ಪಾಲಿಸಿ ಅವಧಿಈ ಪಾಲಿಸಿಯನ್ನು ಒಂದು, ಎರಡು ಅಥವಾ ಮೂರು ವರ್ಷಗಳ ಅವಧಿಗೆ ಪಡೆಯಬಹುದು. |
ಪೂರ್ವ ವೈದ್ಯಕೀಯ ಪರೀಕ್ಷೆ50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ಪಾಲಿಸಿಯನ್ನು ಪಡೆಯಲು ಪೂರ್ವ ಸ್ವೀಕಾರ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ. ಆದಾಗ್ಯೂ, 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಪ್ರತಿಕೂಲ ವೈದ್ಯಕೀಯ ಇತಿಹಾಸ ಹೊಂದಿರುವವರು ಪೂರ್ವ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. |
ವಿಮಾ ಮೊತ್ತಈ ಪಾಲಿಸಿಯ ಕನಿಷ್ಠ ವಿಮಾ ಮೊತ್ತ ರೂ. 5,00,000/- ಮತ್ತು ಗರಿಷ್ಠ ರೂ. 25,00,000/- (ರೂ. 1,00,000/- ಗುಣಕಗಳಲ್ಲಿ).
1) ಸಂಪಾದಿಸುವ ವ್ಯಕ್ತಿಗಳಿಗೆ - 18 ರಿಂದ 35 ವರ್ಷ ವಯಸ್ಸಿನವರಿಗೆ ವಾರ್ಷಿಕ ಆದಾಯದ 12 ಪಟ್ಟು ಮತ್ತು 35 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವಾರ್ಷಿಕ ಆದಾಯದ 10 ಪಟ್ಟು. ಗರಿಷ್ಠ ವಿಮಾ ಮೊತ್ತವು ರೂ.25 ಲಕ್ಷಗಳನ್ನು ಮೀರುವಂತಿಲ್ಲ.
2) ಸಂಪಾದಿಸದ ವ್ಯಕ್ತಿಗಳಿಗೆ - ಗರಿಷ್ಠ 15 ಲಕ್ಷದವರೆಗೆ. ಸಂಪಾದಿಸದ ವಿಮಾ ಮೊತ್ತವು ಪ್ರಾಥಮಿಕ ಸದಸ್ಯರಿಗೆ ವಿಮಾ ಮೊತ್ತಕ್ಕಿಂತ ಹೆಚ್ಚಿರುವಂತಿಲ್ಲ. |
ವಿಶಾಲ ಗಂಭೀರ ಕಾಯಿಲೆ ಕವರ್ಈ ಪಾಲಿಸಿಯು ನಾಲ್ಕು ವರ್ಗಗಳಾಗಿ ವರ್ಗೀಕರಿಸಲಾದ ಪ್ರಮುಖ ಗಂಭೀರ ಕಾಯಿಲೆಗಳಿಗೆ ವಿಶಾಲ ಕವರ್ ಅನ್ನು ಒದಗಿಸುತ್ತದೆ. |
ಕ್ಯಾನ್ಸರ್ ಕವರ್ಈ ಪಾಲಿಸಿಯು ಕ್ಯಾನ್ಸರ್ ಸಂಬಂಧಿತ ಪ್ರಮುಖ ಕಾಯಿಲೆಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತದೆ. |
ಹೃದ್ರೋಗ ಕವರ್ಈ ಪಾಲಿಸಿಯು ಪ್ರಮುಖ ಹೃದಯ ಸಂಬಂಧಿ ಸ್ಥಿತಿಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತದೆ. |
ಮೆದುಳು ಮತ್ತು ನರವ್ಯೂಹಈ ಪಾಲಿಸಿಯು ಮೆದುಳು ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತದೆ. |
ಪ್ರಮುಖ ಅಂಗ ಮತ್ತು ಇತರ ಪರಿಸ್ಥಿತಿಗಳುಈ ಪಾಲಿಸಿಯು ಪ್ರಮುಖ ಅಂಗಗಳು ಮತ್ತು ಇತರ ಪರಿಸ್ಥಿತಿಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತದೆ. |
ಕಂತು ಆಯ್ಕೆಗಳುಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೆ ಕೂಡ ಪಾವತಿಸಬಹುದು. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.