಿಮ್ಮ ವೈದ್ಯಕೀಯ ಬಿಲ್ ಆಸ್ಪತ್ರೆಗೆ ದಾಖಲಾಗುವ ಮೊದಲಿನ ಮತ್ತು ನಂತರದ ಪರಿಸ್ಥಿತಿಗಳ ವೆಚ್ಚವನ್ನು ಒಳಗೊಂಡಿರುತ್ತದೆ. ವೈದ್ಯರ ಜೊತೆಗಿನ ಸಮಾಲೋಚನೆ, ರೋಗನಿರ್ಣಯ ಪರೀಕ್ಷೆಗಳು, ಆಂಬ್ಯುಲೆನ್ಸ್ ಶುಲ್ಕಗಳು, ಆಪರೇಷನ್ ಥಿಯೇಟರ್ ವೆಚ್ಚಗಳು, ಔಷಧಿಗಳು, ಕೊಠಡಿ ಬಾಡಿಗೆ ಇತ್ಯಾದಿಗಳ ವೆಚ್ಚಗಳು ಏಕಕಾಲದಲ್ಲಿ ಅಧಿಕಗೊಳ್ಳುತ್ತಿವೆ. ನೀವು ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲವಾದಲ್ಲಿ ಇವೆಲ್ಲವೂ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ಪ್ರತಿ ವರ್ಷ ನಿಮ್ಮ ಕೈಗೆಟಕುವ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ, ಗುಣಮಟ್ಟದ ಚಿಕಿತ್ಸೆಯನ್ನು ಆಯ್ಕೆ ಮಾಡುವಾಗ ನೀವು ವೈದ್ಯಕೀಯ ಹಣದುಬ್ಬರದ ಹೊರೆಯನ್ನು ಕಡಿಮೆಗೊಳಿಸಿಕೊಳ್ಳಬಹುದು.
ಅನಿರೀಕ್ಷಿತ ಅನಾರೋಗ್ಯವು ಮಾನಸಿಕ ಒತ್ತಡಕ್ಕೆ ಕಾರಣವಾದರೆ, ನೀವು ಯೋಚಿಸಬೇಕಾದ ಇನ್ನೊಂದು ಅಂಶವಿದೆ ಅದು- ವೆಚ್ಚಗಳು. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೂಲಕ, ನಿಮ್ಮ ಅಪಾಯದ ಜವಾಬ್ದಾರಿಯನ್ನು ನೀವು ಇನ್ಶೂರೆನ್ಸ್ ಕಂಪನಿಗೆ ವರ್ಗಾಯಿಸುತ್ತಿದ್ದೀರಿ ಆದರೆ ವಿಮಾದಾರರು ಆದರೆ ವಿಮಾದಾರರು ಅವರ ವೈದ್ಯಕೀಯ ವೆಚ್ಚಗಳಿಗೆ ಸಹಾಯ ಮಾಡಲು ಜನರ ಒಂದು ಗುಂಪನ್ನು ನಿರ್ವಹಣೆ ಮಾಡುತ್ತಾರೆ. ಹೆಚ್ಚುವರಿಯಾಗಿ, ಹೆಲ್ತ್ ಇನ್ಶೂರೆನ್ಸ್ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಹಾಯವಾಗುತ್ತದೆ, ಇದು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಉಳಿತಾಯವನ್ನು ಕಳೆದುಕೊಳ್ಳದೆ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ನೀವು ನಿರ್ವಹಿಸಬಹುದು.
ಜೀವನದಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಹಲವಾರು ಪ್ರಯೋಜನಗಳಿಗೆ ದಾರಿ ಮಾಡಿಕೊಡುತ್ತದೆ. ನೀವು ಜೀವನದಲ್ಲಿ ಆದಷ್ಟು ಬೇಗ ಆರೋಗ್ಯ ರಕ್ಷಣೆಯನ್ನು ಖರೀದಿಸಿದಾಗ, ನೀವು ಕಡಿಮೆ ದರದಲ್ಲಿ ಯೋಜನೆಗಳನ್ನು ಪಡೆಯಬಹುದು ಮತ್ತು ಹಾಗೂ ನಿರಂತರತೆಯ ಪ್ರಯೋಜನವನ್ನು ಸಹ ಆನಂದಿಸಬಹುದು. ಹೆಚ್ಚುವರಿಯಾಗಿ ನಿಮಗೆ ಹೆಲ್ತ್ ಇನ್ಶೂರೆನ್ಸ್ ಕಂಪನಿಯಿಂದ ವ್ಯಾಪಕವಾದ ಕವರೇಜ್ ಆಯ್ಕೆಯನ್ನು ಸಹ ನೀಡಲಾಗುತ್ತದೆ.
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸರಿಯಾದ ಇನ್ಶೂರೆನ್ಸ್ ಕವರ್ ಅನ್ನು ಆಯ್ಕೆ ಮಾಡಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ:
ವೈಯಕ್ತಿಕ ಹೆಲ್ತ್ ಇನ್ಸೂರೆನ್ಸ್ ಪಾಲಿಸಿಗಳಲ್ಲಿ ವೈಯಕ್ತಿಕ ವಿಮಾಮೊತ್ತದ ಆಧಾರದ ಮೇಲೆ ಒಬ್ಬ ವ್ಯಕ್ತಿಗೆ ಮಾತ್ರ ಕವರೇಜ್ ನೀಡಲಾಗುತ್ತದೆ. ಈ ನಿರ್ದಿಷ್ಟ ವಿಮಾ ಮೊತ್ತವನ್ನು ವಿಮಾದಾರರು ತಮ್ಮ ವೈದ್ಯಕೀಯ ವೆಚ್ಚಗಳಿಗಾಗಿ ಮಾತ್ರ ಬಳಸಿಕೊಳ್ಳಬಹುದು.
ಈ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅಡಿಯಲ್ಲಿ ಪ್ರವೇಶದ ಸಮಯದಲ್ಲಿ 18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಯು ಜೀವಿತಾವಧಿಯ ನವೀಕರಣದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ವಿವಿಧ ವಿಮಾ ಮೊತ್ತದ ಆಯ್ಕೆಗಳ ಆಧಾರದ ಮೇಲೆ ವ್ಯಕ್ತಿಗೆ ರಕ್ಷಣೆ ಒದಗಿಸುತ್ತದೆ. ಯಾವುದೇ ವ್ಯಕ್ತಿಯು ತನ್ನ ಅಗತ್ಯತೆಗಳ ಆಧಾರದ ಮೇಲೆ ಕನಿಷ್ಠ 5 ಲಕ್ಷ ಮತ್ತು ಗರಿಷ್ಠ 1 ಕೋಟಿಗಳ ನಿರ್ದಿಷ್ಟ ವಿಮಾ ಮೊತ್ತದ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಕಾಂಪ್ರಹೆನ್ಸಿವ್ (ಸಮಗ್ರ) ಕವರ್ ಹೊಂದಿರುವುದು ನಿಮ್ಮ ಉಳಿತಾಯವನ್ನು ಹಾಗೆಯೇ ಇರಿಸುತ್ತದೆ ಮತ್ತು ಒಳರೋಗಿ ಆಸ್ಪತ್ರೆ ದಾಖಲಾತಿ, ತುರ್ತು ಸಾರಿಗೆ ಶುಲ್ಕಗಳು, ಡೇ-ಕೇರ್ ಚಿಕಿತ್ಸೆಗಳು, ವಾರ್ಷಿಕ ಆರೋಗ್ಯ ತಪಾಸಣೆಗಳು ಮತ್ತು ಇನ್ನಷ್ಟು ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ನೀವು ರಕ್ಷಣೆ ಪಡಯಬಹುದಾಗಿದೆ.
ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಕವರೇಜ್ ಈ ಕೆಳಗಿನಂತಿದೆ:
ಈ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಕೈಗೆಟಕುವ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು ವ್ಯಕ್ತಿಯು ತಮ್ಮ ವೈದ್ಯಕೀಯ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುವ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ. ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಹೆಲ್ತ್ ಪ್ಲ್ಯಾನ್ ವ್ಯಕ್ತಿಯನ್ನು 16 ದಿನಗಳಿಂದ 65 ವರ್ಷ ವಯಸ್ಸಿನವರೆಗೆ ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಒಳಗೊಂಡಿರುತ್ತದೆ. ಈ ಪ್ಲ್ಯಾನ್ ಗೋಲ್ಡ್ ವೇರಿಯೆಂಟ್ ಪ್ಲ್ಯಾನ್ ಅಡಿಯಲ್ಲಿಯೂ ಲಭ್ಯವಿದೆ.
ಮೆಡಿ ಕ್ಲಾಸಿಕ್ ಇನ್ಶೂರೆನ್ಸ್ ಪಾಲಿಸಿ (ವೈಯಕ್ತಿಕ) ಗೋಲ್ಡ್ ಪ್ಲ್ಯಾನ್, ರೂ.3 ಲಕ್ಷದಿಂದ ರೂ. 25 ಲಕ್ಷಗಳವರೆಗಿನ ಮೊತ್ತದ ವಿಮಾ ಆಯ್ಕೆಗಳನ್ನು ಹೊಂದಿದೆ. ಇದು ವಿಶೇಷವಾಗಿ ವಿಮಾ ಮೊತ್ತದವರೆಗೆ ಅಂಗಾಂಗ ದಾನಿಗಳ ವೆಚ್ಚಗಳನ್ನು ಒಳಗೊಂಡಿರುವುದು ಮಾತ್ರವಲ್ಲದೆ, ಆಯುಷ್ ಚಿಕಿತ್ಸೆಗಳು, ಮನೆಯಲ್ಲಿಯೇ ಚಿಕಿತ್ಸೆಗಳು, ಆಧುನಿಕ ಚಿಕಿತ್ಸೆಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ.
ಮೆಡಿ ಕ್ಲಾಸಿಕ್ ಇನ್ಶೂರೆನ್ಸ್ ಪಾಲಿಸಿ (ವೈಯಕ್ತಿಕ) ಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ ನೀಡಲಾಗುವ ಕವರೇಜ್ ಈ ಕೆಳಗಿನಂತಿದೆ:
ಮೊದಲೆಲ್ಲಾ ಹೆಲ್ತ್ ಇನ್ಶೂರೆನ್ಸ್ ವೃದ್ಧರಿಗೆ ಮಾತ್ರ ಎಂಬ ಕಲ್ಪನೆಯಿತ್ತು.
ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳೊಂದಿಗೆ, ಇಂದು ಯುವ ಪೀಳಿಗೆ ಕೂಡ ಹೆಲ್ತ್ ಇನ್ಶೂರೆನ್ಸ್‌ನ ಅಗತ್ಯವನ್ನು ಅರಿತುಕೊಳ್ಳಲು ಆರಂಭಿಸಿದ್ದಾರೆ. ಜೀವನದ ಯಾವುದೇ ಹಂತದಲ್ಲಿ ಅನಿರೀಕ್ಷಿತ ಸಂಬಂಧಗಳು ಎದುರಾಗಬಹುದು ಎಂಬುದನ್ನು ಈ ಪರಿಸ್ಥಿತಿಯು ನಮಗೆ ತಿಳಿಸಿಕೊಟ್ಟಿದೆ. ಚಿಕ್ಕ ವಯಸ್ಸಿನಲ್ಲಿ ಪಾಲಿಸಿಯನ್ನು ಖರೀದಿಸುವ ಮೂಲಕ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರೇಜ್ ಪಡೆಯಬಹುದು.
ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ ಯನ್ನು ವಿಶೇಷವಾಗಿ ಯುವಕರು ಉತ್ತಮ ಜೀವನಶೈಲಿಯನ್ನು ಹೊಂದಲು ಮತ್ತು ಜಂಜಾಟಮುಕ್ತ ಅತ್ಯುತ್ತಮ ಆರೋಗ್ಯ ಸೌಲಭ್ಯಗಳಿಗೆ ತ್ವರಿತ ಪ್ರವೇಶವನ್ನು ಪಡೆಯುವ ಉದ್ದೇಶದಿಂದ ರಚಿಸಲಾಗಿದೆ. ಈ ಪ್ಲ್ಯಾನ್ ಅನ್ನು ವಿಶೇಷವಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಹಾಗೂ ತಮ್ಮ ಆರೋಗ್ಯಕರ ಜೀವನಶೈಲಿಯನ್ನು ಹೊಂದಲು ಬಯಸುವ ಅವರ ಕುಟುಂಬಗಳಿಗಾಗಿಯೇ ರಚಿಸಲಾಗಿದೆ. ನೀವು ವೈಯಕ್ತಿಕ ಯೋಜನೆಯಡಿಯಲ್ಲಿ ಈ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಬಹುದು.
ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯು ರೂ. 3 ಲಕ್ಷದಿಂದ ರೂ. 1 ಕೋಟಿ ರೂ.ಗಳ ವಿಮಾ ಮೊತ್ತದ ಆಯ್ಕೆಗಳನ್ನು ಒದಗಿಸುತ್ತದೆ. ಇದರ ಮೂಲಕ, ಪ್ರೋತ್ಸಾಹಧನಯುಕ್ತ ಸ್ವಾಸ್ಥ್ಯ ಕಾರ್ಯಕ್ರಮಗಳು, ನವೀಕರಣಗಳ ಮೇಲಿನ ರಿಯಾಯಿತಿ, ಕಡಿಮೆ ವೇಟಿಂಗ್ ಅವಧಿಗಳು, ಆಸ್ಪತ್ರೆಗೆ ದಾಖಲಾಗುವ ಪೂರ್ವ ಮತ್ತು ನಂತರದ ವೆಚ್ಚಗಳಿಗೆ ಕವರೇಜ್, ಸಂಚಿತ ಬೋನಸ್‌ಗಳು, ಆಸ್ಪತ್ರೆ ನಗದು ಪ್ರಯೋಜನಗಳು, ವಾರ್ಷಿಕ ಚೆಕ್-ಅಪ್‌ಗಳು, ವಿಮಾಮೊತ್ತದ ರಿಸ್ಟೋರೇಷನ್ ಮತ್ತು ಹೆಚ್ಚುವರಿ ಮೂಲ ಮೊತ್ತದಂತಹ ವಿಶಾಲ ವ್ಯಾಪ್ತಿಯ ಶ್ರೇಣಿಯ ಪ್ರಯೋಜನಗಳನ್ನು ನೀವು ಆನಂದಿಸಬಹುದು.
ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಕವರೇಜ್ ಈ ಕೆಳಗಿನಂತಿದೆ:
ಭಾರತವು ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಲಾಗಿದೆ. ಹೆಲ್ತ್ ಇನ್ಶೂರನ್ಸ್ ಐಚ್ಚಿಕ ವಿಷಯವಾಗಿದೆ, ಆದರೆ ಪ್ರತಿಯೊಂದು ರಾಜ್ಯ ಮತ್ತು ಸರ್ಕಾರಿ ಘಟಕಗಳಲ್ಲಿ ಎಲ್ಲಾ ನಾಗರಿಕರಿಗೆ ಆರೋಗ್ಯ ರಕ್ಷಣೆ ಉಚಿತವಾಗಿದ್ದು, ಇದು ಸಿಬ್ಬಂದಿ ಮತ್ತು ಸರಬರಾಜುಗಳ ವಿಷಯದಲ್ಲಿ ಸವಾಲುಗಳನ್ನು ಹೊಂದಿದೆ. 2020 ರಲ್ಲಿ ಭಾರತದಲ್ಲಿ ಗ್ರಾಮೀಣ ಜನಸಂಖ್ಯೆಯ ಶೇಕಡಾವಾರು 65.07 % ಆಗಿತ್ತು ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ.
ಸ್ಟಾರ್ ಮೈಕ್ರೋ ರೂರಲ್ ಮತ್ತು ಫಾರ್ಮರ್ಸ್ ಕೇರ್: ಇದು ಕೇವಲ ಗ್ರಾಮೀಣ ರೈತರಿಗೆ ಆರೋಗ್ಯ ರಕ್ಷಣೆಯ ಬಗ್ಗೆ ಸ್ವಾವಲಂಬಿಯಾಗಲು ವಿಶೇಷವಾಗಿ ರೂಪಿಸಲಾಗಿದೆ. ಈ ಪಾಲಿಸಿಯನ್ನು ಗ್ರಾಮೀಣ ನಿವಾಸಿಗಳಿಗೆ 1 ವರ್ಷದಿಂದ 65 ವರ್ಷದೊಳಗಿನ ವೈಯಕ್ತಿಕವಾಗಿ ಅಥವಾ ಇಡೀ ಕುಟುಂಬಗಳಿಗೆ ನೀಡಲಾಗುತ್ತದೆ. ಒಬ್ಬ ವ್ಯಕ್ತಿಯು ರೂ. 1 ಲಕ್ಷ ಮತ್ತು ಕುಟುಂಬವು ರೂ. 2 ಲಕ್ಷ ವಿಮಾ ಮೊತ್ತದ ಇನ್ಸೂರೆನ್ಸ್ ಆಯ್ಕೆಗಳೊಂದಿಗೆ ಆಯ್ದುಕೊಳ್ಳಬಹುದು. ಪಾಲಿಸಿಯು ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಪ್ರೀಮಿಯಂ ಪಾವತಿಯ ಸುಲಭದ ಆಯ್ಕೆಯನ್ನು ಹೊಂದಿದೆ. ರೋಡ್ ಆ್ಯಂಬ್ಯುಲೆನ್ಸ್, ಡೇಕೇರ್ ಚಿಕಿತ್ಸೆಗಳು ಮತ್ತು ಕೀಮೋಥೆರಪಿ, ಡಯಾಲಿಸಿಸ್ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಗಳಂತಹ ಆಧುನಿಕ ಚಿಕಿತ್ಸೆಗಳಿಗೆ ವೈದ್ಯಕೀಯ ವೆಚ್ಚವನ್ನು ಪಾವತಿಸಲಾಗುತ್ತದೆ. ಪೂರ್ವಾಸ್ತಿತ್ವದಲ್ಲಿರುವ ರೋಗಗಳು ಮತ್ತು ನಿರ್ದಿಷ್ಟ ಕಾಯಿಲೆಗಳಿಗೆ ವೇಟಿಂಗ್ ಅವಧಿಯು ಪಾಲಿಸಿ ಪ್ರಾರಂಭದ ದಿನಾಂಕದಿಂದ ಕೇವಲ ಆರು ತಿಂಗಳುಗಳಾಗಿವೆ.
ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುವುದರಿಂದ ವೃದ್ಧರಿಗೆ ಹೆಲ್ತ್ ಇನ್ಶೂರೆನ್ಸ್ ಅತ್ಯಂತ ಅವಶ್ಯಕವಾಗಿದೆ. ದೀರ್ಘಾವಧಿಯ ಅಥವಾ ದುಬಾರಿ ಚಿಕಿತ್ಸೆಯು ಅವರ ಉಳಿತಾಯದ ಮೇಲೆ ಪರಿಣಾಮ ಬೀರುತ್ತದೆ, ಆದರೆ 60 + ನಂತರ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ದುಬಾರಿಯ ವಿಷಯವಾಗಿದೆ. ಸ್ಟಾರ್ ಹೆಲ್ತ್ ಇವೆಲ್ಲವನ್ನೂ ಅರ್ಥಮಾಡಿಕೊಳ್ಳುತ್ತದೆ, ವಯಸ್ಸಾದವರನ್ನು ಗೌರವದಿಂದ ಸ್ವಾಗತಿಸುತ್ತದೆ ಮತ್ತು ಅವರ ಸಂಪೂರ್ಣ ವೈದ್ಯಕೀಯ ಅಥವಾ ಚಿಕಿತ್ಸೆಯ ವೆಚ್ಚಗಳ ಅಗತ್ಯಗಳನ್ನು ರೆಡ್ ಕಾರ್ಪೆಟ್‌ನೊಂದಿಗೆ ಪೂರೈಸುತ್ತದೆ.
ಹಿರಿಯ ನಾಗರಿಕರ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಯನ್ನು 60 ವರ್ಷದಿಂದ 75 ವರ್ಷ ವಯಸ್ಸಿನ ವ್ಯಕ್ತಿಗಳಿಗೆ/ಕುಟುಂಬಗಳಿಗೆ ಮಾತ್ರ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಜೀವನಪರ್ಯಂತ ನವೀಕರಣಗೊಳಿಸುವ ಆಯ್ಕೆಯನ್ನು ಹೊಂದಿದೆ. ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಯ (PED) ವೇಟಿಂಗ್ ಅವಧಿಯನ್ನು ಪಾಲಿಸಿಯ ಆರಂಭದ ದಿನಾಂಕದಿಂದ 12 ತಿಂಗಳುಗಳಿಗೆ ಇಳಿಸಲಾಗಿದ್ದು PEDಗಳು ಯಾವಾಗಲೂ ಅನುಕೂಲಕರವೆಂದು ಘೋಷಿಸುತ್ತದೆ. 1 / 2 /3 /4/ 5/ 7.5 /10/ 15 /20 /25 ಲಕ್ಷಗಳಿಂದ ಆಯ್ಕೆ ಮಾಡಿಕೊಳ್ಳಬಹುದಾದ ಪಾಲಿಸಿಯು ವಿವಿಧ ವಿಮಾ ಮೊತ್ತದ ಆಯ್ಕೆಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಇನ್ಶೂರೆನ್ಸ್ ಪಾಲಿಸಿಗಳಂತೆ ವಯಸ್ಸು ಹೆಚ್ಚಾದಂತೆ ಹೆಲ್ತ್ ಇನ್ಶೂರನ್ಸ್ ಪ್ರೀಮಿಯಂಗಳು ಹೆಚ್ಚಾಗುವುದಿಲ್ಲ.
ಈ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ವಿಶೇಷವಾಗಿ ಮಹಿಳೆಯರ ಅಗತ್ಯತೆಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಪೂರೈಸುತ್ತದೆ ಮತ್ತು ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಒಟ್ಟಾಗಿ ರಚಿಸಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ. ಜೀವನದ ವಿವಿಧ ಹಂತಗಳಲ್ಲಿ ಆಸ್ಪತ್ರೆಗೆ ದಾಖಲಾದ ಮಹಿಳೆಯರಿಗೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಉತ್ತಮವಾಗಿ ರಚಿಸಲಾಗಿದೆ.
ಸ್ಟಾರ್ ವುಮೆನ್ ಕೇರ್ ಇನ್ಶೂರೆನ್ಸ್ ಪಾಲಿಸಿ ಯು 91 ದಿನಗಳಿಂದ 75 ವರ್ಷದೊಳಗಿನ ಮಹಿಳೆಯರಿಗೆ ಅವರ ಸಂಗಾತಿಗಳು ಮತ್ತು ಮಕ್ಕಳೊಂದಿಗೆ ಅಥವಾ ಕುಟುಂಬ ಕಲ್ಯಾಣಕ್ಕಾಗಿ ರೂ. 5 /10 /15 /20 /25 /50 /100 ರ ವಿವಿಧ ವಿಮಾಮೊತ್ತದ ಆಯ್ಕೆಗಳನ್ನು ಹೊಂದಿರುವ ಪಾಲಿಸಿಯಾಗಿದೆ. ಹೆರಿಗೆ, ಪ್ರಸವಪೂರ್ವ (ಗರ್ಭಧಾರಣೆಯ ಆರೈಕೆ), ಗರ್ಭಾಶಯದ ಶಸ್ತ್ರಚಿಕಿತ್ಸೆಗಳು, ಗರ್ಭಾಶಯದಲ್ಲಿನ ಭ್ರೂಣದ ಪರಿವರ್ತಿಕೆಗಳು, ನವಜಾತ ಶಿಶುಗಳು, ಸ್ಟೆರಲೈಸೇಷನ್ ಸಹಿತ ಪ್ರಸವಪೂರ್ವ ಮತ್ತು ನಂತರದ ಪ್ರಕ್ರಿಯೆಗಳಂತಹ ಮಹಿಳಾ ಕೇಂದ್ರಿತ ಚಿಕಿತ್ಸಾ ವೆಚ್ಚಗಳನ್ನು ಪಾವತಿಸಲಾಗುತ್ತದೆ.
ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಎಲ್ಲರಿಗೂ ಭದ್ರತೆ ಮತ್ತು ರಕ್ಷಣೆಯನ್ನು ನೀಡುತ್ತದೆ. 50 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಅಥವಾ ಕುಟುಂಬಗಳಿಗೆ ವಿಶಾಲ ವ್ಯಾಪ್ತಿಯೊಂದಿಗೆ ವಿನ್ಯಾಸಗೊಳಿಸಲಾದ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಪಡೆಯಿರಿ. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಆರ್ಥಿಕತೆ ನೆರವು ಬಹಳಷ್ಟು ತೃಪ್ತಿ ಮತ್ತು ಪರಿಸ್ಥಿತಿಯನ್ನು ಎದುರಿಸಲು ಧೈರ್ಯವನ್ನು ಒದಗಿಸುತ್ತದೆ.
ಸ್ಟಾರ್ ಹೆಲ್ತ್ ಪ್ರೀಮಿಯರ್ ಇನ್ಶೂರೆನ್ಸ್ ಪಾಲಿಸಿ ಯು, ಎಲ್ಲವನ್ನೂ ಒಳಗೊಂಡ ಒಂದು ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಯಾವುದೇ ಹೆಚ್ಚಿನ ಮಿತಿಯಿಲ್ಲದೆ 50 ವರ್ಷಕ್ಕಿಂತ ಮೇಲ್ಪಟ್ಟ ಕುಟುಂಬಗಳು ಅಥವಾ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಲು ಹೆಲ್ತ್ ಇನ್ಶೂರೆನ್ಸ್ ತಜ್ಞರು ಒದಗಿಸುತ್ತಾರೆ.
ಈ ಪಾಲಿಸಿಯು 10 ಲಕ್ಷದಿಂದ 1 ಕೋಟಿವರೆಗಿನ ವಿವಿಧ ರೀತಿಯ ವಿಮಾ ಮೊತ್ತದ ಆಯ್ಕೆಯನ್ನು ನೀಡುತ್ತದೆ. ಈ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆಯುಷ್, ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳು, ಏರ್ ಆಂಬುಲೆನ್ಸ್, ಮನೆಯಲ್ಲಿಯೇ ಚಿಕಿತ್ಸೆಗಳು, ಹೊರರೋಗಿ ಸಮಾಲೋಚನೆಗಳು ಮತ್ತು ಹೆಚ್ಚಿನವುಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.
ಅನೇಕರು ವಿತ್ತೀಯ ನಷ್ಟವನ್ನು ಅನುಭವಿಸಿದ್ದಾರೆ ಮತ್ತು ವೈದ್ಯಕೀಯ ಚಿಕಿತ್ಸೆಯ ಹಣಕಾಸಿನ ಹೋರಾಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಅಥವಾ ಆತ್ಮೀಯರನ್ನು ಕಳೆದುಕೊಂಡಿದ್ದಾರೆ, ಇದು ದಿವಾಳಿತನಕ್ಕೆ ಕಾರಣವಾಗಿದೆ. ಕಾರ್ಪೊರೇಟ್ ನೀತಿಯ ಅಡಿಯಲ್ಲಿ ರಕ್ಷಣೆ ನೀಡುವುದು ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚಗಳಿಗೆ ಸಾಕಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಸಾಕಷ್ಟು ರಕ್ಷಣೆಯೊಂದಿಗೆ ವೆಚ್ಚ-ಪರಿಣಾಮಕಾರಿ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಶಿಫಾರಸು ಮಾಡಲಾಗುತ್ತದೆ.
ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿ - (ಟಾಪ್-ಅಪ್ ಗೋಲ್ಡ್ ಪ್ಲ್ಯಾನ್) ಇದು ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಹೆಚ್ಚುವರಿ ಕವರ್ ಆಗಿದ್ದು, ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಚಿಕಿತ್ಸಾ ವೆಚ್ಚಗಳನ್ನು ಅತ್ಯಂತ ಆರ್ಥಿಕ ರೀತಿಯಲ್ಲಿ ಪೂರೈಸುತ್ತದೆ.
ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿ ಯು 5 ಲಕ್ಷದಿಂದ 1 ಕೋಟಿಯವರೆಗಿನ ನಷ್ಟ ಪರಿಹಾರದ ರಕ್ಷಣೆಯನ್ನು ನೀಡುತ್ತದೆ, ನಿರ್ದಿಷ್ಟ ಮಿತಿಗಳಿಗಿಂತ ಹೆಚ್ಚಿನ ವಿಮಾ ಮೊತ್ತ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್‌ಗಳಿಗಾಗಿ ಪಾಲಿಸಿದಾರರು ಪಾಲಿಸಿ ಅವಧಿಯಲ್ಲಿ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಪಾಲಿಸಿಯು ಏರ್/ರೋಡ್ ಆಂಬ್ಯುಲೆನ್ಸ್, ಡೇ-ಕೇರ್ ಕಾರ್ಯವಿಧಾನಗಳು, ಪೂರ್ವ ಮತ್ತು ನಂತರದ ಆಸ್ಪತ್ರೆ ದಾಖಲಾತಿ, ಹೆರಿಗೆ ಮತ್ತು ಆಧುನಿಕ ಚಿಕಿತ್ಸೆಗಳಿಗೆ ಕವರೇಜ್ ನೀಡುತ್ತದೆ.
ನಿಮ್ಮ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳನ್ನು ಪಡೆಯಿರಿ.