ದಿ ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ಸ್
ನಿಮ್ಮ ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮವನ್ನು ಭದ್ರಪಡಿಸುವಲ್ಲಿ ಆರೋಗ್ಯ ವಿಮೆಯು ಅನಿವಾರ್ಯ ಭಾಗವಾಗಿದೆ. ನಮ್ಮ ಆರೋಗ್ಯ ವಿಮಾ ಪಾಲಿಸಿಗಳ ಒಂದು ಶ್ರೇಣಿಯೊಂದಿಗೆ ನಿಮ್ಮ ಸುರಕ್ಷಿತ ಭವಿಷ್ಯವನ್ನು ನಾವು ಖಚಿತಪಡಿಸುತ್ತೇವೆ.
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ವಿಮೆದಾರರಿಗೆ ಗುಣಮಟ್ಟದ ವೈದ್ಯಕೀಯ ತಪಾಸಣೆ, ಚಿಕಿತ್ಸಾ ವೆಚ್ಚಗಳಿಗೆ ಕವರೇಜ್, ನಗದುರಹಿತ ಆಸ್ಪತ್ರೆಗೆ ಸೇರಿಸುವಿಕೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಎಲ್ಲಾ ಹೆಲ್ತ್ ಪ್ಲ್ಯಾನ್‌ಗಳು
ನಿಮ್ಮ ಸುರಕ್ಷತೆಗಾಗಿ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಆರೋಗ್ಯ ಸಂಜೀವನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್
ಗ್ರಾಮೀಣ ರಿಯಾಯಿತಿ: ಗ್ರಾಮೀಣ ಜನರಿಗೆ ಪ್ರೀಮಿಯಂನಲ್ಲಿ 20% ರಿಯಾಯಿತಿ
ಆಧುನಿಕ ಚಿಕಿತ್ಸೆಗಳು: ಆಧುನಿಕ ಚಿಕಿತ್ಸೆಗಳಿಗೆವಿಮಾ ಮೊತ್ತದ 50% ವರೆಗೆ ಕವರ್ ಪಡೆಯಿರಿ
ಆಯುಷ್ ಕವರ್: ಆಯುಷ್ ಚಿಕಿತ್ಸೆಗಳಿಗೆ ಆಸ್ಪತ್ರೆಯ ದಾಖಲಾತಿ ವೆಚ್ಚವನ್ನು ಒಳಗೊಂಡಿರುತ್ತದೆ
ಸ್ಟಾರ್ ಕ್ಯಾನ್ಸರ್ ಕೇರ್ ಪ್ಲಾಟಿನಂ ಇನ್ಶೂರೆನ್ಸ್ ಪಾಲಿಸಿ
ವಿಶೇಷ ಕವರ್: ಕ್ಯಾನ್ಸರ್ ಇರುವಿಕೆಯು ಪತ್ತೆಯಾದ ಜನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿ
ವ್ಯಾಪಕ ಕವರ್: ಕ್ಯಾನ್ಸರ್ ಜೊತೆಗೆ, ಇದು ಕ್ಯಾನ್ಸರ್‌ಗೆ ಸಂಬಂಧಿಸದ ನಿಯಮಿತ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಸಹ ಒಳಗೊಂಡಿರುತ್ತದೆ
ಇಡಿಗಂಟಿನ ಕವರ್: ಐಚ್ಛಿಕ ರಕ್ಷಣೆಯಾಗಿ, ಕ್ಯಾನ್ಸರ್, ಮೆಟಾಸ್ಟಾಸಿಸ್ ಮತ್ತು/ಅಥವಾ ಮೊದಲು ಪತ್ತೆಯಾದ ಕ್ಯಾನ್ಸರ್‌ಗೆ ಸಂಬಂಧಿಸದ ಎರಡನೇ ಮಾರಣಾಂತಿಕ ಕ್ಯಾನ್ಸರ್‌ನ ಪುನರಾವರ್ತನೆಗಾಗಿ ಒಂದು ಇಡಿಗಂಟನ್ನು ಒದಗಿಸಲಾಗುತ್ತದೆ.
ಸ್ಟಾರ್ ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ಪಾಲಿಸಿ
ಕಾರ್ಡಿಯಾಕ್ ಕವರ್: 10 ಮತ್ತು 65 ವರ್ಷ ವಯಸ್ಸಿನ ಹೃದಯ ಸಂಬಂಧಿತ ಕಾಯಿಲೆಗಳಿಂದ ಗುರುತಿಸಲ್ಪಟ್ಟ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುತ್ತದೆ
ನಾನ್-ಕಾರ್ಡಿಯಾಕ್ ಕವರ್: ಹೃದಯಕ್ಕೆ ಸಂಬಂಧಪಡದ ಕಾಯಿಲೆಗಳು ಮತ್ತು ಅಪಘಾತಗಳನ್ನು ಸಹ ಒಳಗೊಂಡಿರುತ್ತದೆ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ಸ್ಟಾರ್ ಮೈಕ್ರೋ ರೂರಲ್ ಮತ್ತು ಫಾರ್ಮರ್ಸ್ ಕೇರ್
ಗ್ರಾಮೀಣ ಕವರ್: ಗ್ರಾಮೀಣ ಜನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ಕಡಿಮೆ ಕಾಯುವಿಕೆ ಅವಧಿ: ಪಿಇಡಿ ಮತ್ತು ನಿರ್ದಿಷ್ಟ ರೋಗಗಳು ಕೇವಲ 6 ತಿಂಗಳ ನಂತರ ಕವರ್ ಆಗುತ್ತವೆ
ಸ್ಟಾರ್ ಸ್ಪೆಷಲ್ ಕೇರ್
ವಿಶೇಷ ಕವರ್: ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಮೆದುಳಿಗೆ ಸಂಬಂಧಪಟ್ಟ ಕಾಯಿಲೆ) ಕಂಡುಬಂದ ಜನರಿಗಾಗಿ ವಿನ್ಯಾಸಗೊಳಿಸಲಾದ ವಿಶೇಷವಾದ ಪಾಲಿಸಿ
ವೈದ್ಯಕೀಯ ತಪಾಸಣೆ: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ಆಧುನಿಕ ಚಿಕಿತ್ಸೆ: ಆಧುನಿಕ ಚಿಕಿತ್ಸಾ ವೆಚ್ಚಗಳನ್ನು ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ.
ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿ
ಟಾಪ್-ಅಪ್ ಪ್ಲಾನ್: ಕೈಗೆಟುಕುವ ಪ್ರೀಮಿಯಂನಲ್ಲಿ ವರ್ಧಿತ ಆರೋಗ್ಯ ಕವರೇಜ್ ಪಡೆಯಿರಿ
ರಿಚಾರ್ಜ್ ಪ್ರಯೋಜನ: ವಿಮಾ ಮೊತ್ತವು ಮುಗಿದಾಗ ಯಾವುದೇ ಹೆಚ್ಚುವರಿ ಖರ್ಚಿಲ್ಲದೇ ಹೆಚ್ಚುವರಿ ಪರಿಹಾರ ಮೊತ್ತವನ್ನು ಪಡೆಯಿರಿ
ದೀರ್ಘ-ಕಾಲಿಕ ರಿಯಾಯಿತಿ: 2 ವರ್ಷಗಳ ಅವಧಿಯ ಪಾಲಿಸಿಯನ್ನು ಆಯ್ಕೆ ಮಾಡಿದರೆ, 5% ಪ್ರೀಮಿಯಂ ರಿಯಾಯಿತಿ ಲಭ್ಯವಿರುತ್ತದೆ
ಸ್ಟಾರ್ ಹೆಲ್ತ್ ಪ್ರೀಮಿಯರ್ ವಿಮೆ ಪಾಲಿಸಿ
ಕುಟುಂಬದ ಗಾತ್ರ: ಸ್ವಯಂ, ಸಂಗಾತಿ, ಪೋಷಕರು ಮತ್ತು ಅತ್ತೆ-ಮಾವ ಸೇರಿದಂತೆ 6 ವಯಸ್ಕರು ಮತ್ತು 3 ಮಕ್ಕಳನ್ನು ಒಳಗೊಂಡಿದೆ
ಆಟೋಮ್ಯಾಟಿಕ್ ರಿಸ್ಟೋರೇಷನ್: ವಿಮಾ ಮೊತ್ತವನ್ನು ಎಷ್ಟು ಬಾರಿಯಾದರೂ ರಿಸ್ಟೋರ್ ಮಾಡಲಾಗುತ್ತದೆ ಮತ್ತು ಪ್ರತಿ ಬಾರಿ ಗರಿಷ್ಠ 100% ವರೆಗೆ
ದೀರ್ಘಾವಧಿಯ ರಿಯಾಯಿತಿ: ಪಾಲಿಸಿಯನ್ನು 2 ಅಥವಾ 3 ವರ್ಷಗಳ ಅವಧಿಗೆ ಆರಿಸಿಕೊಂಡರೆ, ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿದೆ
ಸ್ಟಾರ್ ಔಟ್ ಪೇಶೆಂಟ್ ಕೇರ್ ಇನ್ಶೂರೆನ್ಸ್ ಪಾಲಿಸಿ
ಹೊರರೋಗಿ ಕವರ್: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಮಾಲೋಚನೆ ವೆಚ್ಚಗಳನ್ನು ಇದು ಒಳಗೊಂಡಿದೆ
ರೋಗನಿರ್ಣಯ ಮತ್ತು ಔಷಧಾಲಯ: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಇವುಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ
ದಂತ ಮತ್ತು ನೇತ್ರ ಚಿಕಿತ್ಸೆ: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಇವುಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ
ಸ್ಟಾರ್ ವುಮೆನ್ ಕೇರ್ ಇನ್ಶೂರೆನ್ಸ್ ಪಾಲಿಸಿ
ವಿಶಿಷ್ಟ ಕವರ್: ಮಹಿಳೆಯರಿಗೆ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಪಾಲಿಸಿ
ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ಡೆಲಿವರಿ ವೆಚ್ಚಗಳು: ಸಾಮಾನ್ಯ ಮತ್ತು ಸಿ-ಸೆಕ್ಷನ್ ಡೆಲಿವರಿ ವೆಚ್ಚಗಳು (ಪ್ರಸವಪೂರ್ವ ಮತ್ತು ನಂತರದ ವೆಚ್ಚ ಸೇರಿದಂತೆ)
ಸ್ಟಾರ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ
ಆಟೋಮ್ಯಾಟಿಕ್ ರಿಸ್ಟೋರೇಷನ್: ಬೇಸಿಕ್ ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಒಂದು ಬಾರಿ ರಿಸ್ಟೋರ್ ಮಾಡಲಾಗುತ್ತದೆ
ಬೈ-ಬ್ಯಾಕ್ PED: ಪೂರ್ವಾಸ್ತಿತ್ವದ ಕಾಯಿಲೆಗಳಿಗೆ ಸಂಬಂಧಿಸಿದಂತೆ ವೇಟಿಂಗ್ ಅವಧಿಯನ್ನು ಕಡಿಮೆ ಮಾಡಬಹುದಾದ ಐಚ್ಛಿಕ ಕವರ್
ಮಧ್ಯಂತರ ಸೇರ್ಪಡೆ: ನವ ವಿವಾಹಿತ ಸಂಗಾತಿ ಮತ್ತು ನವಜಾತ ಶಿಶುವನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯಲ್ಲಿ ಕವರ್ ಮಾಡಬಹುದಾಗಿದೆ
ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ
ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ಮಧ್ಯಾವಧಿ ಸೇರ್ಪಡೆ: ಪಾಲಿಸಿ ವರ್ಷದ ಮಧ್ಯದಲ್ಲಿ ಹೊಸದಾಗಿ ಮದುವೆಯಾದ ಅಥವಾ ವಿವಾಹಿತ ಸಂಗಾತಿಯನ್ನು, ಕಾನೂನುಬದ್ಧವಾಗಿ ದತ್ತು ಪಡೆದ ಮಗು ಮತ್ತು ನವಜಾತ ಶಿಶುವನ್ನು ಸೇರಿಸಲು ನಿಮಗೆ ಅರ್ಹತೆ ನೀಡಲಾಗುತ್ತದೆ
ಲಾಯಲ್ಟಿ ರಿಯಾಯಿತಿ: 36 ವರ್ಷಕ್ಕಿಂತ ಮೊದಲು ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು 40 ವರ್ಷ ಮೀರಿದ ನಂತರ ಅದನ್ನು ನಿರಂತರವಾಗಿ ನವೀಕರಿಸಲು 10% ರಿಯಾಯಿತಿ ನೀಡಲಾಗುತ್ತದೆ
ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿ
ಆಸ್ಪತ್ರೆ ದಾಖಲಾತಿಗೆ ಇಡಿಗಂಟಿನ ಪ್ರಯೋಜನ: ಆಸ್ಪತ್ರೆಗೆ ದಾಖಲಾದಾಗ ಸಾಂದರ್ಭಿಕ ವೆಚ್ಚಗಳಿಗೆ ದೈನಂದಿನ ನಗದು ಲಾಭವನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ
ಐಸಿಯು ಆಸ್ಪತ್ರೆ ನಗದು: ಆಸ್ಪತ್ರೆಯ ಐಸಿಯುನಲ್ಲಿ ದಾಖಲಾದ ಸಂದರ್ಭದಲ್ಲಿ ಆಸ್ಪತ್ರೆಯ ನಗದು ಮೊತ್ತದ (ದಿನಕ್ಕೆ) 200% ವರೆಗೆ ಪಡೆಯಬಹುದಾಗಿದೆ
ಅಪಘಾತ ಆಸ್ಪತ್ರೆ ನಗದು: ಅಪಘಾತಗಳ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ ಪ್ರತಿ 24 ಗಂಟೆಗಳಿಗೊಮ್ಮೆ ಆಸ್ಪತ್ರೆಯ ನಗದು ಮೊತ್ತದ 150% ವರೆಗೆ ಪಡೆಯಿರಿ
ಮೆಡಿ ಕ್ಲಾಸಿಕ್ ಇನ್ಶೂರೆನ್ಸ್ ಪಾಲಿಸಿ (ವೈಯಕ್ತಿಕ)
ರಿಸ್ಟೋರೇಷನ್ ಪ್ರಯೋಜನ: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾದಾರರ ಮೂಲ ಮೊತ್ತದ 200% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ರಸ್ತೆ ಅಪಘಾತ: ರಸ್ತೆ ಅಪಘಾತದ ಸಂದರ್ಭದಲ್ಲಿ ವಿಮಾ ಮೊತ್ತವನ್ನು ಹೆಚ್ಚಿಸಲಾಗಿದೆ
ದೀರ್ಘಾವಧಿಯ ರಿಯಾಯಿತಿ: ಪಾಲಿಸಿಯನ್ನು 2 ಅಥವಾ 3 ವರ್ಷಗಳ ಅವಧಿಗೆ ಆರಿಸಿಕೊಂಡರೆ, ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿದೆ
ಸ್ಟಾರ್ ಹೆಲ್ತ್ ಪ್ರೀಮಿಯರ್ ವಿಮೆ ಪಾಲಿಸಿ
ವಿಶೇಷ ಪಾಲಿಸಿ: ಯಾವುದೇ ಗರಿಷ್ಠ ವಯಸ್ಸಿನ ಮಿತಿಯಿಲ್ಲದೆ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ
ಇನ್ಶೂರೆನ್ಸ್ ಪೂರ್ವದ ತಪಾಸಣೆ: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವದ ತಪಾಸಣೆ ಅಗತ್ಯವಾಗಿಲ್ಲ
ಆರೋಗ್ಯ ತಪಾಸಣೆ ಡಿಸ್ಕೌಂಟ್: ಪಟ್ಟಿ ಮಾಡಲಾದ ಆರೋಗ್ಯ ತಪಾಸಣೆ ವರದಿಗಳನ್ನು ಪಾಲಿಸಿಯ ಪ್ರಾರಂಭದಲ್ಲಿ ಸಲ್ಲಿಸಿದರೆ ಮತ್ತು ಸಲ್ಲಿಸಿದ ವರದಿಗಳಲ್ಲಿನ ತೀರ್ಮಾನಗಳಿಗೆ ಒಳಪಟ್ಟಿದ್ದರೆ 10% ಪ್ರೀಮಿಯಂ ಡಿಸ್ಕೌಂಟ್ ಲಭ್ಯವಿದೆ
ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ
ಹಿರಿಯರಿಗಾಗಿ ಕವರ್: ಜೀವನ ಪರ್ಯಂತ ನವೀಕರಣಗಳೊಂದಿಗೆ 60 - 75 ವರ್ಷ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ
ಹೊರರೋಗಿ ಕವರ್: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಯಾಗಿ ವೈದ್ಯಕೀಯ ಸಮಾಲೋಚನೆಗಳಿಗೆ ಕವರ್ ಪಡೆಯಿರಿ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿ
ಮಧುಮೇಹದ ಕವರ್: ಟೈಪ್-1 ಮತ್ತು ಟೈಪ್-2 ಮಧುಮೇಹ ಕಂಡುಬಂದ ಜನರನ್ನು ಒಳಗೊಳ್ಳಲು ವಿನ್ಯಾಸಗೊಳಿಸಲಾಗಿದೆ
ಫ್ಯಾಮಿಲಿ ಕವರ್: ಅವರಲ್ಲಿ ಯಾರಾದರೂ ಮಧುಮೇಹಿಗಳಾಗಿದ್ದರೆ ಫ್ಲೋಟರ್ ಆಧಾರದ ಮೇಲೆ (ಸ್ವಯಂ ಮತ್ತು ಸಂಗಾತಿಯ) ಸಹ ಈ ಪಾಲಿಸಿಯನ್ನು ಪಡೆಯಬಹುದು
ಆಟೋಮ್ಯಾಟಿಕ್ ರಿಸ್ಟೋರೇಷನ್: ವೈಯಕ್ತಿಕ ಯೋಜನೆಗಾಗಿ ಪಾಲಿಸಿ ವರ್ಷದಲ್ಲಿ ಒಮ್ಮೆ ವಿಮಾ ಮೊತ್ತದ 100% ರಿಸ್ಟೋರ್ ಪಡೆಯಿರಿ
ಸ್ಟಾರ್ ಹೆಲ್ತ್ ಗೇನ್ ಇನ್ಶೂರೆನ್ಸ್ ಪಾಲಿಸಿ
ವಿಶಾಲ ಕವರ್: ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಮತ್ತು ಹೊರರೋಗಿ ಖರ್ಚುಗಳು ಎರಡಕ್ಕೂ ವಿಶಾಲ ಕವರ್ ಒದಗಿಸುತ್ತದೆ
ಆಧುನಿಕ ಚಿಕಿತ್ಸೆ: ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ಡೇ ಕೇರ್ ಕಾರ್ಯವಿಧಾನಗಳಾಗಿ ಖರ್ಚುಗಳನ್ನು ಕವರ್ ಮಾಡುತ್ತದೆ
ಹೊರರೋಗಿ ಪ್ರಯೋಜನ: ಯಾವುದೇ ನೆಟ್‌ವರ್ಕ್ ಮಾಡಲಾದ ಸೌಲಭ್ಯದಲ್ಲಿ ಹೊರರೋಗಿ ಖರ್ಚುಗಳನ್ನು ಕವರ್ ಮಾಡುತ್ತದೆ
ಸ್ಪೆಷಲ್ ಕೇರ್ ಗೋಲ್ಡ್, ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್
ವಿಶಿಷ್ಟ ಪಾಲಿಸಿ: ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅಥವಾ/ಮತ್ತು HIV/AIDS ಇರುವ ವ್ಯಕ್ತಿಗಳಿಗೆ ಕವರ್ ನೀಡಲು ಒದಗಿಸಲು ವಿನ್ಯಾಸಗೊಳಿಸಲಾಗಿದೆ
ಆಯುಷ್ ಕವರ್: ಆಯುಷ್ ಚಿಕಿತ್ಸೆಗಾಗಿ ಆಸ್ಪತ್ರೆಯ ವೆಚ್ಚಗಳು ವಿಮಾ ಮೊತ್ತದ 50% ವರೆಗೆ ಕವರ್ ಮಾಡಲಾಗುತ್ತದೆ
ವಿಮಾ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಪಾಲಿಸಿ ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ
ಫ್ಯಾಮಿಲಿ ಹೆಲ್ತ್ ಆಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್
ಆಟೋಮ್ಯಾಟಿಕ್ ರಿಸ್ಟೋರೇಷನ್: ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಮೂರು ಬಾರಿ ರಿಸ್ಟೋರ್ ಮಾಡಲಾಗುತ್ತದೆ
ರಸ್ತೆ ಅಪಘಾತಕ್ಕೆ ಹೆಚ್ಚುವರಿ ವಿಮಾ ಮೊತ್ತ: ಕವರೇಜ್ ಮಿತಿ ಬರಿದಾಗುವಿಕೆಯ ನಂತರ ರಸ್ತೆ ಅಪಘಾತಕ್ಕೆ ವಿಮಾ ಮೊತ್ತವನ್ನು ಹೆಚ್ಚಿಸಲಾಗುತ್ತದೆ
ರೀಚಾರ್ಜ್ ಪ್ರಯೋಜನ: ಕವರೇಜ್ ಮಿತಿ ಬರಿದಾಗುವಿಕೆಯ ನಂತರ ಪಾಲಿಸಿ ವರ್ಷದಲ್ಲಿ ಒಂದು ಬಾರಿ ಹೆಚ್ಚುವರಿ ವಿನಾಯಿತಿಯನ್ನು ಪಡೆಯಬಹುದಾಗಿದೆ
ಸ್ಟಾರ್ ಎಕ್ಸ್ಟ್ರಾ ಪ್ರೊಟೆಕ್ಟ್ - ಆ್ಯಡ್ ಆನ್ ಕವರ್
ಆ್ಯಡ್ ಆನ್ ಕವರ್: ಕೈಗೆಟುಕುವ ಪ್ರೀಮಿಯಂನೊಂದಿಗೆ ವರ್ಧಿತ ನಿಮ್ಮ ಮೂಲ ಪಾಲಿಸಿಯ ಮಿತಿಗಳನ್ನು ಪಡೆಯಿರಿ
ಆಧುನಿಕ ಚಿಕಿತ್ಸೆ: ಮೂಲ ಪಾಲಿಸಿಯಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದಲ್ಲಿ ಮೂಲ ಪಾಲಿಸಿಯ ವಿಮಾ ಮೊತ್ತಕ್ಕೆ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ
ಕ್ಲೈಮ್ ಗಾರ್ಡ್: ನಿಮ್ಮ ಮೂಲ ನೀತಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದರೆ ವೈದ್ಯಕೀಯೇತರ ಐಟಂಗಳಿಗೆ ಕವರ್ ಪಡೆಯಿರಿ
ಯಂಗ್ ಸ್ಟಾರ್ ಎಕ್ಸ್ಟ್ರಾ ಪ್ರೊಟೆಕ್ಟ್-ಆಡ್ ಆನ್ ಕವರ್
ವರ್ಧಿತ ಕವರ್: ಕೈಗೆಟುಕುವ ಪ್ರೀಮಿಯಂನಲ್ಲಿ ನಿಮ್ಮ ಮೂಲ ಪಾಲಿಸಿಯ ವರ್ಧಿತ ಕವರೇಜ್ ಮಿತಿಗಳನ್ನು ಪಡೆಯಿರಿ
ವೈದ್ಯಕೀಯೇತರ ಐಟಂಗಳ ಕವರ್: ನಿಮ್ಮ ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದಲ್ಲಿ ವೈದ್ಯಕೀಯೇತರ ಐಟಂಗಳಿಗೆ ಕವರೇಜ್ ಪಡೆಯಿರಿ
ಆಯುಷ್ ಚಿಕಿತ್ಸೆ: ಮೂಲ ಪಾಲಿಸಿಯ ವಿಮಾ ಮೊತ್ತದವರೆಗೆ ಆಯುಷ್ ಚಿಕಿತ್ಸೆಗಳಿಗೆ ಕವರ್ ಪಡೆಯಿರಿ
ಸ್ಟಾರ್ ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ಪಾಲಿಸಿ-ಪ್ಲಾಟಿನಂ
ವಿಶೇಷ ಕವರ್: ಹೃದಯ ಸಂಬಂಧಿ ಕಾಯಿಲೆ ಅಥವಾ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿ
ಇನ್ಶೂರೆನ್ಸ್ ಪೂರ್ವದ ತಪಾಸಣೆ: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವದ ತಪಾಸಣೆ ಅಗತ್ಯವಾಗಿಲ್ಲ
ಹೃದಯ ಸಂಬಂಧಿ ಸಾಧನಗಳು: ಹೃದಯ ಸಂಬಂಧಿ ಸಾಧನಗಳಿಗೆ ವಿಮಾ ಮೊತ್ತದ 50% ವರೆಗೆ ಪಡೆಯಿರಿ
ಸ್ಟಾರ್ ಕ್ರಿಟಿಕಲ್ ಇಲ್‌ನೆಸ್ ಮಲ್ಟಿಪೇ ಇನ್ಶೂರೆನ್ಸ್ ಪಾಲಿಸಿ
ಅನನ್ಯ ಕವರ್: ಪಾಲಿಸಿಯು 37 ಪ್ರಮುಖ ಗಂಭೀರ ಕಾಯಿಲೆಗಳನ್ನು ಕವರ್ ಮಾಡುತ್ತದೆ
ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮ: ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಂಡಿದ್ದಕ್ಕಾಗಿ ಪ್ರೀಮಿಯಂ ಡಿಸ್ಕೌಂಟ್ ಅನ್ನು ಪಡೆಯಿರಿ
ಇನ್ಶೂರೆನ್ಸ್ ಪೂರ್ವದ ತಪಾಸಣೆ: ಈ ಪಾಲಿಸಿಯನ್ನು ಪಡೆದುಕೊಳ್ಳಲು 50 ವರ್ಷ ವಯಸ್ಸಿನವರೆಗೆ ಇನ್ಶೂರೆನ್ಸ್ ಪೂರ್ವದ ತಪಾಸಣೆ ಅಗತ್ಯವಾಗಿಲ್ಲ
ಸ್ಮಾರ್ಟ್ ಹೆಲ್ತ್ ಪ್ರೊ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ವಿಮಾ ಇನ್ಶೂರೆನ್ಸ್ ಸ್ಕ್ರೀನಿಂಗ್ ಅಗತ್ಯವಿಲ್ಲ
ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ಆಯುಷ್ ಚಿಕಿತ್ಸೆ: ಆಯುಷ್ ಚಿಕಿತ್ಸೆಗಳಿಗೆ ಆಸ್ಪತ್ರೆಗೆ ದಾಖಲಾತಿ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಕ್ವಿಕ್ ಲಿಂಕ್‌ಗಳು
ಹೆಲ್ತ್ ಇನ್ಶೂರೆನ್ಸ್
ಹೆಲ್ತ್ ಇನ್ಶೂರೆನ್ಸ್ ಎಂದರೇನು?
ಹೆಲ್ತ್ ಇನ್ಶೂರೆನ್ಸ್ ಆರೋಗ್ಯ ತುರ್ತುಕಾಲೀನ ಸಂದರ್ಭಗಳಲ್ಲಿ ಆರ್ಥಿಕ ಅಸ್ಥಿರತೆಯಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುವ ಗುರಾಣಿಯಾಗಿದೆ. ಮೆಡಿಕಲ್ ಇನ್ಶೂರೆನ್ಸ್ ವಯಸ್ಸಾದವರಿಗೆ ಅಥವಾ ಆರೋಗ್ಯದ ಸಮಸ್ಯೆಯನ್ನು ಹೊಂದಿರುವವರಿಗೆ ಮಾತ್ರ ಎಂಬ ಸಾಮಾನ್ಯ ತಪ್ಪು ಕಲ್ಪನೆಗಿಂತ ವಿರುದ್ಧವಾಗಿ ಅದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆಸ್ಪತ್ರೆಗೆ ದಾಖಲಾಗುವಿಕೆಯ ಸಮಯದಲ್ಲಿ ನಿಮ್ಮ ಮೆಡಿಕಲ್ ಬಿಲ್‌ಗಳನ್ನು ಭರಿಸುವ ಮೂಲಕ ನೆಮ್ಮದಿಯನ್ನು ನೀಡುತ್ತದೆ.
ಕೋವಿಡ್-19 ನಂತಹ ಅನಿಶ್ಚಿತತೆಯು ಮೆಡಿಕಲ್ ಇನ್ಶೂರೆನ್ಸ್‌ನ ಅಗತ್ಯವನ್ನು ನಮಗೆ ತಿಳಿಸಿಕೊಟ್ಟಿದೆ. ಮತ್ತೊಂದೆಡೆ, ವೈದ್ಯಕೀಯ ಹಣದುಬ್ಬರದ ನಿರಂತರ ಏರಿಕೆಯೊಂದಿಗೆ, ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಸಮಯವನ್ನು ಕ್ಯಾಶ್‌ಲೆಸ್ ಚಿಕಿತ್ಸೆಗಳು ಅಥವಾ ಉಂಟಾದ ವೈದ್ಯಕೀಯ ಖರ್ಚುಗಳ ವೆಚ್ಚ ಭರಿಸುವಿಕೆಯ ಮೂಲಕ ಉಳಿಸಬಲ್ಲದು. ನಮ್ಮ ಹೊಂದಿಸಬಹುದಾದ ಹೆಲ್ತ್ ಇನ್ಶೂರೆನ್ಸ್‌ನ ವಿಶಾಲ ಕವರೇಜ್ ಅನ್ನು ಪಡೆದುಕೊಳ್ಳಲು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದು.
ಇನ್ಶೂರೆನ್ಸ್‌ನ ಮಹತ್ವ
ನನಗೆ ಮೆಡಿಕಲ್ ಇನ್ಶೂರೆನ್ಸ್ ಪ್ಲ್ಯಾನ್ ಏಕೆ ಅಗತ್ಯವಾಗಿದೆ?
ಹೆಚ್ಚುತ್ತಿರುವ ವೈದ್ಯಕೀಯ ಖರ್ಚುಗಳು ಮತ್ತು ಹೆಚ್ಚುತ್ತಿರುವ ರೋಗಗಳ ಸಂಖ್ಯೆಯು ಹೆಲ್ತ್ ಇನ್ಶೂರೆನ್ಸ್‌ನ ಅವಶ್ಯಕತೆಯನ್ನು ಹೆಚ್ಚಿಸಿವೆ. ಪ್ರಸ್ತುತ ಸಮಯದಲ್ಲಿ, ನಿಮ್ಮ ಹಣಕಾಸು ಯೋಜನೆಯನ್ನು ತಯಾರಿಸುವಾಗ, ಆ ಪಟ್ಟಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಸೇರಿಸಲು ಎಂದಿಗೂ ಮರೆಯದಿರಿ.
ಸ್ಟಾರ್ ಹೆಲ್ತ್
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ನಮ್ಮ ಆಯ್ಕೆಯಾಗಬೇಕು?
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ವೈದ್ಯಕೀಯ, ವೈಯಕ್ತಿಕ ಅಪಘಾತಗಳು ಮತ್ತು ಸಾಗರೋತ್ತರ ಪ್ರಯಾಣದಲ್ಲಿ ಹೆಲ್ತ್ ಪಾಲಿಸಿಗಳನ್ನು ನಿಭಾಯಿಸುತ್ತಿರುವ ನಾವು ಭಾರತದ ಮೊದಲ ಅದ್ವಿತೀಯ ಹೆಲ್ತ್ ಇನ್ಶೂರೆನ್ಸ್ ಕಂಪನಿಯಾಗಿದ್ದೇವೆ. ನಮ್ಮ ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಕೈಗೆಟುಕುವ ಪ್ರೀಮಿಯಂ ದರಗಳೊಂದಿಗೆ ನಾವು ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಸಮಗ್ರ ವ್ಯಾಪ್ತಿಯನ್ನು ಹೊಂದಿದ್ದೇವೆ.
ನಮ್ಮ ಜಂಜಾಟ-ಮುಕ್ತ ಕ್ಲೈಮ್ ಇತ್ಯರ್ಥ ಪ್ರಕ್ರಿಯೆ ಮತ್ತು ಸರಳ ಮರುಪಾವತಿ ಪಾಲಿಸಿಗಳು ನಮ್ಮ ಪ್ರತಿಸ್ಪರ್ಧಿಗಳಲ್ಲೇ ನಮ್ಮನ್ನು ಮುಂಚೂಣಿಯಲ್ಲಿ ನಿಲ್ಲಿಸುತ್ತದೆ.
ವರ್ಗಗಳು
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನ ವಿಧಗಳು
ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಹೆಲ್ತ್ ಇನ್ಶೂರೆನ್ಸ್ ಅತ್ಯಗತ್ಯವಾಗಿದೆ. ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಗಳ ಪ್ರಯೋಜನಗಳು ಅವುಗಳ ವಿಧಗಳ ಆಧಾರದ ಮೇಲೆ ಬದಲಾಗುತ್ತವೆ. ಅವುಗಳ ವಿಧಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಪಾಲಿಸಿಯನ್ನು ಆರಿಸಿಕೊಳ್ಳಿ.
ಇಂಡೆಮಿನಿಟಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಇಂಡೆಮಿನಿಟಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಕ್ಯಾಶ್‌ಲೆಸ್ ಚಿಕಿತ್ಸಾ ಸೌಲಭ್ಯಗಳು ಮತ್ತು ವೆಚ್ಚ ಭರಿಸುವಿಕೆ ಎರಡೂ ಸಂದರ್ಭಗಳಲ್ಲಿ ವಾಸ್ತವಿಕ ವೈದ್ಯಕೀಯ ಖರ್ಚುಗಳಿಗೆ ಪರಿಹಾರ ಒದಗಿಸುತ್ತವೆ. ಅಂತಹ ಮೆಡಿಕ್ಲೈಮ್ ಪ್ಲ್ಯಾನ್‌ಗಳು ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ ಲಭ್ಯವಿವೆ. ಅವುಗಳು ಆಯ್ಕೆ ಮಾಡಿದ ವಿಮಾ ಮೊತ್ತದವರೆಗೆ ಕವರೇಜ್ ಒದಗಿಸುತ್ತವೆ.
ಫಿಕ್ಸೆಡ್ ಬೆನಿಫಿಟ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಫಿಕ್ಸೆಡ್ ಬೆನಿಫಿಟ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಕ್ಯಾನ್ಸರ್, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಬ್ರೈನ್ ಟ್ಯೂಮರ್, ಇತ್ಯಾದಿಗಳಂತಹ ಗಂಭೀರ ಕಾಯಿಲೆಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತವೆ. ಮಾರಣಾಂತಿಕ ಗಂಭೀರ ಅನಾರೋಗ್ಯದ ಸಮಯದಲ್ಲಿ ಎದುರಾಗುವಂತಹ ಆರ್ಥಿಕ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು, ಪಾಲಿಸಿಯಲ್ಲಿ ವಿಮೆದಾರರಿಗೆ ಒಂದೇ ಬಾರಿಗೆ ಪಾವತಿಸಲಾಗುತ್ತದೆ.
ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯ ವಿಮಾ ಮೊತ್ತ ಬರಿದಾಗುವಿಕೆಯ ನಂತರವೂ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಹೆಚ್ಚುವರಿ ಕವರ್ ಅನ್ನು ಒದಗಿಸುತ್ತವೆ. ಕೆಲವೊಮ್ಮೆ ಆಯ್ಕೆಮಾಡಿದ ಕವರ್ ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸದಿದ್ದಾಗ, ಟಾಪ್-ಅಪ್ ಪಾಲಿಸಿಯು ಹೆಚ್ಚುವರಿ ಕವರೇಜ್ ಅನ್ನು ಒದಗಿಸುವ ಮೂಲಕ ಹಣಕಾಸಿನ ರಕ್ಷಣೆಯನ್ನು ಬಲಪಡಿಸುತ್ತದೆ.
ಕ್ಲೈಮ್‌ಗಳು
ನಮ್ಮ ಕ್ಲೈಮ್ ಪ್ರಕ್ರಿಯೆಯು ಹೇಗೆ ಕಾರ್ಯನಿರ್ವಹಿಸುತ್ತದೆ?
ಕ್ಲೈಮ್ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಹಂತಗಳ ಬಗ್ಗೆ ತಿಳಿದುಕೊಳ್ಳಿ. ಯೋಜಿತವಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ತುರ್ತಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಎರಡೂ ಸಂದರ್ಭಗಳಲ್ಲಿ, ಈ ಕೆಳಗಿನ ಯಾವುದೇ ವಿಧಾನಗಳನ್ನು ಆರಿಸುವ ಮೂಲಕ ಕ್ಲೈಮ್ ಸಲ್ಲಿಕೆಯನ್ನು ಸುಲಭವಾಗಿಸಬಹುದಾಗಿದೆ.
ನಾವು ಏನನ್ನು ಕವರ್ ಮಾಡಿದ್ದೇವೆ ಎಂದು ತಿಳಿದುಕೊಳ್ಳಿ
ಸೂಕ್ತವಾದ ಮೆಡಿಕಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆಮಾಡುವುದು ಹೇಗೆ?
ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸುವುದು ನೀವು ಮಾಡಬಹುದಾದಂತ ಅತ್ಯುತ್ತಮ ಹೂಡಿಕೆಗಳಲ್ಲಿ ಒಂದಾಗಿದೆ. ಆದರೆ ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಪ್ಲ್ಯಾನ್ ಅನ್ನು ಆಯ್ಕೆಮಾಡುವುದು ಹೇಗೆ? ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ತಿಳಿದುಕೊಳ್ಳುವುದು ನಿಮಗೆ ಉತ್ತಮ ಮೆಡಿಕಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುವ ಕೆಲವು ವಿಧಾನಗಳನ್ನು ಕೆಳಗೆ ನೀಡಲಾಗಿದೆ.
ತೆರಿಗೆ ಕಡಿತ
ತೆರಿಗೆ ಪ್ರಯೋಜನಗಳನ್ನು ಪಡೆದುಕೊಳ್ಳಿ
ಒಂದು ಆರೋಗ್ಯ ವಿಮಾ ಪಾಲಿಸಿಯು ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಮಾತ್ರವಲ್ಲದೆ ನಿಮ್ಮ ಹಣವನ್ನು ತೆರಿಗೆಯಲ್ಲಿಯೂ ಉಳಿಸುತ್ತದೆ. ವೈದ್ಯಕೀಯ ವಿಮೆಯು ಅತ್ಯಗತ್ಯ ಹೂಡಿಕೆಯಾಗಿರುವುದರಿಂದ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ವೈದ್ಯಕೀಯ ವಿಮಾ ಯೋಜನೆಗೆ ಪಾವತಿಸಿದ ಪ್ರೀಮಿಯಂಗೆ ತೆರಿಗೆ ಕಡಿತವನ್ನು ಅನುಮತಿಸುತ್ತದೆ. ಇಲ್ಲಿ ಕೆಲವು ಹೆಚ್ಚುವರಿ ಅನುಕೂಲಗಳಿವೆ.
ಪ್ರೀಮಿಯಂ ಪಾವತಿಗಾಗಿ ತೆರಿಗೆ ಕಡಿತ
ನೀವು ನಿಮಗಾಗಿ ಅಥವಾ ನಿಮ್ಮ ಕುಟುಂಬಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ 25,000/-ರೂ.ವರೆಗಿನ ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಬಹುದಾಗಿದೆ. ನಿಮ್ಮ ಪೋಷಕರಿಗಾಗಿಯೂ ನೀವು ಪ್ರೀಮಿಯಂ ಪಾವತಿಸುತ್ತಿದ್ದರೆ, ನೀವು 1 ಲಕ್ಷ ರೂ.ವರೆಗಿನ ಹೆಚ್ಚಿನ ತೆರಿಗೆ ಕಡಿತವನ್ನು ಪಡೆಯಬಹುದಾಗಿದೆ.
ಆರೋಗ್ಯ ತಪಾಸಣೆಗಾಗಿ ತೆರಿಗೆ ವಿನಾಯಿತಿ
ಪ್ರೀಮಿಯಂಗಳ ಜೊತೆಗೆ, ನೀವು ಮುಂಜಾಗ್ರತೆಯ ಆರೋಗ್ಯ ತಪಾಸಣೆಗಾಗಿ ಮಾಡಿದ ಖರ್ಚುಗಳಿಗೆ ಕೂಡ ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಬಹುದಾಗಿದೆ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಅಡಿಯಲ್ಲಿ, ನೀವು 5,000/-ರೂ.ವರೆಗಿನ ಆದಾಯ ತೆರಿಗೆ ಕಡಿತಗಳನ್ನು ಪಡೆಯಬಹುದಾಗಿದೆ.
ಆನ್‌ಲೈನ್ ಪ್ರಯೋಜನಗಳು
ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಆನ್‌ಲೈನ್‌ನಲ್ಲಿ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವನ್ನು ಕೆಳಗೆ ನೀಡಲಾಗಿದೆ.
ಮುಂಚಿತವಾಗಿ ಸುರಕ್ಷಿತಗೊಳಿಸಿ
ಆರಂಭಿಕ ವಯಸ್ಸಿನಲ್ಲೇ ಮೆಡಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಯೋಜನಗಳು
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಲು ಇಂತದ್ದೇ ನಿರ್ದಿಷ್ಟ ವಯಸ್ಸು ಎಂದಿಲ್ಲ. ಆದರೆ, ಆರಂಭಿಕ ವಯಸ್ಸಿನಲ್ಲೇ ಮೆಡಿಕಲ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆರಿಸಿಕೊಳ್ಳುವುದು ಅದರದ್ದೇ ಆದ ಪ್ರಯೋಜನಗಳನ್ನು ಹೊಂದಿದೆ.
ಕಡಿಮೆ ಪ್ರೀಮಿಯಂ
ಮೆಡಿಕಲ್ ಇನ್ಶೂರೆನ್ಸ್‌ನ ಪ್ರೀಮಿಯಂ ಅನ್ನು ಲೆಕ್ಕಾಚಾರಹಾಕುವಾಗ ಪರಿಗಣಿಸುವ ಪ್ರಮುಖ ಅಂಶಗಳಲ್ಲಿ ವಯಸ್ಸು ಒಂದಾಗಿದೆ. ನೀವು ಕಡಿಮೆ ವಯಸ್ಸಿನವರಾಗಿದ್ದರೆ, ನಿಮ್ಮ ಪ್ರೀಮಿಯಂ ಕಡಿಮೆ ಇರುತ್ತದೆ.
ನಿರಂತರ ಕವರ್
ನವೀಕರಣಗಳ ಮೂಲಕ ನಿರಂತರ ಕವರ್ ನಿರ್ದಿಷ್ಟ ಮತ್ತು ಪೂರ್ವಾಸ್ತಿತ್ವದ ಕಾಯಿಲೆಗಳಿಗೆ (PED) ವೇಟಿಂಗ್ ಅವಧಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ.
ವೈದ್ಯಕೀಯ ಪರೀಕ್ಷೆ
ನೀವು ಚಿಕ್ಕ ವಯಸ್ಸಿನಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದರೆ ಇನ್ಶೂರೆನ್ಸ್ ಪೂರ್ವದ ವೈದ್ಯಕೀಯ ತಪಾಸಣೆಯ ಅಗತ್ಯವಿರುವುದಿಲ್ಲ.
ಕ್ಲೈಮ್ ರಹಿತ ಬೋನಸ್
ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ನೀವು ಕ್ಲೈಮ್ ರಹಿತ ಬೋನಸ್ ಅನ್ನು ಪಡೆಯಬಹುದಾಗಿದೆ. ಇದು ವಿಮಾ ಮೊತ್ತವನ್ನು ಹೆಚ್ಚಿಸುವ ಮೂಲಕ ನಂತರದ ಹಂತಗಳಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಸಹ-ಪಾವತಿ
ನೀವು ಚಿಕ್ಕ ವಯಸ್ಸಿನಲ್ಲಿ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಂಡಾಗ ಸಹ-ಪಾವತಿ ಅನ್ವಯಿಸುವುದಿಲ್ಲವಾದ್ದರಿಂದ ನಿಮ್ಮ ವೈದ್ಯಕೀಯ ಬಿಲ್‌ಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ.
ನವೀಕರಣ
ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ನವೀಕರಿಸುವುದು ಹೇಗೆ?
ಮುಂದುವರಿಕೆ ಪ್ರಯೋಜನಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ! ಈಗ ನವೀಕರಿಸುವುದು ಕೆಳಗಿನ ಸರಳ ಹಂತಗಳೊಂದಿಗೆ ಸುಲಭವಾಗಿದೆ.
ಹಂತ 1:
ನವೀಕರಿಸಿ ಟ್ಯಾಬ್ ಮೇಲ್ ಕ್ಲಿಕ್ ಮಾಡಿ
ಹಂತ 2:
ನಿಮ್ಮ ಪಾಲಿಸಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
ಹಂತ 3:
ಪ್ಲ್ಯಾನ್ ಮತ್ತು ನಿಮ್ಮ ಆದ್ಯತೆಯ ವಿಮಾ ಮೊತ್ತವನ್ನು ಆಯ್ಕೆಮಾಡಿ. ನಂತರ ಲೆಕ್ಕಹಾಕಿ ಮತ್ತು ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ
ಹಂತ 4:
ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ವಹಿವಾಟನ್ನು ಪೂರ್ಣಗೊಳಿಸಿ
ಪ್ರಾರಂಭಿಸಿ
ಅತ್ಯುತ್ತಮವಾದುದರ ಖಾತರಿ ಹೊಂದಿರಿ
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.
ಹೆಚ್ಚಿನ ಮಾಹಿತಿ ಬೇಕೆ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
ಭಾರತದ ಅತ್ಯುತ್ತಮ ಮೆಡಿಕ್ಲೈಮ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಕಾಂಪ್ರೆಹೆನ್ಸಿವ್ ಕವರೇಜ್ ಅನ್ನು ಒದಗಿಸುತ್ತವೆ
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಅಥವಾ ಮೆಡಿಕ್ಲೈಮ್ ಪ್ಲ್ಯಾನ್‌ಗಳು ಅನಾರೋಗ್ಯ, ಅಪಘಾತಗಳು ಮತ್ತು ಡೇಕೇರ್ ಚಿಕಿತ್ಸೆಗಳು/ಕಾರ್ಯವಿಧಾನಗಳ ಕಾರಣದಿಂದಾಗಿ ಎಲ್ಲಾ 24-ಗಂಟೆಗಳ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಯನ್ನು ಕವರ್ ಮಾಡುತ್ತವೆ. ಎಲ್ಲಾ ಸಂಬಂಧಿತ ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ದಿನಗಳವರೆಗೆ ಪಾವತಿಸಲಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಹೆಚ್ಚಿನ ಹೊಂದಾಣಿಕೆಗಳನ್ನು ಒದಗಿಸುತ್ತವೆ
ಪಾಲಿಸಿದಾರರು ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸಿದಾಗ ಮತ್ತು ಕೆಲವು ಕಷ್ಟದ ಸಂದರ್ಭಗಳನ್ನು ಎದುರಿಸಿದಾಗ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಅಗತ್ಯಕ್ಕೆ ಹೊಂದಿಸಬಹುದಾದ ಪ್ರಯೋಜನಗಳನ್ನು ಒದಗಿಸುತ್ತವೆ. ಉದಾಹರಣೆಗೆ, ವಿಮಾ ಮೊತ್ತದ ಬರಿದಾಗುವಿಕೆಯ ಸಂದರ್ಭದಲ್ಲಿ ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆಯೇ ಹೆಚ್ಚುವರಿ ಕವರೇಜ್ ಅನ್ನು ಒದಗಿಸಲಾಗುತ್ತದೆ. ಬೇಸಿಕ್ ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್, ಬೇಸಿಕ್ ವಿಮಾ ಮೊತ್ತದ ಸೂಪರ್ ರಿಸ್ಟೋರೇಷನ್ ಮತ್ತು ವಿಮಾ ಮೊತ್ತದ ರಸ್ತೆ ಅಪಘಾತ (RTA) ನಂತಹ ಪ್ರಯೋಜನಗಳು ಲಭ್ಯವಾಗುತ್ತವೆ.
ಗಮನಿಸಿ: ಈ ಅಗತ್ಯಕ್ಕೆ ಹೊಂದಿಸಬಹುದಾದ ಪ್ರಯೋಜನಗಳು ಪ್ರಾಡಕ್ಟ್/ಪಾಲಿಸಿಗೆ ಅನುಗುಣವಾಗಿ ಬದಲಾಗುತ್ತವೆ. ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ಷರತ್ತುಗಳನ್ನು ಓದಿ.
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಹೆಚ್ಚುವರಿ ಕಾಯಿಲೆ-ನಿರ್ದಿಷ್ಟ ಕವರೇಜ್ ಅನ್ನು ಒದಗಿಸುತ್ತವೆ
ಸ್ಟಾರ್ ಹೆಲ್ತ್‌ನೊಂದಿಗೆ, ಸಾಮಾನ್ಯ ಮೆಡಿಕ್ಲೈಮ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಿಸುವಿಕೆಯೊಂದಿಗೆ ಗಂಭೀರ ಕಾಯಿಲೆಗಳು, ಕ್ಯಾನ್ಸರ್ ಮತ್ತು ಹೃದ್ರೋಗಗಳಿಗೆ ಕಾಯಿಲೆ-ನಿರ್ದಿಷ್ಟ ಪಾಲಿಸಿಗಳನ್ನು ವಿಮೆದಾರರು ಪಡೆಯಬಹುದು. ಆಯ್ಕೆಗಾಗಿ ನಾವು ಸ್ಟಾರ್ ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ಪಾಲಿಸಿ-ಪ್ಲಾಟಿನಂ, ಸ್ಟಾರ್ ಕ್ಯಾನ್ಸರ್ ಕೇರ್ ಪ್ಲಾಟಿನಂ ಇನ್ಶೂರೆನ್ಸ್ ಪಾಲಿಸಿ ಮತ್ತು ಸ್ಟಾರ್ ಕ್ಯಾನ್ಸರ್ ಕೇರ್ ಪ್ಲಾಟಿನಂ ಇನ್ಶೂರೆನ್ಸ್ ಪಾಲಿಸಿಗಳಂತಹ ವ್ಯಾಪಕ ಶ್ರೇಣಿಯ ಮೆಡಿಕ್ಲೈಮ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೊಂದಿದ್ದೇವೆ.
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಆಸ್ಪತ್ರೆಗೆ ದಾಖಲಾಗುವಿಕೆ ಹೊರತಾದ ಖರ್ಚುಗಳನ್ನು ಕವರ್ ಮಾಡುತ್ತವೆ
ವಿಮೆದಾರರು ನಮ್ಮ ಹೆಚ್ಚಿನ ಮೆಡಿಕ್ಲೈಮ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ ಆಸ್ಪತ್ರೆಗೆ ದಾಖಲಾಗುವಿಕೆಗೆ ಹೊರತಾದ ಖರ್ಚುಗಳನ್ನು ಪಡೆಯಬಹುದಾಗಿದೆ. ಖರ್ಚುಗಳು, ದಂತ ಚಿಕಿತ್ಸೆಗಳು, ವಾರ್ಷಿಕ ಆರೋಗ್ಯ ತಪಾಸಣೆ, ಹೊರರೋಗಿಗಳ ಆರೈಕೆ ಚಿಕಿತ್ಸೆಗಳು, ಡಯಾಗ್ನಾಸ್ಟಿಕ್ಸ್, ಸಮಾಲೋಚನೆಗಳು ಇತ್ಯಾದಿಗಳನ್ನು ಇವುಗಳು ಒಳಗೊಂಡಿವೆ.
ನಮ್ಮ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಜಡ ಜೀವನಶೈಲಿಯಿಂದ ಮತ್ತು ವಯಸ್ಸು ಹೆಚ್ಚಿದಂತೆ ಹೆಚ್ಚಿನ ಜನರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯು ಹಿಂದೆಂದಿಗಿಂತಲೂ ಹೆಚ್ಚು ಹೆಲ್ತ್ ಇನ್ಶೂರೆನ್ಸ್‌ನ ಅಗತ್ಯವನ್ನು ಒತ್ತಿಹೇಳಿದೆ. ಆರೋಗ್ಯವಂತ ವ್ಯಕ್ತಿ/ಕುಟುಂಬವು ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ಬಳಿಕ ಕೋವಿಡ್-19 ಇರುವುದು ಪತ್ತೆಯಾದರೆ ಮತ್ತು ಆಸ್ಪತ್ರೆಗೆ ದಾಖಲಾಗುವಿಕೆಯ ಸಂದರ್ಭ ಎದುರಾದರೆ ನಮ್ಮ ಎಲ್ಲಾ ಪಾಲಿಸಿಗಳು ಕೋವಿಡ್-19 ಗೆ ಕವರೇಜ್ ಅನ್ನು ಒದಗಿಸುತ್ತವೆ. ಕೋವಿಡ್-19 ಚಿಕಿತ್ಸೆಗಳು ಪಾಲಿಸಿ ಷರತ್ತುಗಳಲ್ಲಿ ಉಲ್ಲೇಖಿಸಲಾದಂತೆ ವೇಟಿಂಗ್ ಅವಧಿಯನ್ನು ಒಳಗೊಂಡಿರುತ್ತವೆ.
ನಮ್ಮ ವೈವಿಧ್ಯಮಯ, ಫೀಚರ್-ಸಮೃದ್ಧ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಒಳಗೊಂಡಿವೆ ಮತ್ತು ವೈದ್ಯಕೀಯ ಸಾದಿಲ್ವಾರುಗಳು ಮತ್ತು ಅನಿಶ್ಚಿತತೆಗಳಿಂದಾಗಿ ಎದುರಾಗುವ ಹಣಕಾಸಿನ ಬಿಕ್ಕಟ್ಟಿನ ಸಮಯದಲ್ಲಿ ಮನಸ್ಸಿನ ಶಾಂತಿಯನ್ನು ಒದಗಿಸುತ್ತವೆ.
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳಲ್ಲಿ ಹಲವಾರು ವಿಧಗಳಿವೆ ಮತ್ತು ಅವುಗಳ ಕವರೇಜ್ ಆಧಾರದ ಮೇಲೆ ವೈಯುಕ್ತಿಕ ಮತ್ತು ಕುಟುಂಬ ಎಂಬ ಎರಡು ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.
- ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್
ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಖರೀದಿಸುವುದು ವೈಯಕ್ತಿಕ ವ್ಯಕ್ತಿಯನ್ನು ಆಯ್ಕೆ ಮಾಡಿದ ವಿಮಾ ಮೊತ್ತಕ್ಕೆ ಕವರ್ ಮಾಡುತ್ತದೆ, ಇದನ್ನು ವಿಮೆದಾರರು ಮಾತ್ರ ಬಳಸಬಹುದಾಗಿದೆ.
- ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್
ಫ್ಯಾಮಿಲಿ ಹೆಲ್ತ್ ಇನ್ಸೂರೆನ್ಸ್ ಸಂದರ್ಭದಲ್ಲಿ, ಕುಟುಂಬವು ಸ್ವತಃ, ಸಂಗಾತಿ ಮತ್ತು ಅವಲಂಬಿತ ಮಕ್ಕಳು ಮತ್ತು ಪೋಷಕರನ್ನು ಸೂಚಿಸುತ್ತದೆ.
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಇಡೀ ಕುಟುಂಬವನ್ನು ಒಂದೇ ಪ್ರೀಮಿಯಂನಿಂದ ಕವರ್ ಮಾಡುತ್ತದೆ ಮತ್ತು ವಿಮಾ ಮೊತ್ತವು ವಿಮೆ ಪಡೆದ ಕುಟುಂಬ ಸದಸ್ಯರ ಮಧ್ಯೆ ಫ್ಲೋಟ್ ಆಗುತ್ತದೆ. ಭಾರತದಾದ್ಯಂತದ ಆಸ್ಪತ್ರೆಗಳಲ್ಲಿ, ವಿಮೆದಾರರು ಮತ್ತು ಕುಟುಂಬದ ಸದಸ್ಯರು ಖಾತರಿ ಗುಣಮಟ್ಟದ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ, ಆಧುನಿಕ ಚಿಕಿತ್ಸೆಗಳು, ರೋಗನಿರ್ಣಯ, ಶಸ್ತ್ರಚಿಕಿತ್ಸೆಗಳು ಇತ್ಯಾದಿಗಳನ್ನು ಇತರ ಫೀಚರ್‌ಗಳ ಜೊತೆಗೆ ಪಡೆದುಕೊಳ್ಳಬಹುದು.
ನಮ್ಮ ಬೆಸ್ಟ್-ಬೈ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಪಟ್ಟಿ
ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಪರಿಗಣಿಸಬೇಕಾದ ಪ್ರಮುಖ ಅಂಶಗಳು
ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಸಾಕಷ್ಟು ಕಠಿಣ ಕೆಲಸವಾಗಿದೆ. ಹಲವಾರು ಸಂಸ್ಥೆಗಳು ಹೆಲ್ತ್ ಇನ್ಶೂರೆನ್ಸ್ ಅನ್ನು ಒದಗಿಸುತ್ತಿರುವಾಗ ಅತ್ಯುತ್ತಮ ಪ್ಲ್ಯಾನ್ ಅನ್ನು ಆಯ್ಕೆ ಮಾಡುವುದು ಕಷ್ಟವೇ ಸರಿ. ಸೇರ್ಪಡೆ ಮತ್ತು ಹೊರಗಿಡುವಿಕೆಗಳು ಪ್ರತಿ ಪಾಲಿಸಿಗೆ ಭಿನ್ನವಾಗಿರುತ್ತವೆ. ನೀವು ಸಂಗ್ರಹಿಸುವ ಪ್ರತಿಯೊಂದು ಮಾಹಿತಿಯು ಸೂಕ್ತ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ.
ನೀವು ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಸೂಕ್ತವಾದ ಇನ್ಶೂರೆನ್ಸ್ ಸೇವಾದಾತರನ್ನು ಆರಿಸಿಕೊಳ್ಳುವುದು ಸಹ ಪ್ರಮುಖವಾಗಿದೆ.
ಕಂಪನಿಯು ಒದಗಿಸುತ್ತಿರುವ ಪ್ಲ್ಯಾನ್‌ಗಳನ್ನು ಪರಿಶೀಲಿಸಿ. ಪ್ರತಿಯೊಂದು ಇನ್ಶೂರೆನ್ಸ್ ಕಂಪನಿಯು ತನ್ನದೇ ಆದ ನೆಟ್‌ವರ್ಕ್ ಆಸ್ಪತ್ರೆಗಳನ್ನು ಹೊಂದಿರುತ್ತದೆ, ಆದ್ದರಿಂದ ಆಸ್ಪತ್ರೆಗಳ ವ್ಯಾಪಕ ನೆಟ್‌ವರ್ಕ್ ಅನ್ನು ಒದಗಿಸುವ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ. ಕ್ಲೈಮ್ ಸೆಟಲ್‌ಮೆಂಟ್ ಅನುಪಾತಕ್ಕೆ ಸಮಾನ ಪ್ರಾಮುಖ್ಯತೆಯನ್ನು ನೀಡಿ ಮತ್ತು ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತವನ್ನು ಹೊಂದಿರುವ ಕಂಪನಿ ನಿಮ್ಮ ಆಯ್ಕೆಯಾಗಿರಲಿ.
ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡುವಾಗ, ಈ ಕೆಳಗಿನವುಗಳ ಬಗ್ಗೆ ಗಮನವಿರಲಿ:
ಸೇರ್ಪಡೆ ಮತ್ತು ಹೊರಗಿಡುವಿಕೆಯು ಪ್ರಮುಖ ಅಂಶಗಳಾಗಿವೆ, ಆದ್ದರಿಂದ ಪಾಲಿಸಿಯನ್ನು ಆಯ್ಕೆಮಾಡುವ ಮೊದಲು ಅವುಗಳನ್ನು ಎಚ್ಚರಿಕೆಯಿಂದ ಓದುವುದು ಮಹತ್ವದ್ದಾಗಿದೆ. ಇದು ಕ್ಲೈಮ್ ಪ್ರಕ್ರಿಯೆ ಸಂದರ್ಭದಲ್ಲಿ ಉಂಟಾಗಬಹುದಾದ ತಪ್ಪು ಕಲ್ಪನೆಗಳನ್ನು ತಪ್ಪಿಸಬಹುದು. ಕ್ಲೈಮ್ ಸಲ್ಲಿಸುವ ಮೊದಲು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಅನ್ನು ಅರ್ಥಮಾಡಿಕೊಳ್ಳುವುದರಿಂದ ನಿಮಗೆ ಅನೇಕ ಅನುಕೂಲಗಳಿವೆ.
ಹೆಲ್ತ್ ಇನ್ಶೂರೆನ್ಸ್‌ನ ವೇಟಿಂಗ್ ಅವಧಿ ಕೂಡ ಪ್ರಮುಖ ಅಂಶವಾಗಿದೆ ಏಕೆಂದರೆ, ವೇಟಿಂಗ್ ಅವಧಿಯಲ್ಲಿ, ಪ್ರಯೋಜನಗಳನ್ನು ಪಡೆದುಕೊಳ್ಳಲು ನೀವು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಹಾಗಾಗಿ, ವೇಟಿಂಗ್ ಅವಧಿಗಳ ಅವಧಿಯನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಕಡಿಮೆ ವೇಟಿಂಗ್ ಅವಧಿಯನ್ನು ಹೊಂದಿರುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.
ನೆಟ್‌ವರ್ಕ್ ಆಸ್ಪತ್ರೆಗಳೆಂದರೆ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಒದಗಿಸಲು ಇನ್ಶೂರೆನ್ಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳಾಗಿವೆ. ಹಲವಾರು ನೆಟ್‌ವರ್ಕ್ ಆಸ್ಪತ್ರೆಗಳನ್ನು ಹೊಂದಿರುವ ವಿಮೆಗಾರರನ್ನು ಸಂಪರ್ಕಿಸಿ, ಏಕೆಂದರೆ ಆಗ ನೀವು ನಿಮಗೆ ಸೂಕ್ತವಾಗುವ ಆಸ್ಪತ್ರೆಯನ್ನು ಆಯ್ಕೆಮಾಡಲು ಹಲವಾರು ಆಯ್ಕೆಗಳನ್ನು ಹೊಂದಿರುತ್ತೀರಿ.
ಸಹ-ಪಾವತಿಯು ವಿಮೆದಾರರು ಮತ್ತು ವಿಮೆಗಾರರ ನಡುವೆ ವೈದ್ಯಕೀಯ ಬಿಲ್‌ಗಳ ಹಂಚಿಕೆಯನ್ನು ಸೂಚಿಸುತ್ತದೆ. ಕೆಲವು ಪಾಲಿಸಿಗಳಲ್ಲಿ ಸಹ-ಪಾವತಿ ಕಡ್ಡಾಯವಾಗಿದೆ ಮತ್ತು ಕೆಲವು ಪಾಲಿಸಿಗಳಲ್ಲಿ ಇದು ಐಚ್ಛಿಕವಾಗಿರುತ್ತದೆ. ನಿಮ್ಮ ಸಹ-ಪಾವತಿಯ ಬಗ್ಗೆ ತಿಳಿದಿರುವುದು ನಿಮ್ಮ ಹಣಕಾಸು ಯೋಜನೆಯನ್ನು ತಯಾರಿಸುವಾಗ ನಿಮಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ.
ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಉಪ-ಮಿತಿಗಳು ಸಾಮಾನ್ಯ ಅಂಶವಾಗಿವೆ. ಕೊಠಡಿ ಬಾಡಿಗೆ, ಮನೆಯಲ್ಲಿಯೇ ಚಿಕಿತ್ಸೆ, ಆಯುಷ್ ಚಿಕಿತ್ಸೆ, ಕಣ್ಣಿನ ಪೊರೆ ಚಿಕಿತ್ಸೆ ಇತ್ಯಾದಿಗಳಂತಹ ವಿವಿಧ ಖರ್ಚುಗಳಿಗೆ ಪಾಲಿಸಿಯು ಉಪ-ಮಿತಿಗಳನ್ನು ಹೊಂದಿರಬಹುದು. ಆದ್ದರಿಂದ, ಅಂತಹ ಖರ್ಚುಗಳ ಕ್ಲೈಮ್ ಮೊತ್ತವು ಸೂಚಿಸಲಾದ ಉಪ-ಮಿತಿಗಳಿಗೆ ಒಳಪಟ್ಟಿರುತ್ತದೆ ಮತ್ತು ನೀವು ಬಾಕಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಸಂಚಿತ ಬೋನಸ್ ಅನ್ನು ಕ್ಲೈಮ್ ರಹಿತ ಬೋನಸ್ ಎಂದೂ ಕರೆಯಲಾಗುತ್ತದೆ. ಪಾಲಿಸಿಯ ಅವಧಿಯಲ್ಲಿ ನೀವು ಕ್ಲೈಮ್ ಅನ್ನು ಮಾಡದಿದ್ದರೆ, ನಿಮ್ಮ ವಿಮಾ ಮೊತ್ತವನ್ನು ನಿರ್ದಿಷ್ಟ ಶೇಕಡಾವಾರು ಹೆಚ್ಚಿಸಲಾಗುತ್ತದೆ. ಅಂತಹ ವರ್ಧನೆಯನ್ನು ಸಂಚಿತ ಬೋನಸ್ ಎಂದು ಕರೆಯಲಾಗುತ್ತದೆ. ಸಂಚಿತ ಬೋನಸ್ ಅಗತ್ಯ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ.
ನಮ್ಮ ಅತ್ಯುತ್ತಮ ವಿಶೇಷ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಮಧುಮೇಹ ಸಂಬಂಧಿತ ಪಾಲಿಸಿ
ಬದಲಾಗುತ್ತಿರುವ ಜೀವನಶೈಲಿಯು ಗಂಭೀರ ಕಾಯಿಲೆಗಳು ಮತ್ತು ಅಸ್ವಸ್ಥತೆಗಳಿಗೆ ಕಾರಣವಾಗುತ್ತಿದೆ. ಅವುಗಳಲ್ಲೊಂದು ಮಧುಮೇಹವಾಗಿದೆ. ವೈದ್ಯಕೀಯ ಹಣದುಬ್ಬರದ ಏರಿಕೆಯ ಸಂದರ್ಭದಲ್ಲಿ, ಡಯಾಬಿಟೀಸ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮನ್ನು ಆರ್ಥಿಕ ಕುಸಿತದಿಂದ ಪಾರುಮಾಡಬಹುದು. ನಮ್ಮ ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿಯನ್ನು ವಿಶೇಷವಾಗಿ ವಿಧ 1 ಮತ್ತು ವಿಧ 2 ಮಧುಮೇಹದಿಂದ ಬಾಧಿತವಾಗಿರುವ ಜನರ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
ಕ್ಯಾನ್ಸರ್ ಸಂಬಂಧಿತ ಪಾಲಿಸಿ
ಕ್ಯಾನ್ಸರ್ ಗಂಭೀರ ಅಪಾಯವಾಗಿದೆ ಮತ್ತು ಪ್ರಪಂಚದಾದ್ಯಂತ ಉಂಟಾಗುವ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕ್ಯಾನ್ಸರ್‌ಗೆ ಸಂಬಂಧಿಸಿದ ನಿರ್ದಿಷ್ಟ ಇನ್ಶೂರೆನ್ಸ್ ಪಾಲಿಸಿಯು ಆಸ್ಪತ್ರೆಗೆ ದಾಖಲಾಗುವಿಕೆ, ಚಿಕಿತ್ಸೆ ಮತ್ತು ಕ್ಯಾನ್ಸರ್‌ಗೆ ಸಂಬಂಧಿಸಿದ ರೋಗನಿರ್ಣಯವನ್ನು ಕವರ್ ಮಾಡುತ್ತದೆ. ನಮ್ಮ ಸ್ಟಾರ್ ಕ್ಯಾನ್ಸರ್ ಕೇರ್ ಪ್ಲಾಟಿನಮ್ ಇನ್ಶೂರೆನ್ಸ್ ಪಾಲಿಸಿಯನ್ನು ವಿಶೇಷವಾಗಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ, ಇದು ಕ್ಯಾನ್ಸರೇತರ ಕಾಯಿಲೆಗಳನ್ನೂ ಕೂಡ ಕವರ್ ಮಾಡುತ್ತದೆ.
ಹೃದ್ರೋಗ ಸಂಬಂಧಿತ ಪಾಲಿಸಿ
ಜೀವನಶೈಲಿಯ ಬದಲಾವಣೆಗಳಿಂದ ಹಲವಾರು ತೊಡಕುಗಳು ಎದುರಾಗುತ್ತವೆ. ನಿರಂತರವಾಗಿ ಹೆಚ್ಚುತ್ತಿರುವ ಹೃದಯ ಪರಿಚಲನಾ ಕಾಯಿಲೆಗಳು ಮತ್ತು ಇತರ ಸಂಬಂಧಿತ ತೊಡಕುಗಳ ಅಪಾಯಗಳೊಂದಿಗೆ, ನೀವು ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಸಹಾಯದೊಂದಿಗೆ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮಹತ್ವದ್ದಾಗಿದೆ. ನಮ್ಮ ಸ್ಟಾರ್ ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ಪಾಲಿಸಿ-ಪ್ಲಾಟಿನಂ ಹೃದಯ ಸಂಬಂಧಿ ಕಾಯಿಲೆಗಳಿಗೆ ವ್ಯಾಪಕ ಕವರೇಜ್ ಅನ್ನು ಒದಗಿಸುತ್ತದೆ. ಅಷ್ಟೆ ಅಲ್ಲದೇ, ಇದು ಹೃದ್ರೋಗೇತರ ಕಾಯಿಲೆಗಳಿಗೂ ಕವರೇಜ್ ಅನ್ನು ಒದಗಿಸುತ್ತದೆ.
ಗಂಭೀರ ಅನಾರೋಗ್ಯ ಸಂಬಂಧಿತ ಪಾಲಿಸಿ
ಹೆಚ್ಚಿನ ಸಂದರ್ಭಗಳಲ್ಲಿ, ಆರೋಗ್ಯ ಸಮಸ್ಯೆಗಳು ಅನಿರೀಕ್ಷಿತವಾಗಿ ಎದುರಾಗುತ್ತವೆ ಮತ್ತು ಹೆಚ್ಚುತ್ತಿರುವ ವೈದ್ಯಕೀಯ ಹಣದುಬ್ಬರವು ತೊಂದರೆಯನ್ನು ಹೆಚ್ಚಿಸುತ್ತದೆ. ಗಂಭೀರ ಕಾಯಿಲೆಯ ಚಿಕಿತ್ಸೆಯು ದುಬಾರಿಯಾಗಿದೆ ಮತ್ತು ದೀರ್ಘಕಾಲಿಕವಾಗಿದೆ. ಚಿಕಿತ್ಸೆಯ ಖರ್ಚುಗಳ ಬಗ್ಗೆ ಇನ್ನು ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ನಮ್ಮ ಸ್ಟಾರ್ ಕ್ರಿಟಿಕಲ್ ಇಲ್‌ನೆಸ್ ಮಲ್ಟಿಪೇ ಇನ್ಶೂರೆನ್ಸ್ ಪಾಲಿಸಿಯು 37 ಗಂಭೀರ ಕಾಯಿಲೆಗಳ ವಿರುದ್ಧ ನಿಮ್ಮನ್ನು ರಕ್ಷಿಸುತ್ತದೆ. ಪಾಲಿಸಿಯು 4 ಗುಂಪುಗಳ ಅಡಿಯಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವಾಗ ಇಡಿಗಂಟನ್ನು ಒದಗಿಸುತ್ತದೆ.
ಸ್ಟಾರ್ ಹೆಲ್ತ್ ಏಕೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯಾಗಿದೆ?
ಗ್ರಾಹಕರಿಗೆ ಅತ್ಯಂತ ಕಾಳಜಿಯಿಂದ ಸೇವೆ ಸಲ್ಲಿಸುವುದು ನಮ್ಮ ಧ್ಯೇಯವಾಗಿದೆ. ನಾವು ನಿಮ್ಮ ಮಾತನ್ನು ಗಂಭೀರವಾಗಿ ಕೇಳಿಸಿಕೊಳ್ಳುವ ಮೂಲಕ ನಿಮ್ಮ ನಂಬಿಕೆಯನ್ನು ಗಳಿಸಲು ಸಾಧ್ಯವಾಗುವಂತಹ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಒದಗಿಸಲು ಬಯಸುತ್ತೇವೆ.
ನಾವು ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿದ್ದೇವೆ ಮತ್ತು ನಮ್ಮ ಗ್ರಾಹಕ-ಕೇಂದ್ರಿತ ಪಾಲಿಸಿಗಳ ಇತ್ತೀಚಿನ ಸಾಧನೆಗಳ ಪಟ್ಟಿ ಇಲ್ಲಿದೆ:
- ರಿಟೇಲ್ ಪ್ರಾಡಕ್ಟ್‌ಗಳಿಗೆ ಭಾರತದ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಕಂಪನಿ - ಇನ್ಶೂರೆನ್ಸ್ ಅಲರ್ಟ್‌ಗಳು
- ವರ್ಷ 2020 ರ ಅತ್ಯಂತ ನವೀನ ಹೊಸ ಪ್ರಾಡಕ್ಟ್
- ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯು ASSOCHAM ನ ಇನ್ಶೂರೆನ್ಸ್ ಇ-ಶೃಂಗಸಭೆ ಮತ್ತು ಪ್ರಶಸ್ತಿಗಳು 2020 ರಲ್ಲಿ ವರ್ಷದ ಅತ್ಯಂತ ನವೀನ ಹೊಸ ಪ್ರಾಡಕ್ಟ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
- ಎಕನಾಮಿಕ್ ಟೈಮ್ಸ್‌ನ ಅತ್ಯುತ್ತಮ BFSI ಬ್ರ್ಯಾಂಡ್‌ಗಳು 2019
- ವರ್ಷದ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಸೇವಾದತರು - ಬಿಸಿನೆಸ್ ಟುಡೆ, ಮನಿ ಟುಡೇ ಫಿನಾನ್ಶಿಯಲ್ ಅವಾರ್ಡ್ನ್ 2018–2019
- ಔಟ್‌ಲುಕ್ ಮನಿ ಅವಾರ್ಡ್ಸ್ 2018 ರ ಮೂಲಕ ವರ್ಷದ ಹೆಲ್ತ್ ಇನ್ಶೂರೆನ್ಸ್ ಸೇವಾದಾತರ ಸಿಲ್ವರ್ ಅವಾರ್ಡ್
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ನಿಮ್ಮ ಇನ್ಶೂರೆನ್ಸ್ ಸೇವಾದಾತರಾಗಿ ಆಯ್ಕೆಮಾಡಿಕೊಳ್ಳಲು ಕಾರಣಗಳು
- ಗ್ರಾಹಕ ಕೇಂದ್ರಿತ ಕಂಪನಿ
ಪ್ರಾಡಕ್ಟ್‌ಗಳು ಗ್ರಾಹಕ ಕೇಂದ್ರಿತವಾಗಿವೆ ಮತ್ತು ಅವುಗಳನ್ನು ಗ್ರಾಹಕರ ಅಗತ್ಯಗಳನ್ನು ಆಧರಿಸಿ ವಿನ್ಯಾಸಗೊಳಿಸಲಾಗಿದೆ - ಸ್ಟಾರ್ ಡಯಾಬಿಟಿಸ್ ಸೇಫ್ ಇನ್ಶೂರೆನ್ಸ್ ಪಾಲಿಸಿ, ಸ್ಟಾರ್ ಕ್ಯಾನ್ಸರ್ ಕೇರ್ ಪ್ಲಾಟಿನಂ ಇನ್ಶೂರೆನ್ಸ್ ಪಾಲಿಸಿ, ಸ್ಟಾರ್ ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ಪಾಲಿಸಿ-ಪ್ಲಾಟಿನಂ, ಸ್ಟಾರ್ ಕ್ಯಾನ್ಸರ್ ಕೇರ್ ಪ್ಲಾಟಿನಂ ಇನ್ಶೂರೆನ್ಸ್ ಪಾಲಿಸಿ, ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ ಮತ್ತು ನಮ್ಮ ಗ್ರಾಹಕರು ಬಯಸುವ ರೀತಿಯಲ್ಲಿ ಸೇವೆ ಸಲ್ಲಿಸಲು ರೂಪಿತವಾಗುತ್ತಿರುವ ಇನ್ನೂ ಹಲವಾರು.
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಗ್ರಾಹಕರಿಗೆ ಆದ್ಯತೆ ಎಂಬ ನಂಬಿಕೆ ಮತ್ತು ಸಮಗ್ರತೆಯನ್ನು ಒಳಗೊಂಡಿರುವ ಪ್ರಮುಖ ಮೌಲ್ಯಗಳ ಗುಂಪಿನೊಂದಿಗೆ ಕಾರ್ಯನಿರ್ವಹಿಸುತ್ತದೆ. ನಿಮಗಾಗಿ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ರೂಪಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ. ಸ್ಟಾರ್ ಕುಟುಂಬದ ಭಾಗವಾಗಿರುವವರ ಜೀವನದಲ್ಲಿ ಧನಾತ್ಮಕ ಪ್ರಭಾವ ಬೀರುವ ಅವಕಾಶ ದೊರತದ್ದು ನಮ್ಮ ಸೌಭಾಗ್ಯವೇ ಸರಿ.
- 89.9% ಕ್ಲೈಮ್‌ಗಳನ್ನು ನಮ್ಮ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಅಡಿಯಲ್ಲಿ 2 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸೆಟಲ್ ಮಾಡಲಾಗಿದೆ
ಭಾರತದಾದ್ಯಂತದ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ 2 ಗಂಟೆಗಳೊಳಗೆ ಕ್ಯಾಶ್‌ಲೆಸ್ ಸೌಲಭ್ಯ ಲಭ್ಯವಾಗುತ್ತದೆ. ನಮ್ಮ ಇನ್-ಹೌಸ್ ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆಯು ಈ ಬೃಹತ್ ಯಶಸ್ಸಿಗೆ ಕಾರಣವಾಗಿರುವ ಪ್ರಮುಖ ಅಂಶವಾಗಿದೆ. ಪರಿಣಿತ ಇನ್-ಹೌಸ್ ವೈದ್ಯರ ಮೂಲಕ ಕ್ಲೈಮ್ ಪ್ರಕ್ರಿಯೆ ಮತ್ತು ಸೆಟಲ್‌ಮೆಂಟ್ ಜಂಜಾಟ-ರಹಿತವಾಗಿರುವುದನ್ನು ನಾವು ಖಾತ್ರಿಪಡಿಸುತ್ತೇವೆ.
- ಪ್ಯಾನ್ ಇಂಡಿಯಾ ಉಪಸ್ಥಿತಿ
ಭಾರತದಾದ್ಯಂತ ಹೆಚ್ಚುತ್ತಿರುವ 14,000+ ನೆಟ್‌ವರ್ಕ್ ಆಸ್ಪತ್ರೆಗಳು.
- ಪರಿಣತ ವೈದ್ಯರಿಂದ ಕ್ಲೈಮ್ ಸೆಟಲ್‌ಮೆಂಟ್‌ಗಳು
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಪ್ರಕ್ರಿಯೆಗಳನ್ನು ವೇಗವಾಗಿ ಟ್ರ್ಯಾಕ್ ಮಾಡಲೆಂದೇ ಮೀಸಲಾದ ಆಂತರಿಕ ವೈದ್ಯರ ತಂಡ. ಈ ತಂಡವು ಹಣವನ್ನು ಗಳಿಸಲು ಮತ್ತು ಹೆಲ್ತ್ ಇನ್ಶೂರೆನ್ಸ್‌ನಿಂದ ಲಾಭ ಪಡೆಯುವ ದುರುದ್ದೇಶವನ್ನು ಇಟ್ಟುಕೊಂಡು ಕಾನನೂನುಬಾಹಿರ ವಿಧಾನಗಳನ್ನು ಬಳಸುವವರನ್ನು ಪತ್ತೆಹಚ್ಚುತ್ತದೆ.
- ಥರ್ಡ್ ಪಾರ್ಟಿ ನಿರ್ವಹಣೆ ರಹಿತ (TPA)
ಕ್ಲೈಮ್ ಕಾಲಮಿತಿಯೊಳಗೆ ಸೆಟಲ್ ಆದಾಗ ಮಾತ್ರ ಅದಕ್ಕೆ ಬೆಲೆ. ಸಾಮಾನ್ಯವಾಗಿ, ಅನೇಕ ಇನ್ಶೂರೆನ್ಸ್ ಕಂಪನಿಗಳು TPA ಸೇವೆಗಳನ್ನು ಪಡೆದುಕೊಳ್ಳುತ್ತವೆ ಮತ್ತು ಕ್ಲೈಮ್ ಪ್ರಕ್ರಿಯೆಗೆ ಪ್ರೋತ್ಸಾಹ ನೀಡುತ್ತವೆ. ಸ್ಟಾರ್ ಹೆಲ್ತ್ ಇನ್ಶೂರೆನ್ಸ್ TPA ಮೇಲೆ ಅವಲಂಬಿತವಾಗಿಲ್ಲ ಆದರೆ ಕ್ಲೈಮ್‌ಗಳನ್ನು ವೇಗವಾಗಿ ಪ್ರಕ್ರಿಯೆಗೊಳಿಸಲು ಮತ್ತು ಅತ್ಯಂತ ಅಗತ್ಯವಿರುವ ಸಂದರ್ಭದಲ್ಲಿ ಕಡಿಮೆ ಸಮಯದಲ್ಲಿ ಅವುಗಳನ್ನು ಸೆಟಲ್ ಮಾಡಲು ನೆರವಾಗುವ ನಮ್ಮ ಆಂತರಿಕ ಕ್ಲೈಮ್ ತಂಡವನ್ನು ಅವಲಂಬಿಸಿದೆ.
- ಎಲ್ಲರಿಗಾಗಿ ಉತ್ತಮ ಗುಣಮಟ್ಟದ ಉಚಿತ ಟೆಲಿಮೆಡಿಸಿನ್ ಸೌಲಭ್ಯ
ಆರೋಗ್ಯವು ಎಲ್ಲರಿಗೂ ಅಗತ್ಯವಗೈದೆ ಮತ್ತು ನಮ್ಮ ಗ್ರಾಹಕರಿಗೆ ಮಾತ್ರವಲ್ಲದೆ ಎಲ್ಲರಿಗೂ ಅದು ದೊರಕಬೇಕೆಂಬುದೇ ನಮ್ಮ ಬಯಕೆಯಾಗಿದೆ. ಆದ್ದರಿಂದ, ನಮ್ಮ ಉಚಿತ ಟೆಲಿಮೆಡಿಸಿನ್ ಸೌಲಭ್ಯಗಳನ್ನು ಯಾರಾದರೂ ಪಡೆದುಕೊಳ್ಳಬಹುದಾಗಿದೆ. ಟಾಕ್ ಟು ಸ್ಟಾರ್ ಆಪ್ ಈ ಉದ್ದೇಶಕ್ಕಾಗಿಯೇ ವಿನ್ಯಾಸಗೊಳಿಸಲಾದ ವಿಶೇಷ ಅಪ್ಲಿಕೇಶನ್ ಆಗಿದೆ.
- ಸ್ವಾಸ್ಥ್ಯ ಕಾರ್ಯಕ್ರಮಗಳು
ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವ ವಿಶಿಷ್ಟ ಸ್ವಾಸ್ಥ್ಯ ಕಾರ್ಯಕ್ರಮಗಳೊಂದಿಗೆ ಉತ್ತಮ ಆರೋಗ್ಯದ ಸಕ್ರಿಯ ನಿರ್ವಹಣೆಯನ್ನು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಬೆಂಬಲಿಸುತ್ತದೆ.
ಇತರ ಪ್ರಾಡಕ್ಟ್‌ಗಳು
ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ನ ಕಾರ್ಯವಿಧಾನಗಳೇನು?
ಸ್ಟಾರ್ ಹೆಲ್ತ್ ಕ್ಲೈಮ್ ಸೇವೆಗಳು, ಸರಳವಾದ, ಗ್ರಾಹಕ-ಸ್ನೇಹಿ, ಜಂಜಾಟ-ಮುಕ್ತ ಪ್ರಕ್ರಿಯೆಯೊಂದಿಗೆ ಪ್ರಾಮಾಣಿಕ ಸೆಟಲ್‌ಮೆಂಟ್ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ. ಹೆಲ್ತ್ ಇನ್ಶೂರೆನ್ಸ್ ತಜ್ಞರಾಗಿ, ನಾವು ಭಾರತದಲ್ಲಿನ ನಮ್ಮ ಎಲ್ಲಾ ಸಂಬಂಧಿತ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಕ್ಲೈಮ್‌ಗಳನ್ನು ನೀಡುತ್ತೇವೆ.
ನಿಮಗೆ ತಿಳಿದಿರಬೇಕಾದ ಹೆಲ್ತ್ ಇನ್ಶೂರೆನ್ಸ್ ನಿಯಮಗಳು
ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ಕೆಲವು ಪದಗಳ ಕುರಿತು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಪದಗಳು ಪಾಲಿಸಿ ಕವರೇಜ್ ಮತ್ತು ಅದರ ಮಾನದಂಡಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಪ್ರಮುಖ ತಪ್ಪುಗಳನ್ನು ತಪ್ಪಿಸಲು ಪದಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಆದಾಗ್ಯೂ, ಕೆಲವು ಪದಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.
ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಸಹಜ ಮತ್ತು ಸಾಮಾನ್ಯ ಪದಗಳನ್ನು ಕೆಳಗೆ ನೀಡಲಾಗಿದೆ.
1. ವಿಮಾಮೊತ್ತ
ವಿಮಾ ಮೊತ್ತವು ಪಾಲಿಸಿ ಕವರೇಜ್ ಮೊತ್ತವಾಗಿದೆ.
2. ಪ್ರೀಮಿಯಂ
ಪ್ರೀಮಿಯಂ ಎಂದರೆ ನೀವು ವಿಮಾಗಾರರಿಗೆ ಅಥವಾ ಹೆಲ್ತ್ ಇನ್ಶೂರೆನ್ಸ್ ಕಂಪನಿಗೆ ಖರೀದಿಸಿದ ಪಾಲಿಸಿಯ ಪರವಾಗಿ ಪಾವತಿಸಬೇಕಾದ ಮೊತ್ತವಾಗಿದೆ. ಈ ಪ್ರೀಮಿಯಂ ನೀವು ಆಯ್ಕೆ ಮಾಡಿದ ಪಾಲಿಸಿಯ ವಿಧ, ಪಾಲಿಸಿದಾರ, ವಯಸ್ಸು ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
3. ನಗದುರಹಿತ ಕ್ಲೈಮ್‌ಗಳು
ನಗದುರಹಿತ ಕ್ಲೈಮ್‌ಗಳು ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳಾಗಿದ್ದು, ವಿಮಾಗಾರರ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಇದನ್ನು ಪಡೆಯಬಹುದು.
4. ಆ್ಯಡ್-ಆನ್ ಕವರ್‌ಗಳು
ಆ್ಯಡ್-ಆನ್ ಕವರ್‌ಗಳು ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಒಳಗೊಂಡಿರುವ ನಮಗೆ ತಿಳಿದಿರದ ವೈದ್ಯಕೀಯ ತುರ್ತು ಪರಿಸ್ಥಿತಿಗಳ ವಿರುದ್ಧ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಹೆಚ್ಚುವರಿ ಆರ್ಥಿಕ ಕವರ್‌ಗಳನ್ನು ನೀಡುವ ಹೆಚ್ಚುವರಿ ಫೀಚರ್‌ಗಳಾಗಿವೆ.
ಆ್ಯಡ್-ಆನ್ ಕವರ್‌ಗಳ ಇತರ ಹೆಸರುಗಳೆಂದರೆ ರೈಡರ್‌ಗಳು ಮತ್ತು ಐಚ್ಛಿಕ ಕವರ್‌ಗಳಾಗಿವೆ. ಗಂಭೀರ ಅನಾರೋಗ್ಯ, ಕೊಠಡಿ ಬಾಡಿಗೆ ಮನ್ನಾ, ಡೆಲಿವರಿ ಕವರ್ ಮತ್ತು ಆಸ್ಪತ್ರೆಯ ನಗದು ಪ್ರಯೋಜನಗಳು ನಿಮ್ಮ ಮೂಲ ಹೆಲ್ತ್ ಇನ್ಶೂರೆನ್ಸ್ ಅನ್ನು ಹೆಚ್ಚಿಸುವ ಕೆಲವು ಸಾಮಾನ್ಯ ಆ್ಯಡ್-ಆನ್‌ಗಳಾಗಿವೆ.
5. ಗಂಭೀರ ಅನಾರೋಗ್ಯ
ಗಂಭೀರ ಅನಾರೋಗ್ಯವೆಂದರೆ ಮೂತ್ರಪಿಂಡ ವೈಫಲ್ಯ, ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ಮಾರಣಾಂತಿಕ ವೈದ್ಯಕೀಯ ಪರಿಸ್ಥಿತಿಗಳಾಗಿವೆ. ಅಂತಹ ಗಂಭೀರ ಕಾಯಿಲೆಗಳಿಗೆ, ಈ ಕಾಯಿಲೆಗಳನ್ನು ಒಳಗೊಳ್ಳುವ ವಿಶೇಷ ಪ್ಲ್ಯಾನ್‌ಗಳಿವೆ. ಹೆಚ್ಚುವರಿಯಾಗಿ ನೀವು ಆ್ಯಡ್-ಆನ್ ಅಥವಾ ರೈಡರ್ ಕವರ್‌ಗಳನ್ನು ಪಡೆಯಬಹುದು.
6. ನೆಟ್‌ವರ್ಕ್ ಆಸ್ಪತ್ರೆಗಳು
ಎಲ್ಲಾ ಇನ್ಶೂರೆನ್ಸ್ ಕಂಪನಿಗಳು ದೇಶದ ನಿರ್ದಿಷ್ಟ ಸಂಖ್ಯೆಯ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಆಸ್ಪತ್ರೆಗಳೊಂದಿಗಿನ ಈ ಸಂಬಂಧಗಳನ್ನು ನೆಟ್‌ವರ್ಕ್ ಆಸ್ಪತ್ರೆಗಳು ಎಂದು ಕರೆಯಲಾಗುತ್ತದೆ.
7. ಆಟೋಮ್ಯಾಟಿಕ್ ರಿಸ್ಟೋರೇಷನ್
ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಆಟೋಮ್ಯಾಟಿಕ್ ರಿಸ್ಟೋರೇಷನ್ ಪ್ರಯೋಜನವನ್ನು ನೀಡುತ್ತವೆ. ನಿಮ್ಮ ವಿಮಾ ಮೊತ್ತವು ಖಾಲಿಯಾದಾಗ ನೀವು ವಿಮಾ ಬ್ಯಾಕಪ್‌ನಿಂದ ಪ್ರಯೋಜನವನ್ನು ಪಡೆಯುತ್ತೀರಿ. ಆಟೋಮ್ಯಾಟಿಕ್ ರಿಸ್ಟೋರೇಷನ್‌ನಲ್ಲಿ ಪಾಲಿಸಿ ಅವಧಿಯಲ್ಲಿ ಮುಂಬರುವ ಆಸ್ಪತ್ರೆ ದಾಖಲಾತಿಗೆ ವಿಮಾ ಮೊತ್ತವನ್ನು ಮರುಲೋಡ್ ಮಾಡಲಾಗುತ್ತದೆ.
8. ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆ/ಸಹ-ಅಸ್ವಸ್ಥತೆಗಳು
ಅಧಿಕ ರಕ್ತದೊತ್ತಡ, COPD, ಮೂತ್ರಪಿಂಡದ ಕಾಯಿಲೆಗಳು, ಮಧುಮೇಹ ಮತ್ತು ಇತರ ಪ್ರಮುಖ ಆರೋಗ್ಯ ಸಮಸ್ಯೆಗಳಂತಹ ಸಹ-ರೋಗಗಳನ್ನು ಹೆಲ್ತ್ ಇನ್ಶೂರೆನ್ಸ್‌ಗೆ ಅಪಾಯಕಾರಿ ಅಂಶಗಳು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮೇಲೆ ತಿಳಿಸಲಾದ ಯಾವುದೇ ಸಹ-ಅಸ್ವಸ್ಥತೆಯನ್ನು ಹೊಂದಿರುವ ಜನರಿಗೆ ಹೆಚ್ಚಿನ ಪ್ರೀಮಿಯಂ ಅನ್ನು ವಿಧಿಸಲಾಗುತ್ತದೆ.
9. ಹೊರಗಿಡುವಿಕೆಗಳು
ಹೊರಗಿಡುವಿಕೆ ಅಥವಾ ಮಿತಿಗಳು ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ತಮ್ಮ ಪಾಲಿಸಿ ಕರಾರುಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸುವ ಸಂದರ್ಭಗಳು ಮತ್ತು ಷರತ್ತುಗಳಾಗಿವೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ತಿರಸ್ಕರಿಸಬಹುದು ಅಥವಾ ಮುಂದೆ ಪ್ರಕ್ರಿಯೆಗೊಳಿಸಲಾಗುವುದಿಲ್ಲ.
10. ಒಳಗೊಳ್ಳುವಿಕೆಗಳು
ಒಳಗೊಳ್ಳುವಿಕೆಗಳು ಅಥವಾ ಕವರೇಜ್ ಪ್ರಯೋಜನಗಳು ನೀವು ಸರಿಯಾಗಿ ಪರಿಶೀಲಿಸಬೇಕಾದ ಒಂದು ವಿಭಾಗವಾಗಿದೆ. ಇವುಗಳು ವಿಮಾಗಾರರು ನಿಮಗೆ ನೀಡುವ ಪರಿಹಾರವನ್ನು ಮತ್ತು ಪ್ರಯೋಜನಗಳನ್ನು ಇತರ ಪಾಲಿಸಿ ವೈಶಿಷ್ಟ್ಯಗಳನ್ನು ಉಲ್ಲೇಖಿಸುತ್ತದೆ. ಕೆಲವು ಸಾಮಾನ್ಯ ಒಳಗೊಳ್ಳುವಿಕೆಗಳಲ್ಲಿ ಆಸ್ಪತ್ರೆಗೆ ಸೇರಿಸುವುದು, ಅರಿವಳಿಕೆ, ಶಸ್ತ್ರಚಿಕಿತ್ಸೆ, ಆ್ಯಂಬ್ಯುಲೆನ್ಸ್ ಶುಲ್ಕಗಳು ಮತ್ತು ಚಿಕಿತ್ಸೆ-ಸಂಬಂಧಿತ ವೆಚ್ಚಗಳು ಸೇರಿವೆ.
11.ವೇಟಿಂಗ್ ಅವಧಿ
ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ಆರೋಗ್ಯ ಸ್ಥಿತಿಗಳಿಗಾಗಿ ವೇಟಿಂಗ್ ಅವಧಿ ಇರುತ್ತದೆ. ವೇಟಿಂಗ್ ಅವಧಿಯಲ್ಲಿ ನೀವು ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಪಡೆಯಲು ಸಾಧ್ಯವಿಲ್ಲ. ವಿವಿಧ ಆರೋಗ್ಯ ಪರಿಸ್ಥಿತಿಗಳು ಮತ್ತು ವಿಮಾ ಪಾಲಿಸಿಗಳಿಗೆ ವೇಟಿಂಗ್ ಅವಧಿಯು ಭಿನ್ನವಾಗಿರುತ್ತದೆ.
12. ಟಾಪ್-ಅಪ್ ಪ್ಲ್ಯಾನ್‌ಗಳು
ಟಾಪ್-ಅಪ್ ಪ್ಲ್ಯಾನ್‌ಗಳು ಮೂಲ ಪಾಲಿಸಿಯೊಂದಿಗೆ ಖರೀದಿಸಬಹುದಾದ ಪಾಲಿಸಿಗಳಾಗಿವೆ. ಮೂಲ ಪಾಲಿಸಿಯಿಂದ ಮೂಲ ವಿಮಾ ಮೊತ್ತವು ಖಾಲಿಯಾದಾಗ ಟಾಪ್-ಅಪ್ ಪ್ಲ್ಯಾನ್‌ಗಳು ಕವರ್ ಆಗುತ್ತವೆ.
13. ಸಹ-ಪಾವತಿ
ಸಹ-ಪಾವತಿ ಷರತ್ತು ಅಥವಾ ಸಹ-ಪಾವತಿಯು ಪಾಲಿಸಿದಾರರು ತೆಗೆದುಕೊಂಡ ಚಿಕಿತ್ಸೆಯಲ್ಲಿನ ವೆಚ್ಚಗಳ ಮೇಲೆ ಆಸ್ಪತ್ರೆಗೆ ಪಾವತಿಸಬೇಕಾದ ಮೊತ್ತದ ನಿಗದಿತ ಶೇಕಡಾವಾರು. ನಕಲು ಶೇಕಡಾವಾರು ಪಾಲಿಸಿಯಿಂದ ಪಾಲಿಸಿಗೆ ಬದಲಾಗುತ್ತದೆ ಮತ್ತು ಇದು ಪ್ರವೇಶ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.
ಹೆಲ್ತ್ ಇನ್ಶೂರೆನ್ಸ್ ಏಕೆ ಅವಶ್ಯವಾಗಿದೆ?
ಹೆಲ್ತ್ ಇನ್ಶೂರೆನ್ಸ್ ಏಕೆ ಅಗತ್ಯವಾಗಿದೆ ಎಂಬುದಕ್ಕೆ ಕೆಲವು ಕಾರಣಗಳು ಹೀಗಿವೆ:
- ಉತ್ತಮ ಹೆಲ್ತ್ ಪ್ಲ್ಯಾನ್ ಅನ್ನು ಖರೀದಿಸುವುದರಿಂದ ವೈದ್ಯಕೀಯ ಖರ್ಚಿನ ಬಗ್ಗೆ ಚಿಂತಿಸದೆ ಗುಣಮಟ್ಟದ ಆರೋಗ್ಯವನ್ನು ಪಡೆದುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.
- ಮೆಡಿಕಲ್ ಇನ್ಸೂರೆನ್ಸ್ ದೀರ್ಘಕಾಲಿಕ ಆರ್ಥಿಕ ಭದ್ರತೆ ಮತ್ತು ಕುಟುಂಬದ ಆರ್ಥಿಕ ಯೋಗಕ್ಷೇಮವನ್ನು ಖಾತ್ರಿಗೊಳಿಸುತ್ತದೆ.
- ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ನಂತರದ ಖರ್ಚುಗಳನ್ನು ಕವರ್ ಮೂಲಕ ನಿಮ್ಮ ಜೀವನಪರ್ಯಂತದ ಉಳಿತಾಯವನ್ನು ಕಾಪಾಡುತ್ತದೆ ಮತ್ತು ತುರ್ತು ಸಂದರ್ಭಗಳಲ್ಲಿ ಕ್ಯಾಶ್‌ಲೆಸ್ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
- ನೀವು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಸಂಬಂಧಿತ ಪೂರೈಕೆದಾರರು ಪಾಲಿಸಿ ಷರತ್ತುಗಳು ಮತ್ತು ನಿಯಮಗಳನ್ನು ಅವಲಂಬಿಸಿ ವಿಮೆದಾರರಿಗೆ ಮುನ್ನೆಚ್ಚರಿಕಾ ಆರೋಗ್ಯ ತಪಾಸಣೆ ಸೌಲಭ್ಯಗಳನ್ನು ಒದಗಿಸುತ್ತಾರೆ.
- ಹೆಲ್ತ್ ಪ್ಲ್ಯಾನ್ ನೀವು ಅಪಾಯದಲ್ಲಿರುವಾಗ ವೈದ್ಯಕೀಯ ಆರ್ಥಿಕ ಹೊರೆಯನ್ನು ಎದುರಿಸಲು ಆತ್ಮವಿಶ್ವಾಸವನ್ನು ಒದಗಿಸುತ್ತದೆ.
- ನೀವು ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಿದಾಗ, ಸೆಕ್ಷನ್ 80D (ಮಿತಿಗಳಿಗೆ ಒಳಪಟ್ಟು) ಅಡಿಯಲ್ಲಿ ಪ್ರೀಮಿಯಂಗಳಿಗೆ ಆದಾಯ ತೆರಿಗೆ ನಿಬಂಧನೆಗಳಲ್ಲಿ ತೆರಿಗೆ ಪ್ರಯೋಜನ ಮತ್ತು ವಿನಾಯಿತಿಗಳನ್ನು ನೀವು ಪಡೆಯಬಹುದು.
ಸ್ಟಾರ್‌ನಿಂದ ಸೂಕ್ತವಾದ ಹೆಲ್ತ್ ಇನ್ಸೂರೆನ್ಸ್ ಪ್ಲ್ಯಾನ್ ಅನ್ನು ಪಡೆದುಕೊಳ್ಳುವುದು ಹೇಗೆ?
ಸ್ಟಾರ್ ಹೆಲ್ತ್, ದೇಶದಾದ್ಯಂತ ಬಹು ಆಸ್ಪತ್ರೆಗಳೊಂದಿಗೆ ಪಾಲುದಾರಿಕೆ ಹೊಂದಿದೆ, ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುವ ಪಾಲಿಸಿದಾರರಿಗೆ ಕ್ಯಾಶ್‌ಲೆಸ್ ಸೇವೆಗಳು ಮತ್ತು ವೆಚ್ಚಭರಿಸುವಿಕೆ ಸೌಲಭ್ಯಗಳನ್ನು ಒದಗಿಸುತ್ತದೆ. ಸ್ಟಾರ್ ಹೆಲ್ತ್‌ನ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಏಕೆ ನಮ್ಮ ಆಯ್ಕೆಯಾಗಿರಬೇಕು ಎಂಬುದಕ್ಕೆ ಕಾರಣಗಳು ಹೀಗಿವೆ:
ವಿಮಾಮೊತ್ತ
ಆಸ್ಪತ್ರೆಗೆ ದಾಖಲಾಗುವಿಕೆಗೆ ಪಾಲಿಸಿ ವರ್ಷದಲ್ಲಿ ಕೈಗೆಟುಕುವ ಪ್ರೀಮಿಯಂನಲ್ಲಿ ಕವರೇಜ್ ಹೊಂದಿರುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಿ.
ಕವರೇಜ್ ಮೊತ್ತ
ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ, ಪ್ರತಿ ಪಾಲಿಸಿಯ ಅಡಿಯಲ್ಲಿ ಕವರೇಜ್ ಮೊತ್ತವನ್ನು ಪರಿಶೀಲಿಸಿ. ಆಸ್ಪತ್ರೆಗೆ ದಾಖಲಾಗುವಿಕೆ, ಡೇಕೇರ್, ಆಂಬ್ಯುಲೆನ್ಸ್ ಮತ್ತು ಹೆರಿಗೆಯಂತಹ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುವ ಪಾಲಿಸಿಯನ್ನು ಆಯ್ಕೆಮಾಡಿ.
ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್‌ಗಳು
ಇಡೀ ಕುಟುಂಬವನ್ನು ಕವರ್ ಮಾಡುವ ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್‌ಗಳಿಗೆ ಆದ್ಯತೆ ನೀಡಿ. ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್‌ಗಳು ಅಗ್ಗವಾಗಿವೆ ಮತ್ತು ಇಡೀ ಕುಟುಂಬವನ್ನು ಕವರ್ ಮಾಡುತ್ತವೆ.
ವಿಭಿನ್ನ ಪಾಲಿಸಿಗಳನ್ನು ಹೋಲಿಸಿ
ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ, ವಿವಿಧ ಪ್ಲ್ಯಾನ್‌ಗಳನ್ನು ಹೋಲಿಸುವುದು ಮತ್ತು ನಿಮಗೆ ಸೂಕ್ತವಾದುದನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ. ಇದು ಕವರೇಜ್ ವಿವರಗಳ ಮತ್ತು ನಿಮ್ಮ ಬಜೆಟ್‌ಗೆ ಯಾವ ಪಾಲಿಸಿ ಸರಿಹೊಂದುತ್ತದೆ ಎಂಬುದರ ಬಗ್ಗೆ ನಿಮಗೆ ಕಲ್ಪನೆಯನ್ನು ನೀಡುತ್ತದೆ.
ಜೀವನಪರ್ಯಂತ ನವೀಕರಣ
ಹೆಲ್ತ್ ಪಾಲಿಸಿಯನ್ನು ಖರೀದಿಸುವಾಗ, ಮೆಡಿಕಲ್ ಇನ್ಶೂರೆನ್ಸ್ ಪ್ಲ್ಯಾನ್ ಒದಗಿಸುವ ಕವರೇಜ್‌ನ ಅವಧಿಯನ್ನು ಪರಿಶೀಲಿಸಿ ಮತ್ತು ಅದು ಸೀಮಿತ ನವೀಕರಣವನ್ನು ಒಳಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೀವನದ ನಂತರದ ಹಂತಗಳಲ್ಲಿ ಆರೋಗ್ಯ ಹೆಲ್ತ್ ಪ್ಲ್ಯಾನ್ ಅಗತ್ಯವು ಹೆಚ್ಚು ಮಹತ್ವದ್ದಾಗಿರುವುದರಿಂದ ಇದು ನಿರ್ಣಾಯಕವಾಗಿದೆ. ಆದ್ದರಿಂದ, ಜೀವನಪರ್ಯಂತ ನವೀಕರಣವನ್ನು ಒದಗಿಸುವ ಹೆಲ್ತ್ ಪ್ಲ್ಯಾನ್ ಅನ್ನು ಆರಿಸಿಕೊಳ್ಳಿ.
ಕೈಗೆಟುಕುವಿಕೆ
ಉತ್ತಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯಿಂದ ಪ್ಲ್ಯಾನ್ ಅನ್ನು ಖರೀದಿಸುವಾಗ ಹೆಲ್ತ್ ಕವರೇಜ್ ಮತ್ತು ಸಮಂಜಸವಾದ ಪ್ರೀಮಿಯಂ ದರಗಳನ್ನು ಸೂಕ್ತವಾಗಿ ಪರಿಶೀಲಿಸುವುದು ಅತ್ಯಗತ್ಯವಾಗಿದೆ.
ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಐಚ್ಛಿಕ ಆಡ್-ಆನ್‌ಗಳು ಎಂದರೇನು?
ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಆಡ್-ಆನ್‌ಗಳು ಅಥವಾ ಐಚ್ಛಿಕ ಫೀಚರ್‌ಗಳನ್ನು ಖರೀದಿಸುವಾಗ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ನಿಮ್ಮ ಬೇಸ್ ಪಾಲಿಸಿಯಲ್ಲಿ ಸೇರಿಸಿಕೊಳ್ಳಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಜನರು ಆಡ್-ಆನ್‌ಗಳನ್ನು ಆಯ್ಕೆ ಮಾಡುತ್ತಾರೆ ಏಕೆಂದರೆ ಅವುಗಳು ಮಿತವ್ಯಯಕಾರಿಯಾಗಿವೆ ಮತ್ತು ಗಮನಾರ್ಹ ಪ್ರಯೋಜನಗಳನ್ನು ಹೊಂದಿವೆ.
ಹೆಲ್ತ್ ಇನ್ಶೂರೆನ್ಸ್ ರೈಡರ್‌ಗಳು ಎಂದೂ ಕರೆಯಲ್ಪಡುವ ಆಡ್-ಆನ್‌ಗಳು ನಿಮಗೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲು ಮತ್ತು ನಿಮ್ಮ ಪ್ರಸ್ತುತ ಮೆಡಿಕಲ್ ಇನ್ಸೂರೆನ್ಸ್ ಪಾಲಿಸಿಯ ಕವರೇಜ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಆಡ್-ಆನ್‌ಗಳು ಹೆಚ್ಚು ಶಿಫಾರಸು ಮಾಡಲಾಗುವ ಸ್ವತ್ತುಗಳಾಗಿದ್ದು ಅವುಗಳು ಹೂಡಿಕೆ ಮಾಡಲು ಯೋಗ್ಯವಾಗಿವೆ, ಏಕೆಂದರೆ ಅವು ಭವಿಷ್ಯಕ್ಕಾಗಿ ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಲು ನಿಮಗೆ ನೆರವಾಗುತ್ತವೆ.
ಹೆಲ್ತ್ ಇನ್ಶೂರೆನ್ಸ್‌ನ ಅರ್ಹತೆಯ ಮಾನದಂಡಗಳೇನು?
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ವಯಸ್ಸು, ಪೂರ್ವಾಸ್ತಿತ್ವದ ವೈದ್ಯಕೀಯ ಪರಿಸ್ಥಿತಿಗಳು ಇತ್ಯಾದಿ ಸೇರಿದಂತೆ ವಿವಿಧ ಅರ್ಹತಾ ಮಾನದಂಡಗಳನ್ನು ಹೊಂದಿವೆ. ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗೆ ಅರ್ಹತೆ ಪಡೆಯಲು ಕೆಳಗಿನ ಷರತ್ತುಗಳನ್ನು ಪೂರೈಸಬೇಕು.
- ವಯಸ್ಸು
ವಯಸ್ಕರಿಗೆ ಪ್ರವೇಶ ವಯಸ್ಸು 18 ಆಗಿದೆ ಮತ್ತು ಅವರು ಪಾಲಿಸಿಯ ಕರಾರುಗಳು ಮತ್ತು ಷರತ್ತುಗಳ ಪ್ರಕಾರ ಎಲ್ಲಾ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಆದರೆ, ವಿಭಿನ್ನ ಪಾಲಿಸಿಗಳಿಗೆ ವಯಸ್ಸಿನ ಮಾನದಂಡಗಳು ಬದಲಾಗುತ್ತವೆ.
- ಪೂರ್ವ ವೈದ್ಯಕೀಯ ತಪಾಸಣೆ
45 ಅಥವಾ 55 ವರ್ಷಕ್ಕಿಂತ ಮೇಲ್ಪಟ್ಟ ಪಾಲಿಸಿದಾರರಿಗೆ ಪೂರ್ವ ವೈದ್ಯಕೀಯ ಪರೀಕ್ಷೆಯು ಅತ್ಯಗತ್ಯವಾಗಿರುತ್ತದೆ. ಆದರೆ, ಪಾಲಿಸಿಯನ್ನು ನೀಡುವ ಮೊದಲು, ಹೆಚ್ಚಿನ ಹಿರಿಯ ನಾಗರಿಕರ ಹೆಲ್ತ್ ಪ್ಲ್ಯಾನ್‌ಗಳಿಗೆ ವೈದ್ಯಕೀಯ ಪರೀಕ್ಷೆಗಳು ಅಗತ್ಯವಾಗಿರುತ್ತವೆ.
- ಪೂರ್ವಾಸ್ತಿತ್ವದ ಕಾಯಿಲೆ (PED)
ಪೂರ್ವಾಸ್ತಿತ್ವದ ಪರಿಸ್ಥಿತಿಗಳೆಂದರೆ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವ ಮೊದಲು ವಿಮೆದಾತರಲ್ಲಿ ರೋಗನಿರ್ಣಯ ಮಾಡಲಾದ ಕಾಯಿಲೆಗಳಾಗಿವೆ. ಪೂರ್ವಾಸ್ತಿತ್ವದ ಕಾಯಿಲೆಗಳು ವೇಟಿಂಗ್ ಅವಧಿಯನ್ನು ಹೊಂದಿದ್ದು, ನಿಮ್ಮ ಎಲ್ಲಾ ಹೆಲ್ತ್ ಇನ್ಸೂರೆನ್ಸ್ ಪ್ರಯೋಜನಗಳಿಗೆ ನೀವು ಅರ್ಹರಾಗಿರುವುದಿಲ್ಲ.
ವೇಟಿಂಗ್ ಅವಧಿಯ ನಂತರವೇ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅಡಿಯಲ್ಲಿ ಆ ನಿರ್ದಿಷ್ಟ ಸ್ಥಿತಿಗೆ ನೀವು ಕ್ಲೈಮ್‌ಗಳನ್ನು ಸಲ್ಲಿಸಬಹುದು. ಕ್ಲೈಮ್ ನಿರಾಕರಣೆ ತಡೆಯಲು, ನಿಮ್ಮ ಆರೋಗ್ಯ ಸಮಸ್ಯೆಗಳು ಮತ್ತು ಜೀವನಶೈಲಿಯ ಆಯ್ಕೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಿ
ಮೂಲಭೂತ ಮಾನದಂಡಗಳು | ಅವಶ್ಯಕತೆಗಳು |
ವಯಸ್ಕರಿಗೆ | 18 ರಿಂದ 65 ವರ್ಷ ವಯಸ್ಸಿನವರು |
ಅವಲಂಬಿತ ಮಕ್ಕಳು | 16 ದಿನಗಳಿಂದ 25 ವರ್ಷಗಳು |
ಪೂರ್ವ ವೈದ್ಯಕೀಯ ತಪಾಸಣೆ | 45 ಅಥವಾ 55 ವರ್ಷಕ್ಕಿಂತ ಮೇಲ್ಪಟ್ಟವರು |
ಸ್ಟಾರ್ ಹೆಲ್ತ್‌ನಿಂದ ಆನ್‌ಲೈನ್‌ನಲ್ಲಿ ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಹೇಗೆ?
ಸ್ಟಾರ್ ಹೆಲ್ತ್‌ನಿಂದ ಆನ್‌ಲೈನ್‌ನಲ್ಲಿ ಅತ್ಯುತ್ತಮ ಹೆಲ್ತ್ ಪ್ಲ್ಯಾನ್ ಅನ್ನು ಖರೀದಿಸಲು ಹಂತಗಳು ಹೀಗಿವೆ:
ಹಂತ 1: ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ 'ಈಗ ಖರೀದಿಸಿ' ಬಟನ್ ಕ್ಲಿಕ್ ಮಾಡಿ.
ಹಂತ 2: ನಿಮ್ಮ ನಗರದ ಹೆಸರು, ಫೋನ್ ಸಂಖ್ಯೆ ಮತ್ತು ಪಿನ್ ಕೋಡ್‌ನಂತಹ ವಿನಂತಿಸಿದ ಮಾಹಿತಿಯನ್ನು ನಮೂದಿಸಿ.
ಹಂತ 3: ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆಮಾಡಿ ಮತ್ತು ಪ್ರೀಮಿಯಂ ಪಾವತಿಸಿ.
ಹಂತ 4: ನಿಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ನೀವು ಸಂಪೂರ್ಣ ಪಾಲಿಸಿ ದಾಖಲೆಗಳನ್ನು ಸ್ವೀಕರಿಸುತ್ತೀರಿ.
ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಲೆಕ್ಕ ಹಾಕುವುದು ಹೇಗೆ?
ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿಮ್ಮ ವೈದ್ಯಕೀಯ ಇತಿಹಾಸ, ವಿಮಾ ಮೊತ್ತ ಮತ್ತು ನಿಮ್ಮ ಕುಟುಂಬದ ವೈದ್ಯಕೀಯ ಇತಿಹಾಸ ಸೇರಿದಂತೆ ಹಲವಾರು ಅಂಶಗಳಿಂದ ನಿರ್ಧರಿಸಲಾಗುತ್ತದೆ.
ನೀವು ಅದನ್ನು ಪ್ರತಿ ತಿಂಗಳು, ಪ್ರತಿ ತ್ರೈಮಾಸಿಕ, ಪ್ರತಿ ಅರ್ಧ ವರ್ಷ ಅಥವಾ ವಾರ್ಷಿಕವಾಗಿ ಪಾವತಿಸಲು ಆಯ್ಕೆ ಮಾಡಬಹುದು.
ನಿಮ್ಮ ಅವಶ್ಯಕತೆಗಳು ಮತ್ತು ಸಾಮರ್ಥ್ಯಗಳ ಬಗ್ಗೆ ನಿಮಗೆ ಅರಿವಿದ್ದರೆ ಹೊರೆಯಾಗದ ಪ್ರೀಮಿಯಂ ಪಾವತಿಯನ್ನು ಹೊಂದಿರುವ ಪ್ಲ್ಯಾನ್ ಅನ್ನು ನೀವು ಆರಿಸಿಕೊಳ್ಳಬಹುದು.
ಹೆಲ್ತ್ ಇನ್ಶೂರೆನ್ಸ್ ಸಂಬಂಧಿತ ಮಿಥ್ಯಗಳ ನಿವಾರಣೆ
#1 ಆರೋಗ್ಯವಂತರಾಗಿರುವವರಿಗೆ ಹೆಲ್ತ್ ಇನ್ಶೂರೆನ್ಸ್ ಅಗತ್ಯವಿಲ್ಲ
ನೀವು ಆರೋಗ್ಯವಂತರು ಮತ್ತು ಚಿಕ್ಕವರಾಗಿದ್ದಾಗಲೂ ಸಹ ನೀವು ಹೆಲ್ತ್ ಇನ್ಶೂರೆನ್ಸ್‌ನ ದೀರ್ಘಕಾಲಿಕ ಪ್ರಯೋಜನಗಳನ್ನು ಪಡೆಯಬಹುದು. ಹೆಲ್ತ್ ಇನ್ಶೂರೆನ್ಸ್ ಯಾವುದೇ ಅನಿರೀಕ್ಷಿತ ಅನಾರೋಗ್ಯದಿಂದ ನಿಮ್ಮನ್ನು ರಕ್ಷಿಸುತ್ತದೆ.
#2 ಇನ್ಶೂರೆನ್ಸ್ ಗರ್ಭಧಾರಣೆಯನ್ನು ಕವರ್ ಮಾಡುವುದಿಲ್ಲ
ಕೆಲವು ಕರಾರುಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಹೆರಿಗೆ ಕವರೇಜ್ ಹೊಂದಿರುವ ಇನ್ಶೂರೆನ್ಸ್ ಪಾಲಿಸಿಗಳು ಲಭ್ಯವಿವೆ.
#3 ನಿಮ್ಮ ಸಂಪೂರ್ಣ ವೈದ್ಯಕೀಯ ಖರ್ಚಿನ ವೆಚ್ಚಭರಿಸುವಿಕೆ ಮಾಡಲಾಗುತ್ತದೆ
ವೆಚ್ಚಭರಿಸುವಿಕೆಯ ಮೊತ್ತವು ಪಾಲಿಸಿಯನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಪ್ಲ್ಯಾನ್‌ಗಳು ವಿಮಾ ಮೊತ್ತದ ಆಧಾರದ ಮೇಲೆ ಕೊಠಡಿ ಶುಲ್ಕಗಳನ್ನು ಕವರ್ ಮಾಡುತ್ತವೆ ಮತ್ತು ಯಾವುದೇ ಹೆಚ್ಚುವರಿ ಹಣವನ್ನು ವಿಮೆದಾರರು ಪಾವತಿಸಬೇಕು. ಭಾಗಶಃ ವೆಚ್ಚಭರಿಸುವಿಕೆಗೆ ಒಳಪಟ್ಟಿರುವ ಇತರ ಖರ್ಚುಗಳಿಗೆ ಪಾಲಿಸಿಯು ಉಪ-ಮಿತಿಗಳನ್ನು ಹೊಂದಿರಬಹುದು.
#4 ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಸುರಕ್ಷಿತವಾಗಿಲ್ಲ
ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಮಾರಾಟ ಕ್ರಮೇಣ ಹೆಚ್ಚುತ್ತಿದೆ. ಆದರೆ, ಇಂಟರ್‌ನೆಟ್ ವಹಿವಾಟುಗಳು ವಂಚನೆಗೆ ಕಾರಣವಾಗಬಹುದು ಎಂದು ಹಲವರು ನಂಬುತ್ತಾರೆ. ಸುಲಭವಾದ ಪಾಲಿಸಿ ಖರೀದಿಗಳಿಗಾಗಿ ವಿಮಾದಾತರು ಆನ್‌ಲೈನ್ ಪೋರ್ಟಲ್‌ಗಳನ್ನು ಪ್ರಾರಂಭಿಸಿರುವುದರಿಂದ ಇದು ಅಸತ್ಯವಾಗಿದೆ.
ಭಾರತದಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳ ಪ್ರಮುಖ ಪ್ರಯೋಜನಗಳು
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಪಾಲಿಸಿ ಕರಾರುಗಳು ಮತ್ತು ಷರತ್ತುಗಳನ್ನು ಅವಲಂಬಿಸಿ ವಿಮೆದಾರರಿಗೆ ಬಹು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಭಾರತದಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಖರೀದಿಸುವ ಪ್ರಮುಖ ಪ್ರಯೋಜನಗಳು ಹೀಗಿವೆ:
- ಕ್ಯಾಶ್‌ಲೆಸ್ ಸೇವೆಗಳು - ಸ್ಟಾರ್ ಹೆಲ್ತ್ ಕ್ಯಾಶ್‌ಲೆಸ್ ಸೌಲಭ್ಯಗಳು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಂತಹ ಗ್ರಾಹಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತದೆ.
- ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು - ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ಡಿಸ್ಚಾರ್ಜ್ ಆದ ನಂತರದ ಚಿಕಿತ್ಸೆಯ ಖರ್ಚುಗಳನ್ನು ಕವರ್ ಮಾಡುವ ಕಾಂಪ್ರಹೆನ್ಸಿವ್ ಹೆಲ್ತ್ ಪ್ಲ್ಯಾನ್‌ಗಳನ್ನು ನಾವು ಹೊಂದಿದ್ದೇವೆ.
- ಆಯುಷ್ ಚಿಕಿತ್ಸೆ - ಹೆಲ್ತ್ ಇನ್ಶೂರೆನ್ಸ್ ಯುನಾನಿ, ಆಯುರ್ವೇದ, ಸಿದ್ಧ, ಹೋಮಿಯೋಪತಿ ಮತ್ತು ಯೋಗವನ್ನು ಒಳಗೊಂಡಿರುವ ಆಯುಷ್ ಸ್ಕೂಲ್ ಆಫ್ ಮೆಡಿಸಿನ್‌ಗಳಿಗೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಯ ಖರ್ಚುಗಳನ್ನು ಒಳಗೊಂಡಿದೆ.
- ಡೇ ಕೇರ್ ಕಾರ್ಯವಿಧಾನಗಳು - 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ಡೇ ಕೇರ್ ಚಿಕಿತ್ಸೆಯನ್ನು ಸಹ ನೀವು ಪಡೆಯಬಹುದು.
- ಪೂರ್ವಾಸ್ತಿತ್ವದ ಕಾಯಿಲೆಗಳು - ನೀವು ವೇಟಿಂಗ್ ಅವಧಿಯನ್ನು ಪೂರ್ಣಗೊಳಿಸಿದ ನಂತರ ನಾವು ಸ್ಟಾರ್ ಹೆಲ್ತ್‌ನಲ್ಲಿ ಪೂರ್ವಾಸ್ತಿತ್ವದ ಕಾಯಿಲೆಗಗಳಿಗೆ ಕವರೇಜ್ ಅನ್ನು ಒದಗಿಸುತ್ತೇವೆ. ವಿಮೆದಾತರ ಪಾಲಿಸಿ ನಿಯಮಗಳ ಆಧಾರದ ಮೇಲೆ ವೇಟಿಂಗ್ ಅವಧಿಯು ಭಿನ್ನವಾಗಿರಬಹುದು.
- ಟೆಲಿಮೆಡಿಸಿನ್ ಮತ್ತು ಸ್ವಾಸ್ಥ್ಯ ಸೌಲಭ್ಯಗಳಿಗೆ ಪ್ರವೇಶ - ಸ್ಟಾರ್ ಹೆಲ್ತ್ ಉಚಿತ ವ್ಯಾಕ್ಸಿನೇಷನ್‌ಗಳ ಆಯ್ಕೆಗಳೊಂದಿಗೆ ಉಚಿತ ಆರೋಗ್ಯ ತಪಾಸಣೆಯನ್ನು ನೀಡುತ್ತದೆ (ಇನ್‌ಫ್ಲುಯೆಂಝಾ ಮತ್ತು ನ್ಯುಮೋಕೊಕಲ್), ಹೋಮ್ ಹೆಲ್ತ್ ಕೇರ್ ಮತ್ತು OPD ಕವರ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.
ಸಹಾಯ ಕೇಂದ್ರ
ಗೊಂದಲವೇ? ನಮ್ಮ ಬಳಿ ಉತ್ತರಗಳಿವೆ
ಹೆಲ್ತ್ ಇನ್ಶೂರೆನ್ಸ್ ಸಂಬಂಧಿತ ನಿಮ್ಮ ಎಲ್ಲಾ ಅನುಮಾನಗಳನ್ನು ಪರಿಹರಿಸಿಕೊಳ್ಳಿ.