ಪಾಲಿಸಿ ವಿಧಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದಾಗಿದೆ. |
ಪ್ರವೇಶದ ವಯಸ್ಸು18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ. ಅವಲಂಬಿತ ಮಕ್ಕಳನ್ನು 91 ನೇ ದಿನದಿಂದ 25 ವರ್ಷಗಳವರೆಗೆ ಕವರ್ ಮಾಡಲಾಗುತ್ತದೆ. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕದ 60 ದಿನಗಳ ಮೊದಲು ಉಂಟಾಗುವ ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವದ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡಲಾಗುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಡಿಸ್ಚಾರ್ಜ್ ಆದ ದಿನಾಂಕದಿಂದ 90 ದಿನಗಳವರೆಗೆ ಕವರ್ ಮಾಡಲಾಗುತ್ತದೆ. |
ಕೊಠಡಿ ಬಾಡಿಗೆಈ ಪಾಲಿಸಿಯ ಅಡಿಯಲ್ಲಿ ಕೊಠಡಿ ಬಾಡಿಗೆ (ಖಾಸಗಿ ಏಕ A/C ಕೊಠಡಿ), ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚುಗಳಿಗೆ ಯಾವುದೇ ಮಿತಿಯಿಲ್ಲ. |
ರೋಡ್ ಆಂಬ್ಯುಲೆನ್ಸ್ಆಸ್ಪತ್ರೆಗೆ ದಾಖಲಾಗುವಿಕೆ, ಉತ್ತಮ ಸೌಲಭ್ಯಗಳಿಗಾಗಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಮತ್ತು ಆಸ್ಪತ್ರೆಯಿಂದ ನಿವಾಸಕ್ಕೆ ಸ್ಥಳಾಂತರಗೊಳ್ಳಲು ಆಂಬ್ಯುಲೆನ್ಸ್ ಶುಲ್ಕವನ್ನು ಪಾಲಿಸಿ ಕವರ್ ಮಾಡುತ್ತದೆ. |
ಏರ್ ಆಂಬ್ಯುಲೆನ್ಸ್ಪ್ರತಿ ಪಾಲಿಸಿ ಅವಧಿಗೆ ಗರಿಷ್ಠ ರೂ. 5,00,000/- ರವರೆಗೆ ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ರೂ. 2,50,000/- ರಂತೆ ಏರ್ ಆಂಬ್ಯುಲೆನ್ಸ್ ಖರ್ಚನ್ನು ಸಹ ಕವರ್ ಮಾಡಲಾಗುತ್ತದೆ. |
ಮಧ್ಯಂತರ ಸೇರ್ಪಡೆನವ ವಿವಾಹಿತ ಸಂಗಾತಿ ಮತ್ತು ನವಜಾತ ಶಿಶುವನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯಲ್ಲಿ ಸೇರಿಸಿಬಹುದಾಗಿದೆ. ವೇಟಿಂಗ್ ಅವಧಿಗಳು ಹೊಸ ಸೇರ್ಪಡೆಗಳ ಸೇರ್ಪಡೆ ದಿನಾಂಕದಿಂದ ಅನ್ವಯವಾಗುತ್ತವೆ. |
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆಯ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನ್ ಕವರ್ ಮಾಡಲಾಗುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಆಸ್ಪತ್ರೆ ಕ್ಯಾಶ್ಆಸ್ಪತ್ರೆಯಲ್ಲಿ ಪ್ರತಿ ಪೂರ್ಣವಾದ ದಿನಕ್ಕೆ ಕ್ಯಾಶ್ ಪ್ರಯೋಜನವನ್ನು ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಗರಿಷ್ಠ 7 ದಿನಗಳು ಮತ್ತು 120 ದಿನಗಳ ಪಾಲಿಸಿ ಅವಧಿವರೆಗೆ ಪಾಲಿಸಿ ಷರತ್ತುಗಳಲ್ಲಿ ನಮೂದಿಸಲಾದ ಮಿತಿಗಳವರೆಗೆ ಒದಗಿಸಲಾಗುತ್ತದೆ. |
ಮನೆಯಲ್ಲೇ ಚಿಕಿತ್ಸೆವೈದ್ಯರ ಸಲಹೆಯ ಮೇರೆಗೆ ಮೂರು ದಿನಗಳಿಗಿಂತ ಹೆಚ್ಚಿನ ಅವಧಿಗೆ ತೆಗೆದುಕೊಳ್ಳಲಾದ ಆಯುಷ್ ಚಿಕಿತ್ಸೆ ಸೇರಿದಂತೆ ಮನೆಯಲ್ಲೇ ಚಿಕಿತ್ಸೆಗೆ ತಗಲುವ ಖರ್ಚನ್ನು ಕವರ್ ಮಾಡಲಾಗುತ್ತದೆ. |
ಡೆಲಿವರಿ ಖರ್ಚುಗಳುಸಿಸೇರಿಯನ್ ಸೆಕ್ಷನ್ ಸೇರಿದಂತೆ ಡೆಲಿವರಿ ಖರ್ಚುಗಳನ್ನು (ಪ್ರಸವಪೂರ್ವ ಮತ್ತು ನಂತರದ ಎರಡೂ) ಗರಿಷ್ಠ ಎರಡು ಹೆರಿಗೆಗಳಿಗೆ ಒಳಪಟ್ಟಂತೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ನವಜಾತ ಶಿಶು ಕವರ್ನವಜಾತ ಶಿಶುವಿನ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚನ್ನು ಆಯ್ಕೆ ಮಾಡಿದ ವಿಮಾ ಮೊತ್ತದ ಆಧಾರದ ಮೇಲೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ವ್ಯಾಕ್ಸಿನೇಷನ್ ಖರ್ಚುಗಳುನವಜಾತ ಶಿಶುವಿನ ವ್ಯಾಕ್ಸಿನೇಷನ್ ಖರ್ಚುಗಳನ್ನು ಆಯ್ಕೆ ಮಾಡಿದ ವಿಮಾ ಮೊತ್ತದ ಆಧಾರದ ಮೇಲೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್ಪಾಲಿಸಿ ಅವಧಿಯಲ್ಲಿ ಬೇಸಿಕ್ ವಿಮಾ ಮೊತ್ತದ ಬರಿದಾಗುವಿಕೆಯ ನಂತರ, ವಿಮಾ ಮೊತ್ತದ 100% ಅನ್ನು ಪಾಲಿಸಿ ಅವಧಿಯಲ್ಲಿ ಒಂದು ಬಾರಿ ರಿಸ್ಟೋರ್ ಮಾಡಲಾಗುತ್ತದೆ. |
ಸಹ-ಪಾವತಿಪ್ರವೇಶದ ಸಮಯದಲ್ಲಿ 61 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮೆದಾರರಿಗೆ ಹೊಸ ಮತ್ತು ನವೀಕರಣ ಪಾಲಿಸಿಗಳಿಗಾಗಿ ಈ ಪಾಲಿಸಿಯು ಪ್ರತಿ ಕ್ಲೈಮ್ ಮೊತ್ತದ 10% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತದೆ. |
ಬಾರಿಯಾಟಿಕ್ ಶಸ್ತ್ರಚಿಕಿತ್ಸೆಬಾರಿಯಾಟಿಕ್ ಶಸ್ತ್ರಚಿಕಿತ್ಸಾ ಕಾರ್ಯವಿಧಾನಗಳಿಗಾಗಿ ಆಸ್ಪತ್ರೆಯ ಖರ್ಚನ್ನು ರೂ. 2,50,000/- ದಿಂದ ರೂ. 5,00,000/- ವರೆಗೆ ಆಸ್ಪತ್ರೆಗೆ ದಾಖಲಾಗಿಸುವಿಕೆಯ ಪೂರ್ವ ಮತ್ತು ನಂತರದ ಖರ್ಚನ್ನು ಕವರ್ ಮಾಡಲಾಗುತ್ತದೆ. |
ಆಯುಷ್ ಚಿಕಿತ್ಸೆಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಪದ್ಧತಿಯ ಚಿಕಿತ್ಸೆಗಾಗಿ ತಗಲುವ ಖರ್ಚನ್ನು ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಹೊರರೋಗಿ ಸಮಾಲೋಚನೆದಂತ ಮತ್ತು ನೇತ್ರ ಚಿಕಿತ್ಸೆಗಳನ್ನು ಹೊರತುಪಡಿಸಿ ಯಾವುದೇ ನೆಟ್‌ವರ್ಕ್ ಸೌಲಭ್ಯದಲ್ಲಿ ಉಂಟಾಗುವ ಹೊರರೋಗಿ ವೆಚ್ಚಗಳನ್ನು ಈ ಪಾಲಿಸಿಯಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಹೊರರೋಗಿ ಸಮಾಲೋಚನೆ - ದಂತ ಮತ್ತು ನೇತ್ರದಹಲ್ಲಿನ ಮತ್ತು ನೇತ್ರ ಚಿಕಿತ್ಸೆಗಳಿಗೆ ಹೊರರೋಗಿ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. ವಿಮೆದಾರರು ಮೂರು ವರ್ಷಗಳ ಪ್ರತಿ ಬ್ಲಾಕ್ ನಂತರ ಈ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. |
ಅಂಗದಾನಿ ವೆಚ್ಚಗಳುದಾನಿಯಿಂದ ಸ್ವೀಕೃತಿದಾರ ವಿಮೆದಾರರ ಅಂಗಕಸಿಗಾಗಿ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಉಂಟಾಗುವ ಖರ್ಚುಗಳನ್ನು ಕಸಿಯ ಕ್ಲೈಮ್ ಪಾವತಿಸಬಹುದಾದ್ದದ್ದು ಆಗಿದ್ದರೆ ಪಾವತಿಸಲಾಗುತ್ತದೆ. |
ಆರೋಗ್ಯ ತಪಾಸಣೆನೆಟ್ವರ್ಕ್ ಆಸ್ಪತ್ರೆಗಳಲ್ಲಿ ಉಂಟಾಗುವ ಆರೋಗ್ಯ ತಪಾಸಣೆ ಖರ್ಚುಗಳನ್ನು ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಎರಡನೇ ವೈದ್ಯಕೀಯ ಸಮಾಲೋಚನೆಕಂಪನಿಯ ವೈದ್ಯರ ನೆಟ್‌ವರ್ಕ್‌ನಲ್ಲಿರುವ ವೈದ್ಯರಿಂದ ವಿಮೆದಾರರು ಎರಡನೇ ವೈದ್ಯಕೀಯ ಸಮಾಲೋಚನೆಯನ್ನು ಪಡೆದುಕೊಳ್ಳಬಹುದಾಗಿದೆ. ವೈದ್ಯಕೀಯ ದಾಖಲೆಗಳನ್ನು e_medicalopinion@starhealth.in ಮೇಲ್ ಐಡಿಗೆ ಕಳುಹಿಸಬಹುದು. |
ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವಂತೆ ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸ್ವಾಸ್ಥ್ಯ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಹಾಗೆಯೇ, ಗಳಿಸಿದ ಸ್ವಾಸ್ಥ್ಯ ಬೋನಸ್ ಪಾಯಿಂಟ್‌ಗಳನ್ನು ನವೀಕರಣ ರಿಯಾಯಿತಿಗಳನ್ನು ಪಡೆಯಲು ಬಳಸಿಕೊಳ್ಳಬಹುದು. ಕಂತು ಆಯ್ಕೆಗಳು |
ಕಂತು ಆಯ್ಕೆಗಳುಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೆ ಪಾವತಿಸಬಹುದು. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.