ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್
ನಿಮ್ಮ ಉದ್ಯೋಗಿಗಳಿಗೆ ನೀವು ಒದಗಿಸುವ ಹೆಲ್ತ್ ಕೇರ್ ರಕ್ಷಣೆಯನ್ನು ಕಸ್ಟಮೈಸ್ ಮಾಡಿ
ಗ್ರೂಪ್ ಮೆಡಿಕಲ್ ಕವರ್ (GMC) ಎಂದರೇನು?
ಗ್ರೂಪ್ ಮೆಡಿಕಲ್ ಕವರ್ ಎಂದರೆ ಸಾಮಾನ್ಯವಾಗಿ ವೃತ್ತಿಪರ ಸಂಸ್ಥೆ ಅಥವಾ ಸೊಸೈಟಿಯ ಸದಸ್ಯರು ಅಥವಾ ಕಂಪನಿಯ ಉದ್ಯೋಗಿಗಳ ವ್ಯಾಖ್ಯಾನಿತ ಗುಂಪನ್ನು ಒಳಗೊಂಡ ಪಾಲಿಸಿಯಾಗಿದೆ. ಗ್ರೂಪ್ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯು ಆರೋಗ್ಯ ಮತ್ತು ವೈದ್ಯಕೀಯ ವೆಚ್ಚಗಳನ್ನು ಭರಿಸುತ್ತದೆ.
ಗುಂಪು ಎಂದರೇನು?
IRDAI ಪ್ರಕಾರ, ಗುಂಪು ಎಂದರೆ ಸಾಮಾನ್ಯ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಒಟ್ಟಾಗಿರುವ ಸದಸ್ಯರ ಗುಂಪಾಗಿದೆ ಮತ್ತು ಇನ್ಶೂರೆನ್ಸ್ ಕವರ್ ಅನ್ನು ಪಡೆದುಕೊಳ್ಳುವುದೇ ಇದರ ಪ್ರಮುಖ ಉದ್ದೇಶವಾಗಿರುವುದಿಲ್ಲ.
ಗುಂಪನ್ನು ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದಾಗಿದೆ:
ಉದ್ಯೋಗದಾತರಲ್ಲದವರು - ಉದ್ಯೋಗಿಗಳ ಗುಂಪುಗಳು
ಅವುಗಳು ನೋಂದಾಯಿತ ಕಲ್ಯಾಣ ಸಂಘಗಳ ಸದಸ್ಯರು, ನಿರ್ದಿಷ್ಟ ಕಂಪನಿ/ಬ್ಯಾಂಕ್‌ಗಳು ನೀಡಿದ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವವರು, ಇನ್ಶೂರೆನ್ಸ್ ಅನ್ನು ಆಡ್ ಆನ್ ಬೆನಿಫಿಟ್ ಆಗಿ ಹೊಂದಿರುವ ನಿರ್ದಿಷ್ಟ ಉದ್ಯಮದ ಗ್ರಾಹಕರನ್ನು ಒಳಗೊಂಡಿರಬಹುದು.
ಉದ್ಯೋಗದಾತರು- ಉದ್ಯೋಗಿಗಳ ಗುಂಪುಗಳು
ಅವುಗಳು ಯಾವುದೇ ನಿರ್ದಿಷ್ಟ ನೋಂದಾಯಿತ ಸಂಸ್ಥೆಯ ಉದ್ಯೋಗಿಗಳನ್ನು ಒಳಗೊಂಡಿರಬಹುದು.
ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಸ್ತಿತ್ವದಲ್ಲಿರುವ ಗುಂಪುಗಳಿಗೆ ಗ್ರೂಪ್ ಮೆಡಿಕ್ಲೈಮ್ ಪಾಲಿಸಿಗಳನ್ನು ಒದಗಿಸುವ ಹೆಲ್ತ್ ಇನ್ಸೂರೆನ್ಸ್ ಸ್ಪೆಷಲಿಸ್ಟ್ ಆಗಿದೆ. ಉದಾ. ಉದ್ಯೋಗದಾತರು - ಉದ್ಯೋಗಿಗಳು
ಗುಂಪು ಆಡಳಿತಾಧಿಕಾರಿ/ಸೂಚಕರು ಎಂದರೆ ಯಾರು?
ಗುಂಪು ಆಡಳಿತಾಧಿಕಾರಿ / ಸೂಚಕರು ಎಂದರೆ ಪ್ರಸ್ತಾವನೆ ನಮೂನೆ/ಘೋಷಣಾ ನಮೂನೆಯಲ್ಲಿ ಸಹಿ ಮಾಡಿದ ಮತ್ತು ಪಾಲಿಸಿ ವಿವರಪಟ್ಟಿಯಲ್ಲಿ ಹೆಸರಿಸಲಾದ ವ್ಯಕ್ತಿ/ಸಂಸ್ಥೆ. ವ್ಯಕ್ತಿಯು ಪಾಲಿಸಿಯ ಅಡಿಯಲ್ಲಿ ವಿಮೆದಾರರಾಗಿರಬಹುದು ಅಥವಾ ಇಲ್ಲದಿರಬಹುದು.
ಕಾರ್ಪೊರೇಟ್‌ಗಾಗಿ ಸ್ಟಾರ್ ಹೆಲ್ತ್ಸ್ ಗ್ರೂಪ್ ಹೆಲ್ತ್ ಪ್ಲ್ಯಾನ್‌ಗಳು
- ಗ್ರೂಪ್ ಆರೋಗ್ಯ ಸಂಜೀವನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್
- ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್
ಪ್ಲ್ಯಾನ್ | ಗ್ರೂಪ್ ಆರೋಗ್ಯ ಸಂಜೀವನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (SHAHLGP21153V012021) | ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ (SHAHLGP21214V022021) | ||||
---|---|---|---|---|---|---|
ಕವರ್ ವಿಧ | ವೈಯಕ್ತಿಕ / ಕುಟುಂಬ | ವೈಯಕ್ತಿಕ / ಕುಟುಂಬ | ||||
ಲಕ್ಷಗಳಲ್ಲಿ ವಿಮಾ ಮೊತ್ತದ ಆಯ್ಕೆಗಳು | ₹100000 ದಿಂದ ₹10 ಲಕ್ಷ | ₹1 ಕೋಟಿಯವರೆಗೆ | ||||
ರೂಂ ಬಾಡಿಗೆ, ಬೋರ್ಡಿಂಗ್, ನರ್ಸಿಂಗ್ ಖರ್ಚುಗಳು | ಪ್ರತಿ ದಿನಕ್ಕೆ ಗರಿಷ್ಠ ₹5000/- ಕ್ಕೆ ಒಳಪಟ್ಟು ವಿಮಾ ಮೊತ್ತದ 2% | ಕವರ್ ಮಿತಿಗಳನ್ನು ಕಸ್ಟಮೈಸ್ ಮಾಡಿ | ||||
ಆಸ್ಪತ್ರೆಗೆ ದಾಖಲಾಗುವುದಕ್ಕಿಂತ ಮೊದಲು | ಆಸ್ಪತ್ರೆಗೆ ದಾಖಲಾಗುವಿಕೆಯ ದಿನಾಂಕಕ್ಕಿಂತ 30 ದಿನಗಳ ಮೊದಲು. | ಕವರ್ ಮಿತಿಗಳನ್ನು ಕಸ್ಟಮೈಸ್ ಮಾಡಿ | ||||
ಆಸ್ಪತ್ರೆಗೆ ದಾಖಲಾದ ನಂತರ | ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ 60 ದಿನಗಳ ನಂತರ | ಕವರ್ ಮಿತಿಗಳನ್ನು ಕಸ್ಟಮೈಸ್ ಮಾಡಿ | ||||
ತುರ್ತು ಆಂಬ್ಯುಲೆನ್ಸ್ | ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ₹2000 ವರೆಗೆ | ಕವರ್ ಮಿತಿಗಳನ್ನು ಕಸ್ಟಮೈಸ್ ಮಾಡಿ | ||||
ಆಯುಷ್ ಚಿಕಿತ್ಸೆ | ವಿಮಾ ಮೊತ್ತದವರೆಗೆ ಕವರ್ ಮಾಡಲಾಗಿದೆ | ಪ್ರತಿ ಪಾಲಿಸಿ ಅವಧಿಗೆ ಗರಿಷ್ಠ ₹25,000/- ಕ್ಕೆ ಒಳಪಟ್ಟು ವಿಮಾ ಮೊತ್ತದ 25% ವರೆಗೆ | ||||
ಡೇಕೇರ್ ಚಿಕಿತ್ಸೆಗಳು | ಕವರ್ ಮಾಡಲಾಗಿದೆ | ಕವರ್ ಮಾಡಲಾಗಿದೆ | ||||
ಆಧುನಿಕ ಚಿಕಿತ್ಸೆಗಳು | ವಿಮಾ ಮೊತ್ತದ 50% ವರೆಗೆ. | ಕವರ್ ಮಿತಿಗಳನ್ನು ಕಸ್ಟಮೈಸ್ ಮಾಡಿ | ||||
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ | ಪಾಲಿಸಿ ವರ್ಷದಲ್ಲಿ ಪ್ರತಿ ಕಣ್ಣಿಗೆ ವಿಮಾ ಮೊತ್ತದ 25% ವರೆಗೆ ಅಥವಾ ₹40000 ಯಾವುದು ಕಡಿಮೆಯೋ ಅದರಂತೆ. | ಕವರ್ ಮಿತಿಗಳನ್ನು ಕಸ್ಟಮೈಸ್ ಮಾಡಿ | ||||
ವೇಟಿಂಗ್ ಅವಧಿ | ಪೂರ್ವಾಸ್ತಿತ್ವದ ಕಾಯಿಲೆಗಳು | 1 ನೇ ಪಾಲಿಸಿಯ ಪ್ರಾರಂಭದ ನಂತರ 48 ತಿಂಗಳ ನಿರಂತರ ಕವರೇಜ್ | ವೇಟಿಂಗ್ ಅವಧಿಯೊಂದಿಗೆ ಅಥವಾ ಇಲ್ಲದೆಯೇ (ವೇಟಿಂಗ್ ಅವಧಿಯ ಮನ್ನಾ ಲಭ್ಯವಿದೆ) | |||
ನಿರ್ದಿಷ್ಟ ರೋಗ | 1 ನೇ ಪಾಲಿಸಿಯ ಪ್ರಾರಂಭದ ನಂತರ 24 ತಿಂಗಳ ನಿರಂತರ ಕವರೇಜ್ | ವೇಟಿಂಗ್ ಅವಧಿಯೊಂದಿಗೆ ಅಥವಾ ಇಲ್ಲದೆಯೇ (ವೇಟಿಂಗ್ ಅವಧಿಯ ಮನ್ನಾ ಲಭ್ಯವಿದೆ) | ||||
ನಿರ್ದಿಷ್ಟ ರೋಗ | 1 ನೇ ಪಾಲಿಸಿಯ ಪ್ರಾರಂಭದ ನಂತರ 48 ತಿಂಗಳ ನಿರಂತರ ಕವರೇಜ್ | ವೇಟಿಂಗ್ ಅವಧಿಯೊಂದಿಗೆ ಅಥವಾ ಇಲ್ಲದೆಯೇ (ವೇಟಿಂಗ್ ಅವಧಿಯ ಮನ್ನಾ ಲಭ್ಯವಿದೆ) | ||||
ಅಪಘಾತಗಳನ್ನು ಹೊರತುಪಡಿಸಿ ಯಾವುದೇ ಕಾಯಿಲೆ | 1 ನೇ ಪಾಲಿಸಿಯ ಪ್ರಾರಂಭದ ನಂತರದ ಮೊದಲ 30 ದಿನಗಳು | ವೇಟಿಂಗ್ ಅವಧಿಯೊಂದಿಗೆ ಅಥವಾ ಇಲ್ಲದೆಯೇ (ವೇಟಿಂಗ್ ಅವಧಿಯ ಮನ್ನಾ ಲಭ್ಯವಿದೆ) | ||||
ವರ್ಗಾವಣೆ (ಇನ್ಶೂರೆನ್ಸ್ ರೆಗ್ಯುಲೇಟರ್‌ನ ನಿಬಂಧನೆ) | ಅಂಡರ್‌ರೈಟಿಂಗ್‌ಗೆ ಒಳಪಟ್ಟಿರುತ್ತದೆ: ನಷ್ಟ ಪರಿಹಾರ ಆಧಾರಿತ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕುಟುಂಬದ ಸದಸ್ಯರನ್ನು ಒಳಗೊಂಡಂತೆ ವೈಯಕ್ತಿಕ ಸದಸ್ಯರು ಅಂತಹ ಗ್ರೂಪ್ ಪಾಲಿಸಿಯಿಂದ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಅಥವಾ ಅದೇ ಕಂಪನಿಯ ಫ್ಯಾಮಿಲಿ ಫ್ಲೋಟರ್ ಪಾಲಿಸಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. | |||||
ರಿಸ್ಕ್ ಅನ್ನು ಕವರ್ ಮಾಡಲಾಗಿದೆ | ಅನಾರೋಗ್ಯ/ಅಪಘಾತಗಳು ಮತ್ತು ಡೇಕೇರ್ ಚಿಕಿತ್ಸೆಗಳು ಅಥವಾ ಕಾರ್ಯವಿಧಾನಗಳಿಗಾಗಿ 24 ಗಂಟೆಗಳ ಕಾಲ ಒಳರೋಗಿಗಳಾಗಿ ಆಸ್ಪತ್ರೆಗೆ ದಾಖಲಾಗುವಿಕೆ | |||||
ಸೇರ್ಪಡೆ ಮತ್ತು ತೆಗೆದುಹಾಕುವಿಕೆ |
|
ಗಮನಿಸಿ: ಮೇಲಿನ ಮಾಹಿತಿಯು ಕೇವಲ ಸೂಚಕವಾಗಿದೆ. ಕರಾರುಗಳು ಮತ್ತು ಷರತ್ತುಗಳ ಸಂಪೂರ್ಣ ವಿವರಗಳಿಗಾಗಿ ಮಾರಾಟವನ್ನು ಮುಕ್ತಾಯಗೊಳಿಸುವ ಮೊದಲು ಪಾಲಿಸಿ ಷರತ್ತುಗಳನ್ನು ಓದಿ.
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಸೂಚಕರ ಅಗತ್ಯಕ್ಕೆ ತಕ್ಕಂತೆ ಪ್ರಾಡಕ್ಟ್ ಅನ್ನು ಕಸ್ಟಮೈಸ್ ಮಾಡಿದ ನಂತರ ನೀಡಲಾಗುತ್ತದೆ. ಪಾಲಿಸಿ ವಿವರಪಟ್ಟಿಯಲ್ಲಿ ನಿಗದಿಪಡಿಸಿದಂತೆ ಉಪ-ಮಿತಿಗಳಿಗೆ ಒಳಪಟ್ಟು ಈ ಪಾಲಿಸಿಯ ಅಡಿಯಲ್ಲಿ ಕೆಳಗಿನ ಪ್ರಯೋಜನಗಳನ್ನು ಒಳಗೊಂಡಿದೆ.
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಯ ಖರ್ಚುಗಳು: ಕನಿಷ್ಠ 24 ಅನುಕ್ರಮ ಗಂಟೆಗಳ ಅವಧಿಯವರೆಗೆ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಸಂಬಂಧಿಸಿದ ಎಲ್ಲಾ ಖರ್ಚುಗಳು ಅಂದರೆ ವೈದ್ಯರ ಶುಲ್ಕಗಳು, ನರ್ಸಿಂಗ್ ಖರ್ಚುಗಳು, ಶಸ್ತ್ರಚಿಕಿತ್ಸಾ ಶುಲ್ಕಗಳು, ICU ಶುಲ್ಕಗಳು, ಅರಿವಳಿಕೆ ತಜ್ಞರು, ಅರಿವಳಿಕೆ, ರಕ್ತ, ಆಮ್ಲಜನಕ, ಆಪರೇಷನ್ ಥಿಯೇಟರ್ ಶುಲ್ಕಗಳು ಇತ್ಯಾದಿಗಳನ್ನು ಒಳಗೊಂಡಂತೆ ಕೊಠಡಿ/ಬೋರ್ಡಿಂಗ್ ಖರ್ಚುಗಳಂತಹ ಆಸ್ಪತ್ರೆಗೆ ದಾಖಲಾಗುವಿಕೆಗೆ ಸಂಬಂಧಿಸಿದ ಎಲ್ಲಾ ಖರ್ಚುಗಳು.
ಆಸ್ಪತ್ರೆಗೆ ದಾಖಲಾಗುವಿಕೆಯ ಪೂರ್ವ ಮತ್ತು ನಂತರದ ಖರ್ಚುಗಳು: ಪಟ್ಟಿಯಲ್ಲಿ ನಮೂದಿಸಲಾದ ಮಿತಿಗಳವರೆಗೆ ಆಸ್ಪತ್ರೆಗೆ ದಾಖಲಾಗುವಿಕೆಯ ಪೂರ್ವ ಮತ್ತು ನಂತರದ ವೈದ್ಯಕೀಯ ಖರ್ಚುಗಳು.
ಡೇಕೇರ್ ಚಿಕಿತ್ಸೆಗಳು/ಕಾರ್ಯವಿಧಾನಗಳು: ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕೈಗೊಳ್ಳಲಾದ ವೈದ್ಯಕೀಯ ಚಿಕಿತ್ಸೆ ಮತ್ತು/ಅಥವಾ ಶಸ್ತ್ರಚಿಕಿತ್ಸಾ ಕಾರ್ಯವಿಧಾನಕ್ಕೆ ಸಂಬಂಧಿಸಿದ ಎಲ್ಲಾ ಡೇಕೇರ್ ಚಿಕಿತ್ಸೆಗಳನ್ನು ಒಳಗೊಂಡಿದೆ. ಡೇಕೇರ್ ಚಿಕಿತ್ಸೆಗಳು/ಕಾರ್ಯವಿಧಾನಗಳ ವ್ಯಾಪ್ತಿಯ ಅಡಿಯಲ್ಲಿ ಹೊರರೋಗಿಯಾಗಿ ತೆಗೆದುಕೊಳ್ಳಲಾದ ಚಿಕಿತ್ಸೆಗಳನ್ನು ಕವರ್ ಮಾಡಲಾಗುವುದಿಲ್ಲ.
ಮೆಟರ್ನಿಟಿ ಪ್ರಯೋಜನಗಳು: ಈ ಐಚ್ಛಿಕ ಕವರ್ ಸಿ-ಸೆಕ್ಷನ್ ಅಥವಾ ನಾರ್ಮಲ್ ಡೆಲಿವರಿಗಾಗಿ (ಪ್ರಸವಪೂರ್ವ ಮತ್ತು ನಂತರದ ಖರ್ಚುಗಳನ್ನು ಒಳಗೊಂಡಂತೆ), ಪಾಲಿಸಿ ಅವಧಿಯಲ್ಲಿ ಗರ್ಭಧಾರಣೆಯ ಕಾನೂನುಬದ್ಧ ವೈದ್ಯಕೀಯ ಮುಕ್ತಾಯದಂತಹ ಹೆರಿಗೆಗೆ ತಗಲುವ ವೈದ್ಯಕೀಯ ವೆಚ್ಚಗಳಿಗೆ ಕವರೇಜ್ ಒದಗಿಸುತ್ತದೆ. ಪಾಲಿಸಿ ವಿವರಪಟ್ಟಿಯಲ್ಲಿ ನಿರ್ದಿಷ್ಟವಾಗಿ ಹೇಳಿರುವಂತೆ ಮಗುವಿನ ಜನನ ಸಂಬಂಧಿತ ಖರ್ಚುಗಳನ್ನು 1 ನೇ ದಿನದಿಂದಲೇ ನಿರ್ದಿಷ್ಟಪಡಿಸಿದ ಮಿತಿಯವರೆಗೆ ಒದಗಿಸಲು ಕವರ್ ವಿಸ್ತರಿಸುತ್ತದೆ. ಈ ವ್ಯಾಪ್ತಿಯನ್ನು ಯಾವುದೇ ವೇಟಿಂಗ್ ಅವಧಿಯೊಂದಿಗೆ ಅಥವಾ ಇಲ್ಲದೆಯೇ ನೀಡಬಹುದು. ಪಾಲಿಸಿಯ ಅಡಿಯಲ್ಲಿ 9 ತಿಂಗಳ ವೇಟಿಂಗ್ ಅವಧಿಯನ್ನು ಮನ್ನಾ ಮಾಡುವ ನಿಬಂಧನೆಯನ್ನು ಸಹ ಆಯ್ಕೆ ಮಾಡಬಹುದು.
ನವಜಾತಶಿಶು ಕವರ್: ನವಜಾತ ಶಿಶುವು ಫ್ಲೋಟರ್ ಮೊತ್ತದವರೆಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಉಂಟಾದ ವೈದ್ಯಕೀಯ ಖರ್ಚುಗಳಿಗೆ ಅಥವಾ ಪಾಲಿಸಿ ವಿವರಪಟ್ಟಿಯಲ್ಲಿ ತಿಳಿಸಿರುವಂತೆ ತಾಯಿಯ ವಿಮಾ ಮೊತ್ತದ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಪಡೆಯಬಹುದು. ಇದು ಐಚ್ಛಿಕ ಕವರ್ ಕೂಡ ಆಗಿದೆ.
ಆಯುಷ್ ಚಿಕಿತ್ಸೆ: ಈ ಕವರ್ ವೈದ್ಯರಿಂದ (NABH) ನಿರ್ವಹಿಸಲ್ಪಡುವ ಹೋಮಿಯೋಪತಿ, ಆಯುರ್ವೇದ, ಸಿದ್ಧ, ಯುನಾನಿ ಚಿಕಿತ್ಸೆಯಂತಹ ಪರ್ಯಾಯ ಚಿಕಿತ್ಸಾ ವಿಧಾನಗಳಿಗೆ ವೈದ್ಯಕೀಯ ಖರ್ಚುಗಳಿಗೆ ಕವರೇಜ್ ಒದಗಿಸುತ್ತದೆ
ಯಾವ ವೇಟಿಂಗ್ ಅವಧಿಗಳನ್ನು ಮನ್ನಾ ಮಾಡಲಾಗುತ್ತದೆ?
30 ದಿನಗಳ ವೇಟಿಂಗ್ ಅವಧಿಯ ಮನ್ನಾ | ಪಾಲಿಸಿ ಪ್ರಾರಂಭವಾದ ದಿನಾಂಕದಿಂದ ಮೊದಲ 30 ದಿನಗಳಲ್ಲಿ ಯಾವುದೇ ಅನಾರೋಗ್ಯ ಉಂಟಾದರೆ ಅದನ್ನು ಭರಿಸಲಾಗುತ್ತದೆ |
ಮೊದಲನೇ ವರ್ಷ ಹೊರಗಿಡುವಿಕೆಯ ಮನ್ನಾ | ಪಾಲಿಸಿ ಪ್ರಾರಂಭದ ದಿನಾಂಕದಿಂದ ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಅನಾರೋಗ್ಯವನ್ನು ಕವರ್ ಮಾಡಲಾಗುತ್ತದೆ. ಉದಾ: ಪಿತ್ತಕೋಶದ ಕಲ್ಲುಗಳು, ಮೂತ್ರಪಿಂಡದ ಕಲ್ಲುಗಳು, ಮೇದೋಜ್ಜೀರಕ ಗ್ರಂಥಿಯ ಕಲ್ಲುಗಳು, ಪ್ರಾಸ್ಟ್ರೇಟ್, ಹರ್ನಿಯಾ, ಹೈಡ್ರೋಸಿಲ್ ಇತ್ಯಾದಿ. |
ಮೊದಲ ಎರಡು ವರ್ಷಗಳ ಹೊರಗಿಡುವಿಕೆಯ ಮನ್ನಾ | ಪಾಲಿಸಿ ಪ್ರಾರಂಭದ ದಿನಾಂಕದಿಂದ ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಅನಾರೋಗ್ಯವನ್ನು ಕವರ್ ಮಾಡಲಾಗುತ್ತದೆ. ಉದಾ ಕಣ್ಣಿನ ಪೊರೆ, ENT ರೋಗಗಳು, ಇಂಟರ್ ವರ್ಟಿಬ್ರಲ್‌ನ ಜಾರುವಿಕೆ, ಸ್ತ್ರೀ ಜನನಾಂಗದ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿ. |
ಪೂರ್ವಾಸ್ತಿತ್ವದ ಕಾಯಿಲೆಯ ಹೊರಗಿಡುವಿಕೆಯ ಮನ್ನಾ | ಪೂರ್ವಾಸ್ತಿತ್ವದ ಕಾಯಿಲೆಯ (PED) ಮತ್ತು ಅದರ ನೇರ ತೊಡಕುಗಳ ಚಿಕಿತ್ಸೆಗೆ ಸಂಬಂಧಿಸಿದ ಖರ್ಚುಗಳನ್ನು ಪಾಲಿಸಿಯ ಪ್ರಾರಂಭದ ದಿನಾಂಕದಿಂದ ಭರಿಸಲಾಗುತ್ತದೆ |
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ನ ಫೀಚರ್‌ಗಳ ಬಗ್ಗೆ ಒಂದು ಅವಲೋಕನ
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಉದ್ಯೋಗದಾತರು ಅದರ ಉದ್ಯೋಗಿಗಳಿಗೆ ಒದಗಿಸುತ್ತಾರೆ.
- ಉದ್ಯೋಗಿಗಳು ತಮ್ಮ ಕುಟುಂಬದ ಸದಸ್ಯರನ್ನು ಅಂದರೆ ಸಂಗಾತಿ, ಅವಲಂಬಿತ ಮಕ್ಕಳು, ಪೋಷಕರು ಮತ್ತು ಅತ್ತೆ ಮಾವಂದಿರನ್ನು ಸೇರಿಸಲು ಆಯ್ಕೆ ಮಾಡಬಹುದು.
- ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಸಹ-ವೇತನದೊಂದಿಗೆ ಅಥವಾ ಇಲ್ಲದೆಯೇ ವಯಸ್ಸಾದ ಪೋಷಕರು ಮತ್ತು ಅತ್ತೆ ಮಾವಂದಿರನ್ನು ಕವರ್ ಮಾಡಲು ಒದಗಿಸಬಹುದು.
- ಅನಾರೋಗ್ಯ ಅಥವಾ ಅಪಘಾತ ಮತ್ತು ಡೇಕೇರ್ ಕಾರ್ಯವಿಧಾನಗಳ ಕಾರಣದಿಂದಾಗಿ 24 ಗಂಟೆಗಳ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಯ ವೈದ್ಯಕೀಯ ಖರ್ಚನ್ನು ಸರಿದೂಗಿಸಲು ಈ ಪಾಲಿಸಿಯು ಫ್ಲೋಟರ್/ವೈಯಕ್ತಿಕ ವಿಮಾ ಮೊತ್ತವನ್ನು ಒದಗಿಸುತ್ತದೆ.
- ಉದ್ಯೋಗಿ ತನ್ನ ಅವಶ್ಯಕತೆಗಳಿಗೆ ಸರಿಹೊಂದುವಂತೆ ಹೆಚ್ಚುವರಿ ಟಾಪ್-ಅಪ್ ಕವರ್ ಅನ್ನು ಆಯ್ಕೆ ಮಾಡಬಹುದಾಗಿದೆ.
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಫೀಚರ್‌ಗಳು
ಫ್ಲೋಟರ್ ಪ್ರಯೋಜನ: ವಿಮೆದಾರರು ಫ್ಲೋಟರ್ ಕವರ್ ಅನ್ನು ಪಡೆಯಬಹುದು ಮತ್ತು ಒಂದು ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ಅದೇ ವಿಮಾ ಮೊತ್ತಕ್ಕೆ ಕುಟುಂಬದ ಕವರ್ ಅನ್ನು (ಸಂಗಾತಿ, ಅವಲಂಬಿತ ಮಕ್ಕಳು, ಪೋಷಕರು ಮತ್ತು ಅತ್ತೆಮಾವಂದಿರು) ಪಡೆಯಬಹುದು.
ನಗದುರಹಿತ ಮತ್ತು ವೆಚ್ಚ ಭರಿಸುವಿಕೆ ಸೌಲಭ್ಯ: ವಿಮೆದಾರರು ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಸೌಲಭ್ಯವನ್ನು ಪಡೆಯಬಹುದು ಮತ್ತು ಪ್ರಮಾಣಿತ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಖರ್ಚುಗಳ ವೆಚ್ಚ ಭರಿಸುವಿಕೆಯನ್ನು ಪಡೆದುಕೊಳ್ಳಬಹುದು.
ಕವರ್ ಅವಧಿ: 1 ವರ್ಷ
ಅರ್ಹತೆ: ಯಾವುದೇ ವಯಸ್ಸಿನವರೆಗೆ ಈ ಪಾಲಿಸಿಯನ್ನು ಪ್ರಾರಂಭಿಸಬಹುದು
ಗುಂಪಿನ ಗಾತ್ರ: ನಿಮ್ಮ ಕಂಪನಿಯು ಇನ್ಸೂರೆನ್ಸ್ ಅನ್ನು ಒದಗಿಸುತ್ತಿದ್ದರೆ, ನೀವು ಅದಕ್ಕೆ ಅರ್ಹರಾಗಿರುತ್ತೀರಿ. ಗುಂಪಿನ ಗಾತ್ರವು ಕುಟುಂಬ ಸದಸ್ಯರನ್ನು ಒಳಗೊಂಡಂತೆ 7 ಸದಸ್ಯರಷ್ಟಿರಬಹುದು.
ವೇಟಿಂಗ್ ಅವಧಿ: ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ತೆಗೆದುಕೊಳ್ಳುವ ಒಂದು ದೊಡ್ಡ ಪ್ರಯೋಜನವೆಂದರೆ ವೇಟಿಂಗ್ ಅವಧಿಗಳು/ಅವಧಿ ಬದ್ಧ ಹೊರಗಿಡುವಿಕೆಗಳ ಮನ್ನಾ. ಸಾಮಾನ್ಯವಾಗಿ, ಗ್ರೂಪ್ ಆರೋಗ್ಯ ಸಂಜೀವನಿ ಪಾಲಿಸಿಯಲ್ಲಿ, ವೇಟಿಂಗ್ ಅವಧಿಗಳನ್ನು 30 ದಿನಗಳಿಂದ 4 ವರ್ಷಗಳವರೆಗೆ ಅನ್ವಯಿಸಲಾಗುತ್ತದೆ ಮತ್ತು ಡೆಲಿವರಿ ಖರ್ಚುಗಳನ್ನು ಭರಿಸಲಾಗುವುದಿಲ್ಲ. ಆದಾಗ್ಯೂ, ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಉದ್ಯೋಗಿಗಳಿಗೆ ಎಲ್ಲಾ ವೇಟಿಂಗ್ ಅವಧಿಗಳ ಮನ್ನಾ ಮತ್ತು ಡೆಲಿವರಿ ಖರ್ಚುಗಳಂತಹ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಬಹುದಾಗಿದೆ.
ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ ಇಲ್ಲ: ಗ್ರೂಪ್ ಆರೋಗ್ಯ ಸಂಜೀವನಿ ಪಾಲಿಸಿಯಲ್ಲಿ, ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಕಡ್ಡಾಯವಾಗಿದೆ ಆದರೆ ಗ್ರೂಪ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಇಲ್ಲದೆಯೇ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ. ಆ ಮೂಲಕ, ಪೂರ್ವಾಸ್ತಿತ್ವದ ಕಾಯಿಲೆಗಳನ್ನು ಹೊಂದಿರುವ ವಯಸ್ಸಾದ ವ್ಯಕ್ತಿಯನ್ನು ಸಹ ಗ್ರೂಪ್ ಇನ್ಶೂರೆನ್ಸ್ ಕವರ್ ಅಡಿಯಲ್ಲಿ ಸೇರಿಸಬಹುದು.
ಪ್ರೀಮಿಯಂ: ಪಾಲಸಿಯ ಅಡಿಯಲ್ಲಿ ವಿಧಿಸಲಾದ ಪ್ರೀಮಿಯಂ ಆರಿಸಿಕೊಂಡ ವಿಮಾಮೊತ್ತ, ಹೆಚ್ಚುವರಿ ಕವರ್‌ಗಳು (ವಿಮೆದಾರರು ಆರಿಸಿಕೊಂಡರೆ) ಮತ್ತು ವಯಸ್ಸು, ಅಪಾಯಕಾರಿ ಅಂಶ, ನಗರ ಸಾದಿಲ್ವಾರು, ಹರಡಿಕೆ ಇತ್ಯಾದಿ ಇತರ ಅಂಶಗಳನ್ನು ಅವಲಂಬಿಸಿರುತ್ತದೆ.
ಪಾಲಿಸಿಯ ವಿಧ: ಲಭ್ಯವಿರುವ ಪಾಲಿಸಿಗಳ ವಿಧಗಳು ಸಾಮಾನ್ಯ ಗ್ರಾಹಕರಿಗೆ ನೀಡುವಂತೆಯೇ ಇರುತ್ತವೆ, ಆದಾಗ್ಯೂ, ಒದಗಿಸಿದ ಕವರೇಜ್ ಮಟ್ಟವು ನಿಮ್ಮ ಉದ್ಯೋಗದಾತರು ಆಯ್ಕೆಮಾಡಿದ ಪಾಲಿಸಿಯನ್ನು ಅವಲಂಬಿಸಿರುತ್ತದೆ.
ಸೇರ್ಪಡೆ/ತೆಗೆದುಹಾಕುವಿಕೆ: ಗ್ರೂಪ್ ಆರೋಗ್ಯ ಸಂಜೀವನಿ ಪಾಲಿಸಿಯಲ್ಲಿ, ಮಧ್ಯಂತರ ಸೇರ್ಪಡೆ ಸಾಧ್ಯವಿಲ್ಲ ಆದರೆ ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಮಧ್ಯದಲ್ಲಿಯೂ ಮದುವೆ ಮತ್ತು ನವಜಾತ ಶಿಶುವಿನ ಜನನದಂತಹ ಸಂದರ್ಭಗಳಲ್ಲಿ ಹೊಸದಾಗಿ ಸೇರುವವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅವಕಾಶ ಕಲ್ಪಿಸುತ್ತದೆ.
ನಾವು ಯಾವುದಕ್ಕೆ ಪಾವತಿಸುವುದಿಲ್ಲ?
ಪಾಲಿಸಿ ವಿವರಪಟ್ಟಿಯಲ್ಲಿ ಉಲ್ಲೇಖಿಸಲಾದ ಶಾಶ್ವತ ಹೊರಗಿಡುವಿಕೆಗಳಿಗೆ ನಾವು ಪಾವತಿಸುವುದಿಲ್ಲ.
- ವಾಕರ್‌ಗಳು ಮತ್ತು ವ್ಹೀಲ್‌ಚೇರ್‌ಗಳು, ವಿಟಮಿನ್‌ಗಳು ಮತ್ತು ಟಾನಿಕ್‌ಗಳು
- ಡೆಂಟಲ್ ಇಂಪ್ಲಾಂಟ್‌ಗಳು
- ಜನ್ಮಜಾತ ಬಾಹ್ಯ ವೈಕಲ್ಯ
- ಪಾವತಿಸಲಾಗದ/ಉಪಭೋಗ್ಯ ವಸ್ತುಗಳು ಇತ್ಯಾದಿ.
ಕಾರ್ಪೊರೇಟ್ ಬಫರ್ ಎಂದರೇನು?
ಕಾರ್ಪೊರೇಟ್ ಬಫರ್ ಎಂದರೆ ಪೂರ್ಣ ಗುಂಪಿಗೆ ಲಭ್ಯವಾಗುವ ಹೆಚ್ಚುವರಿ ವಿಮಾ ಮೊತ್ತವಾಗಿದೆ. ವೈಯಕ್ತಿಕ ಉದ್ಯೋಗಿಯ ಕವರೇಜ್ ಮುಕ್ತಾಯವಾದ ನಂತರ ನಿರ್ದಿಷ್ಟ ರೋಗಗಳು/ಅನಾರೋಗ್ಯಗಳ ಅಡಿಯಲ್ಲಿ ಯಾವುದೇ ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ಇದನ್ನು ಪಡೆದುಕೊಳ್ಳಬಹುದು. ಫ್ಯಾಮಿಲಿ ಫ್ಲೋಟರ್ ಕವರ್ ಅಡಿಯಲ್ಲಿ, ಈ ಪ್ರಯೋಜನವನ್ನು ಉದ್ಯೋಗಿ, ಸಂಗಾತಿ ಮತ್ತು ಮಕ್ಕಳಿಗೆ ಉದ್ಯೋಗದಾತರ ಒಪ್ಪಿಗೆಯೊಂದಿಗೆ ವಿಸ್ತರಿಸಬಹುದು.
ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್:
ನಗದುರಹಿತ ಕ್ಲೈಮ್ ಕಾರ್ಯವಿಧಾನಗಳು:
ಸ್ಟಾರ್ ಹೆಲ್ತ್ ಕ್ಲೈಮ್‌ಗಳ ಸೇವೆಗಳು ಜಂಜಾಟ-ರಹಿತ ಮತ್ತು ಗ್ರಾಹಕ-ಸ್ನೇಹಿ ಪ್ರಕ್ರಿಯೆಯಾಗಿದ್ದು ಅದು ಎಲ್ಲಾ ಸೆಟಲ್‌ಮೆಂಟ್‌ಗಳನ್ನು ಸಮಯೋಚಿತವಾಗಿ ಪ್ರಕ್ರಿಯೆಗೊಳಿಸುವುದನ್ನು ಖಚಿತಪಡಿಸುತ್ತದೆ. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಾವು ಭಾರತದಲ್ಲಿನ ನಮ್ಮ ಎಲ್ಲಾ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಕ್ಲೈಮ್‌ಗಳನ್ನು ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ.
- ಸ್ಟಾರ್ ಹೆಲ್ತ್ ವೆಬ್‌ಸೈಟ್ ಒಪ್ಪಂದ ಮಾಡಿಕೊಂಡ ನೆಟ್‌ವರ್ಕ್ ಆಸ್ಪತ್ರೆಗಳನ್ನು ಒಳಗೊಂಡ ನೆಟ್‌ವರ್ಕ್ ಆಸ್ಪತ್ರೆಗಳ ಪಟ್ಟಿಯನ್ನು ಹೊಂದಿದೆ.
- ನಮ್ಮ ವೆಬ್‌ಸೈಟ್‌ನಲ್ಲಿ ನೆಟ್‌ವರ್ಕ್ ಪಟ್ಟಿಯನ್ನು ಹುಡುಕಿ ಮತ್ತು ನಿಮ್ಮ ನಿವಾಸದ ಸಮೀಪವಿರುವ ನೆಟ್‌ವರ್ಕ್ ಆಸ್ಪತ್ರೆಯನ್ನು ಕಂಡುಕೊಳ್ಳಿ.
- ಯೋಜಿತ ಶಸ್ತ್ರಚಿಕಿತ್ಸೆಗಾಗಿ, ದಾಖಲಾಗುವಿಕೆಯ ದಿನಾಂಕದ ಮೊದಲು ಆಸ್ಪತ್ರೆಯನ್ನು ಸಂಪರ್ಕಿಸಿ ಅವರು ಭರ್ತಿಮಾಡಿದ ಪೂರ್ವ ದೃಢೀಕರಣ ಫಾರ್ಮ್ ಅನ್ನು ಕಳುಹಿಸುತ್ತಾರೆ.
- ಪೂರ್ವ ದೃಢೀಕರಣ ಫಾರ್ಮ್ ಅಲ್ಲಿ, ನಿಮ್ಮ ಸಂಪರ್ಕ ಸಂಖ್ಯೆಯನ್ನು ಒದಗಿಸುವುದು ಅಗತ್ಯವಾಗಿದೆ.
- ವಿವರಗಳು ಅಪೂರ್ಣವಾಗಿದ್ದರೆ, ಅಧಿಕೃತ ವಿನಂತಿಯ ಅನುಮೋದನೆಯು ವಿಳಂಬವಾಗಬಹುದು.
ನೆಟ್‌ವರ್ಕ್ ಆಸ್ಪತ್ರೆಯ ಇನ್ಶೂರೆನ್ಸ್ ಡೆಸ್ಕ್ ಅನ್ನು ಸಂಪರ್ಕಿಸಿ. 044 4674 5800 ಮೂಲಕ ನಮ್ಮನ್ನು ಸಂಪರ್ಕಿಸುವ ಅಥವಾ corporate.support@starhealth.in ಗೆ ನಮಗೆ ಇಮೇಲ್ ಮಾಡುವ ಮೂಲಕ ಸೂಚನೆಯನ್ನು ನೀಡಬಹುದಾಗಿದೆ
- ಕ್ಲೈಮ್ ಸಂಖ್ಯೆ ಪಡೆಯಲು ಆಪರೇಟರ್‌ಗೆ ತಿಳಿಸಿ.
- ಗ್ರಾಹಕರ ID / ಪಾಲಿಸಿ ಸಂಖ್ಯೆ
- ಆಸ್ಪತ್ರೆಗೆ ದಾಖಲಾಗುವಿಕೆಗೆ ಕಾರಣ
- ಆಸ್ಪತ್ರೆ ಹೆಸರು
- ವಿಮೆದಾರ/ರೋಗಿಯ ಹೆಸರು
ಯೋಜಿತ ಆಸ್ಪತ್ರೆಗೆ ದಾಖಲಾಗುವಿಕೆಗೆ 7 ರಿಂದ 10 ದಿನಗಳ ಮುಂಚಿತವಾಗಿ ತಿಳಿಸಬಹುದು ಮತ್ತು ತುರ್ತಾಗಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಆಸ್ಪತ್ರೆಗೆ ದಾಖಲಾದ 24 ಗಂಟೆಗಳೊಳಗೆ ತಿಳಿಸಬೇಕು.
- ಕ್ಲೈಮ್ ನೋಂದಣಿ.
- ಇನ್ಸೂರೆನ್ಸ್ ಡೆಸ್ಕ್ ಅನ್ನು ಸಂಪರ್ಕಿಸಿ ಮತ್ತು ನೆಟ್‌ವರ್ಕ್ ಆಸ್ಪತ್ರೆಯಲ್ಲಿ ದಾಖಲೆಗಳನ್ನು ಸಲ್ಲಿಸಿ.
- ದಾಖಲೆಗಳನ್ನು ಸ್ಟಾರ್ ಕ್ಲೈಮ್ಸ್ ತಂಡಕ್ಕೆ ಕಳುಹಿಸಲಾಗಿದೆ.
- ನಮ್ಮ ಕ್ಲೈಮ್ ಪ್ರೊಸೆಸಿಂಗ್ ತಂಡದಿಂದ ಪರಿಶೀಲಿಸಲ್ಪಟ್ಟ ಡಾಕ್ಯುಮೆಂಟ್‌ಗಳು.
- ಅನುಮೋದಿಸಲ್ಪಟ್ಟರೆ, ಪಾಲಿಸಿ ಷರತ್ತುಗಳ ಪ್ರಕಾರ ಕ್ಲೈಮ್ ಅನ್ನು ಸೆಟಲ್ ಮಾಡಲಾಗುತ್ತದೆ.
- ಪಾವತಿಯನ್ನು ನೆಟ್‌ವರ್ಕ್ ಆಸ್ಪತ್ರೆಗೆ ಮಾಡಲಾಗುತ್ತದೆ.
- ಡಿಸ್‌ಚಾರ್ಜ್ ಆಗಲು ಉಳಿದ ಮೊತ್ತವನ್ನು ಪಾವತಿಸಿ.
ವೆಚ್ಚ ಭರಿಸುವಿಕೆ ಕ್ಲೈಮ್ ಕಾರ್ಯವಿಧಾನಗಳು:
ಯೋಜಿತವಾಗಿ ಚಿಕಿತ್ಸೆಗಳನ್ನು ಪಡೆಯುವ ಸಂದರ್ಭದಲ್ಲಿ, ವಿಮೆಗಾರರಿಗೆ ವಿಮೆದಾರರು ಚಿಕಿತ್ಸೆಯ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ನೀಡಿ ಕ್ಲೈಮ್ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ತುರ್ತಾಗಿ ದಾಖಲಾಗುವಿಕೆಯ ಸಂದರ್ಭದಲ್ಲಿ, ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ವಿಮೆದಾರರು ಕ್ಲೈಮ್ ಸಂಖ್ಯೆಯನ್ನು ಪಡೆದುಕೊಳ್ಳಬಹುದು. ಆಸ್ಪತ್ರೆಯ ಹೆಸರು ಮತ್ತು ರೋಗಿಯ ಹೆಸರು ಮುಂತಾದ ಅಗತ್ಯ ಮಾಹಿತಿಯನ್ನು ಒದಗಿಸಿ ತನ್ನ ಕ್ಲೈಮ್ ಸಂಖ್ಯೆಯನ್ನು ಪಡೆಯಲು ವಿಮೆದಾರರು ಸಹಾಯವಾಣಿಗೆ 1800-425-2255 ಮೂಲಕ ಕರೆ ಮಾಡಬಹುದು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಡಿಸ್‌ಚಾರ್ಜ್ ಆದ ದಿನಾಂಕದಿಂದ 15 ದಿನಗಳ ಒಳಗೆ ಆ ಖರ್ಚುಗಳ ವೆಚ್ಚ ಭರಿಸುವಿಕೆಗಾಗಿ ವಿಮೆದಾರರು ಕ್ಲೈಮ್ ಮಾಡಬಹುದು.
ವೆಚ್ಚ ಭರಿಸುವಿಕೆ ಕ್ಲೈಮ್‌ಗಾಗಿ ಸಲ್ಲಿಸಬೇಕಾದ ದಾಖಲೆಗಳು:
- ಸರಿಯಾಗಿ ಭರ್ತಿಮಾಡಲಾದ ಕ್ಲೈಮ್ ಫಾರ್ಮ್
- ದಾಖಲಾಗುವಿಕೆ ಪೂರ್ವ ಪರೀಕ್ಷೆಗಳು ಮತ್ತು ಚಿಕಿತ್ಸೆಯ ದಾಖಲೆಗಳು
- ಆಸ್ಪತ್ರೆ ಮತ್ತು ಮೆಡಿಕಲ್‌ಗೆ ನೀಡಿದ ನಗದು ರಸೀದಿಗಳು
- ನಗದು ರಸೀದಿಗಳು ಮತ್ತು ಮಾಡಿಸಿದ ಪರೀಕ್ಷೆಗಳ ವರದಿಗಳು
- ವೈದ್ಯರು, ಶಸ್ತ್ರಚಿಕಿತ್ಸಕರು ಮತ್ತು ಅರಿವಳಿಕೆ ತಜ್ಞರ ರಸೀದಿಗಳು
- ರೋಗನಿರ್ಣಯದ ಬಗ್ಗೆ ಪರೀಕ್ಷಿಸಿದ ವೈದ್ಯರ ಪ್ರಮಾಣಪತ್ರ
- ಪ್ಯಾನ್ ಕಾರ್ಡ್ ನಕಲು, ರದ್ದಾದ ಚೆಕ್ ಅಥವಾ NEFT ವಿವರಗಳು
ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳಲು ನಮ್ಮ 24/7 ಗ್ರಾಹಕರ ಸೇವಾ ಕೇಂದ್ರವನ್ನು ಸಹ ನೀವು ಸಂಪರ್ಕಿಸಬಹುದು.
ಸಹ-ಪಾವತಿಯು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಖರ್ಚು ಹಂಚಿಕೆಯ ಕರ್ತವ್ಯವಾಗಿದೆ, ಅಲ್ಲಿ ವಿಮೆದಾರರು ಸ್ವೀಕಾರಾರ್ಹ ಕ್ಲೈಮ್‌ಗಳ ಮೊತ್ತದ ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ಭರಿಸಬೇಕು. ಈ ಸಹ-ಪಾವತಿ ಫೀಚರ್ ಗ್ರೂಪ್ ಇನ್ಶೂರೆನ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಲು ನಾವು ಯಾರಿಗೆ ಶಿಫಾರಸು ಮಾಡುತ್ತೇವೆ?
ಉದ್ಯೋಗಿಗಳು ಯಾವುದೇ ಕಂಪನಿಯ ಅತ್ಯಮೂಲ್ಯ ಸ್ವತ್ತುಗಳಾಗಿದ್ದಾರೆ, ಮತ್ತು ಉದ್ಯೋಗದಾತರು ಉದ್ಯೋಗಿಗಳು ಆರೋಗ್ಯಕರವಾಗಿರುವುದನ್ನು ಉತ್ತೇಜಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಮತ್ತು ಹಾಗಾಗಿ ಅವರು ಅತ್ಯುತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ, ಅದರಿಂದಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ, ಸಂಸ್ಥೆಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಉದ್ಯೋಗಿಗಳ ಪ್ರಯೋಜನಕ್ಕಾಗಿ ಪರಿಗಣಿಸುವ ಪ್ರವೃತ್ತಿ ಹೆಚ್ಚುತ್ತಿದೆ.
ಉದ್ಯೋಗಿಗಳನ್ನು ಗುರುತಿಸುವ ಮತ್ತು ಪುರಸ್ಕರಿಸುವಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ರಮುಖ ಪಾತ್ರವಹಿಸುತ್ತದೆ. ಹೆಲ್ತ್ ಇನ್ಶೂರೆನ್ಸ್ ಅನ್ನು ಉದ್ಯೋಗಿಗಳು ದೀರ್ಘಾವಧಿಯವರೆಗೆ ಕಂಪನಿಯಲ್ಲಿ ಕೆಲಸ ಮಾಡುವಂತೆ ಮಾಡುವ ಸಾಧನವಾಗಿಯೂ ಸಹ ಬಳಸಬಹುದು. ಉದ್ಯೋಗಿಗಳ ಅಗತ್ಯಗಳ ಬಗ್ಗೆ ಕಾಳಜಿವಹಿಸುವುದು, ಉದಾಹರಣೆಗೆ ಅವರ ವಯಸ್ಸಾದ ಪೋಷಕರ ಆಸ್ಪತ್ರೆಗೆ ದಾಖಲಾಗುವಿಕೆಯಲ್ಲಿ ನೆರವಾಗುವುದು ಇತ್ಯಾದಿಗಳು ಉದ್ಯೋಗಿಗಳಿಗೆ ತಾನು ಅತ್ಯುತ್ತಮವಾಗಿ ಕೆಲಸ ಮಾಡಬೇಕೆಂಬ ಸ್ಪೂರ್ತಿಯನ್ನು ನೀಡುತ್ತವೆ.
ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗೆ ಕನಿಷ್ಠ ಸಂಖ್ಯೆಯ ಉದ್ಯೋಗಿಗಳ ಅಗತ್ಯವಿದೆಯೇ? ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಾಗಿ ನನಗೆ ಅಗತ್ಯವಿರುವ ಕನಿಷ್ಠ ಸಂಖ್ಯೆಯ ಉದ್ಯೋಗಿಗಳ ಸಂಖ್ಯೆ ಎಷ್ಟು? ಎಂಬಂತಹ ಪ್ರತಿಯೊಬ್ಬ HR ಮ್ಯಾನೇಜರ್ ಅಥವಾ ಕಂಪನಿಯ CEO ಹೊಂದಿರುವ ಸಾಮಾನ್ಯ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿಯೂ ಕೂಡ ಇವೆ ಎಂಬುದರ ಅರಿವು ನಮಗಿದೆ?
ನಮ್ಮದು 20 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಣ್ಣ ಕಂಪನಿಯಾಗಿದೆ, ನಾವು ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಮಾಡಿಸಲು ಅರ್ಹರೇ?
ನಾವು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಬಯಸುತ್ತೇವೆ.
SME ಗಳು ಮತ್ತು ಸ್ಟಾರ್ಟ್‌ಅಪ್‌ಗಳು:
ಕನಿಷ್ಠ 7 ಸದಸ್ಯರನ್ನು ಒಳಗೊಂಡಿರುವ ಸಣ್ಣ ಗಾತ್ರದ ತಂಡದ ಸ್ಟಾರ್ಟಪ್‌ಗಳಿಗೆ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಗ್ರೂಪ್ ಮೆಡಿಕಲ್ ಪಾಲಿಸಿಯೊಂದಿಗೆ ಒದಗಿಸಬಹುದು. ಉದಾಹರಣೆಗೆ, ನೀವು 7 ಉದ್ಯೋಗಿಗಳನ್ನು ಹೊಂದಿರುವ ಹೊಸ ಕಂಪನಿಯಾಗಿದ್ದರೆ, ನೀವು ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಪಡೆದುಕೊಳ್ಳಬಹುದು. ಉದ್ಯೋಗದಾತರು ಎರಡು ವಿಧಗಳಲ್ಲಿ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆಯ ಲಾಭವನ್ನು ಪಡೆಯಬಹುದು. ಅವರು ತಮ್ಮ ಉದ್ಯೋಗಿಗಳಿಗೆ ಪ್ರಯೋಜನಗಳನ್ನು ಒದಗಿಸುವುದು ಮಾತ್ರವಲ್ಲದೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 37(1) ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನೂ ಕೂಡ ಪಡೆದುಕೊಳ್ಳಬಹುದು.
ದೊಡ್ಡ ಸಂಸ್ಥೆಗಳು:
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯು ನೈತಿಕ ವರ್ತನೆ ಮತ್ತು ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಕೊಡುಗೆ ನೀಡಲು ಮತ್ತು ಸ್ಥಳೀಯ ಸಮುದಾಯ ಮತ್ತು ಸಮಾಜದ ಕಲ್ಯಾಣಕ್ಕೆ ಕೊಡುಗೆ ನೀಡಲು ಉದ್ಯಮದ ನಿರಂತರ ಬದ್ಧತೆಯಾಗಿದೆ.
ನಿಮ್ಮ ಉದ್ಯೋಗಿಗಳಿಗಾಗಿ ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಹೇಗೆ?
ಅತ್ಯುತ್ತಮ ಪ್ರತಿಭೆಯನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ಸರಿಯಾದ ಪ್ರಯೋಜನಗಳನ್ನು ಆಯ್ಕೆಮಾಡುವುದು ಮತ್ತು ಮೌಲ್ಯವರ್ಧಿತ ಸೇವೆಗಳೊಂದಿಗೆ ಇನ್ಶೂರೆನ್ಸ್‌ನ ಉಪಯುಕ್ತತೆಯನ್ನು ಹೆಚ್ಚಿಸುವುದು ಅತ್ಯಂತ ಮಹತ್ವದ ವಿಷಯವಾಗಿದೆ.
ಇದಕ್ಕೆ ಸಂಬಂಧಿಸಿದಂತೆ, ಉದ್ಯೋಗದಾತರು ತಮ್ಮ ತಂಡಕ್ಕೆ ಸೂಕ್ತವಾಗುವ ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಒದಗಿಸುವುದು ಮುಖ್ಯವಾಗಿದೆ. ಸೂಕ್ತವಾದ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಎಂದರೆ ಉದ್ಯೋಗದಾತರ ಬಜೆಟ್‌ನಲ್ಲಿ ಸಾಧ್ಯವಾದಷ್ಟು ಉತ್ತಮ ಪ್ರಯೋಜನಗಳನ್ನು ಒದಗಿಸುವಂತೆ ಕಸ್ಟಮೈಸ್ ಮಾಡಬಹುದಾದ ಪ್ಲ್ಯಾನ್ ಆಗಿದೆ.
ನಿಮ್ಮ ಉದ್ಯೋಗಿಗಳಿಗೆ ಸೂಕ್ತವಾದ ಇನ್ಶೂರೆನ್ಸ್ ಪಾಲಿಸಿಯನ್ನು ರೂಪಿಸಲು ಸಹಾಯ ಮಾಡುವ ಪ್ರಾಯೋಗಿಕ ಪಾಯಿಂಟರ್‌ಗಳ ಬಗ್ಗೆ ಗಮನಹರಿಸುವ ಮೊದಲು, ನಿಮ್ಮ ತಂಡದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.
ಕೆಳಗೆ ಕೆಲವು ಪಾಯಿಂಟರ್‌ಗಳನ್ನು ನೀಡಲಾಗಿದೆ:
- ವೇಟಿಂಗ್ ಅವಧಿಗಳು - ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್
ವೇಟಿಂಗ್ ಅವಧಿಗಳು ಸಾಮಾನ್ಯವಾಗಿ 4 ವಿಧಗಳಾಗಿವೆ.
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ವೇಟಿಂಗ್ ಅವಧಿಗಳು ಈ ಕೆಳಗಿನಂತಿವೆ
ಪೂರ್ವಾಸ್ತಿತ್ವದ ಕಾಯಿಲೆಗಳು - 4 ವರ್ಷಗಳು.
ಕೆಲವು ನಿರ್ದಿಷ್ಟ ರೋಗಗಳು - ಕಣ್ಣು, ENT, ಸ್ತ್ರೀ ಜನನಾಂಗದ ಕಾಯಿಲೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ರೋಗಗಳು 2 ವರ್ಷಗಳು
ಕೆಲವು ನಿರ್ದಿಷ್ಟ ರೋಗಗಳು - ಹರ್ನಿಯಾ, ಪೈಲ್ಸ್, ಕಲ್ಲು ರಚನೆ ಇತ್ಯಾದಿಗಳಿಗೆ ಸಂಬಂಧಿಸಿದ ರೋಗಗಳು 1 ವರ್ಷ.
ಪಾಲಿಸಿಯ ಮೊದಲ 30 ದಿನಗಳಲ್ಲಿ ಉಂಟಾದ ಅಥವಾ ತಗುಲಿಸಿಕೊಂಡ ಯಾವುದೇ ರೋಗ
ಮೇಲಿನ ವೇಟಿಂಗ್ ಅವಧಿಗಳನ್ನು ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಮನ್ನಾ ಮಾಡಬಹುದು
- ವೇಟಿಂಗ್ ಅವಧಿಗಳು - ಗ್ರೂಪ್ ಆರೋಗ್ಯ ಸಂಜೀವನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್
- ಪೂರ್ವಾಸ್ತಿತ್ವದ ಕಾಯಿಲೆಗಳು - 4 ವರ್ಷಗಳು
- ಕೆಲವು ನಿರ್ದಿಷ್ಟ ರೋಗಗಳು - 2 ವರ್ಷಗಳ ಕೆಲವು ಉದಾಹರಣೆಗಳನ್ನು ಕೆಳಗೆ ಹೇಳಲಾಗಿದೆ
- ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳು
- ಬೆನೈನ್ ENT ಅಸ್ವಸ್ಥತೆಗಳು
- ಹಿಸ್ಟರೆಕ್ಟಮಿ (ಗರ್ಭಕೋಶ ತೆಗೆದುಹಾಕುವ ಶಸ್ತ್ರಚಿಕಿತ್ಸೆ)
- ಎಲ್ಲಾ ರೀತಿಯ ಹರ್ನಿಯಾ
- ಕೆಲವು ನಿರ್ದಿಷ್ಟ ರೋಗಗಳು - 4 ವರ್ಷಗಳ ಕೆಲವು ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ
- ಜಾಯಿಂಟ್ ರಿಪ್ಲೇಸ್‌ಮೆಂಟ್ ಚಿಕಿತ್ಸೆ (ಅಪಘಾತ ಕಾರಣವಾಗಿರುವಂತಿಲ್ಲ)
- ವಯಸ್ಸಿಗೆ ಸಂಬಂಧಿಸಿದ ಅಸ್ಥಿಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್
- ಪಾಲಿಸಿಯ ಮೊದಲ 30 ದಿನಗಳಲ್ಲಿ ಉಂಟಾದ ಅಥವಾ ತಗುಲಿಸಿಕೊಂಡ ಯಾವುದೇ ರೋಗ
- ಮೆಟರ್ನಿಟಿ ಕವರೇಜ್
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಹೆರಿಗೆ ಮತ್ತು ನವಜಾತ ಶಿಶುವಿನ ಕವರ್ ಅನ್ನು ಆಡ್-ಆನ್ ಪ್ರಯೋಜನಗಳಾಗಿ ಒದಗಿಸುತ್ತದೆ. ಈ ಪ್ರಯೋಜನಗಳನ್ನು ಒದಗಿಸುವುದು ಮತ್ತು ಮಗುವನ್ನು ಹೊಂದುವ ಸಮಯದಲ್ಲಿ ನಿಮ್ಮ ಉದ್ಯೋಗಿಗಳಿಗೆ ನಿಮ್ಮ ಬೆಂಬಲವನ್ನು ತೋರಿಸಲು ಇದು ಉತ್ತಮ ಆಯ್ಕೆಯಾಗಿದೆ.
- ಫ್ಯಾಮಿಲಿ ಕವರೇಜ್:
ನೀವು ಉದ್ಯೋಗಿಗಳ ಕುಟುಂಬವನ್ನು ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್‌ನಿಂದ ಕವರ್ ಮಾಡಿದಾಗ ಅವರು ಅದನ್ನು ಹೆಚ್ಚು ಪ್ರಶಂಸಿಸುತ್ತಾರೆ. ಇದು ನೀವು ಅವರನ್ನು ಎಷ್ಟು ಗೌರವಿಸುತ್ತೀರಿ ಎಂಬುದನ್ನು ಸೂಚಿಸಲು ನೀವು ನೀಡಬಹುದಾದ ಅತ್ಯುತ್ತಮ ಪ್ರಯೋಜನವಾಗಿದೆ. ಸಹಜವಾಗಿ, ಇದಕ್ಕಾಗಿ ನೀವು ವ್ಯಯಿಸಬೇಕಾಗುತ್ತದೆ ಆದರೆ ನಿಮ್ಮ ಉದ್ಯೋಗಿಯ ಅಗತ್ಯಗಳಿಗೆ ಸರಿಹೊಂದುವಂತೆ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಕಸ್ಟಮೈಸ್ ಮಾಡುವ ಆಯ್ಕೆ ನಿಮಗೆ ಲಭ್ಯವಿದೆ. ಮೆಟರ್ನಿಟಿ ಆಡ್-ಆನ್‌ಗಳಂತೆಯೇ, ನಿಮ್ಮ ತಂಡವನ್ನು ಅವರ ವಯಸ್ಸಿನ ಆಧಾರದ ಮೇಲೆ ಗುರುತಿಸುವುದು ಮತ್ತು ಉತ್ತಮವಾಗಿ ಯೋಚಿಸಿ ನಿರ್ಧರಿಸುವುದು ಅರ್ಥಪೂರ್ಣವಾಗಿದೆ. ಉದಾಹರಣೆಗೆ, ಅವರ 20 ರ ಹರೆಯದವರ ಗುಂಪಿಗೆ 30 ವರ್ಷ ವಯಸ್ಸಿನವರಂತೆ ವಯಸ್ಸಾದ ಪೋಷಕರು ಮತ್ತು ಮಕ್ಕಳಿಗಾಗಿ ಅಗತ್ಯವಿರುವ ಫ್ಯಾಮಿಲಿ ಕವರೇಜ್ ಅಗತ್ಯವಿಲ್ಲದಿರಬಹುದು. ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಉದ್ಯೋಗಿಗಳು ತಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ಸೂಕ್ತವಾಗಿ ಬಳಸಲು ಸಾಧ್ಯವಾಗದಿದ್ದರೆ ನಿಮ್ಮ ಪ್ರಯತ್ನಗಳು ನಿಷ್ಪ್ರಯೋಜಕವಾಗುತ್ತವೆ.
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ನಿಂದ ಉದ್ಯೋಗಿಗಳಿಗೆ ದೊರಕುವ ಪ್ರಯೋಜನಗಳು ಯಾವುವು?
ಇತ್ತೀಚಿನ ದಿನಗಳಲ್ಲಿ, ಉದ್ಯೋಗಿಗಳು ಸಂಬಳವನ್ನಷ್ಟೇ ಅಲ್ಲದೇ ಉಳಿದ ಆಕರ್ಷಕ ಪ್ರಯೋಜನಗಳನ್ನು ಒದಗಿಸುವ ಕಂಪನಿಗಳ ಹುಡುಕಾಟದಲ್ಲಿರುತ್ತಾರೆ. ಅದಕ್ಕೆ ಒಂದು ಅರ್ಥಪೂರ್ಣ ಪರಿಹಾರವೆಂದರೆ ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್, ಇದು ಇತ್ತೀಚೆಗೆ ಎದುರಾದ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕೋವಿಡ್-19 ರ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಕಡ್ಡಾಯ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಒದಗಿಸಬೇಕೆಂಬ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ನು ಪರಿಗಣಿಸಿ, ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಹಲವಾರು ಪ್ರಯೋಜನಗಳನ್ನು ನೀಡುತ್ತಿದೆ.
ಆರೋಗ್ಯಕರ ಉದ್ಯೋಗಿಗಳು ಕೆಲಸದ ಸ್ಥಳದ ಉತ್ಪಾದಕತೆಯನ್ನು ಹೆಚ್ಚಿಸುತ್ತಾರೆ. ವಿಶೇಷವಾಗಿ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಾಗಿರುವ ಸಂದರ್ಭದಲ್ಲಿ, ಉದ್ಯೋಗಿಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ. ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ನಿಮ್ಮ ಉದ್ಯೋಗದಾತರಿಂದ ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದರಿಂದ ಆಗುವ ಹಲವಾರು ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಉದ್ಯೋಗಿಯಾಗಿ,
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ನಿಂದ ದೊರಕುವ ಪ್ರಯೋಜನಗಳು ಪಾವತಿಸಿದ ಪ್ರೀಮಿಯಂಗಿಂತ ಹೆಚ್ಚಿನದಾಗಿರುತ್ತವೆ.
- ಕೇವಲ ಇನ್ಶೂರೆನ್ಸ್ ಆಗಿಲ್ಲ, ಬದಲಾಗಿ ಇದು ಕುಟುಂಬಕ್ಕೆ ಕವರ್ ಆಗಿದೆ. ಪಾಲಿಸಿಯನ್ನು ಅವಲಂಬಿಸಿ, ನಿಮ್ಮ ಕುಟುಂಬವೂ ವಿಮೆದಾರರಾಗಲು ಅರ್ಹರಾಗಬಹುದು.
ಉದ್ಯೋಗದಾತರಾಗಿ,
ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ, ನಿಮ್ಮ ಉದ್ಯೋಗಿಗಳ ಉತ್ಪಾದಕತೆಯನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಪ್ರಯೋಜನಗಳನ್ನು ನೀವು ಒದಗಿಸಬಹುದು.
- ಗೈರುಹಾಜರಿಯಲ್ಲಿ ಇಳಿಕೆ
- ಉತ್ಪಾದಕತೆಯ ಹೆಚ್ಚಳ
- ಉದ್ಯೋಗಿಗಳನ್ನು ಉಳಿಸಿಕೊಳ್ಳುವಿಕೆಯಲ್ಲಿ ಸುಧಾರಣೆ
- ಹೆಚ್ಚಿನ ಉದ್ಯಮ ಉತ್ಪಾದಕತೆ
ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ, ನಿಮ್ಮ ಉದ್ಯೋಗಿಗಳ ಹೆಲ್ತ್‌ಕೇರ್ ಅಗತ್ಯಗಳನ್ನು ಪೂರೈಸಲು ಮತ್ತು ವೆಚ್ಚವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡಲು ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಗತ್ಯಕ್ಕೆ ಹೊಂದಿಸಬಹುದಾದ ಮತ್ತು ಕಸ್ಟಮೈಸ್ ಮಾಡಬಹುದಾದ ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಸಲ್ಯೂಷನ್ಸ್ ಅನ್ನು ಒದಗಿಸುತ್ತದೆ. ನಿಮ್ಮ ಕಂಪನಿಗಾಗಿ ನಮ್ಮ ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಏನು ಮಾಡಬಲ್ಲದು ಎಂಬುದರ ಮಾಹಿತಿ ಇಲ್ಲಿದೆ:
ಅನಾರೋಗ್ಯದ ದಿನಗಳ ವೆಚ್ಚವನ್ನು ಕಡಿತಗೊಳಿಸುತ್ತದೆ
ತಿಯೊಬ್ಬ ಉದ್ಯೋಗದಾತರು, ಪ್ರತಿ ಕಂಪನಿಯಲ್ಲಿ ತಮ್ಮ ಉದ್ಯೋಗಿಗಳು ತೆಗೆದುಕೊಳ್ಳುವ ಅನಾರೋಗ್ಯ ರಜೆಯ ಸಂಖ್ಯೆಯನ್ನು ಕಡಿಮೆ ಮಾಡುವ ಸವಾಲನ್ನು ಹೊಂದಿದ್ದಾರೆ. ಕೆಲಸದ ದಿನಗಳು ಅನಾರೋಗ್ಯದ ದಿನಗಳಾಗಿ ಕಳೆದುಹೋದರೆ, ಅದು ಉದ್ಯಮಗಳ ತಳಹದಿಯ ಮೇಲೆ ಗಣನೀಯವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಉದ್ಯೋಗಿಗಳು ಅನಾರೋಗ್ಯಕ್ಕೆ ಒಳಗಾಗುವುದನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದಿದ್ದರೂ, ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಉದ್ಯೋಗಿಗಳಿಗೆ ಗುಣಮಟ್ಟದ ಹೆಲ್ತ್‌ಕೇರ್ ಅನ್ನು ಪಡೆದುಕೊಳ್ಳಲು ನೆರವಾಗುವುದರಿಂದ, ಅವರು ಬೇಗನೆ ಕೆಲಸಕ್ಕೆ ಮರಳಲು ಸಾಧ್ಯವಾಗುತ್ತದೆ.
ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ
ಪ್ರತಿಭಾವಂತರನ್ನು ನೇಮಿಸಿಕೊಳ್ಳುವಾಗ, ನಿಮ್ಮ ಪ್ರಯೋಜನಗಳ ಪ್ಯಾಕೇಜ್‌ನ ಭಾಗವಾಗಿ ಕಂಪನಿಯ ಮೆಡಿಕಲ್ ಇನ್ಶೂರೆನ್ಸ್ ಅನ್ನು ಒದಗಿಸುವುದು ಅಭ್ಯರ್ಥಿಯು ಇತರ ಕಂಪನಿಗಳಿಗಿಂತ ನಿಮ್ಮ ಕಂಪನಿಯನ್ನು ಆಯ್ಕೆ ಮಾಡುವುದಕ್ಕೆ ಕಾರಣವಾಗಬಹುದು. ಹಾಗೆಯೇ, ಕಂಪನಿಯು ಪ್ರೈವೇಟ್ ಮೆಡಿಕಲ್ ಇನ್ಶೂರೆನ್ಸ್ ಅನ್ನು ಒದಗಿಸುವುದರಿಂದ ಅವರಿಗೆ ಹೆಚ್ಚು ಬೆಲೆ ಕೊಟ್ಟ ಮತ್ತು ಕಾಳಜಿ ವಹಿಸಿದ ಭಾವನೆ ಉಂಟಾಗಿ ನಿಮ್ಮ ಪ್ರಸ್ತುತ ಉದ್ಯೋಗಿಗಳು ಉದ್ಯೋಗಕ್ಕಾಗಿ ಬೇರೆಡೆ ಅವಕಾಶವನ್ನು ಹುಡುಕುವ ಸಾಧ್ಯತೆ ಕಡಿಮೆಯಾಗುತ್ತದೆ.
ಕೆಲಸದ ಬಗ್ಗೆ ತೃಪ್ತಿಯನ್ನು ಹೆಚ್ಚಿಸುತ್ತದೆ
ಕಂಪನಿ ಮೆಡಿಕಲ್ ಇನ್ಶೂರೆನ್ಸ್ ಹೆಚ್ಚು ಅಗತ್ಯವಾಗಿರುವ ಉದ್ಯೋಗಿ ಸೌಲಭ್ಯಗಳಲ್ಲಿ ಒಂದಾಗಿದೆ. ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಮೂಲಕ ಗುಣಮಟ್ಟದ ಪ್ರೈವೇಟ್ ಹೆಲ್ತ್‌ಕೇರ್ ಅನ್ನು ಒದಗಿಸುವುದರಿಂದ ಉದ್ಯೋಗದಾತರಿಗೆ ತಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿಯಿದೆ ಎನ್ನುವ ಭಾವ ಉದ್ಯೋಗಿಗಳಲ್ಲಿ ಉಂಟಾದಾಗ, ಅವರು ಅದರಿಂದ ಸ್ಪೂರ್ತಿಯನ್ನು ಹೊಂದಿ ಉತ್ಪಾದಕತೆಯ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ಕಂಪನಿಯಲ್ಲೇ ದೀರ್ಘ ಕಾಲ ಉಳಿಯಬಹುದು.
ಸ್ಟಾರ್ ಹೆಲ್ತ್‌ನೊಂದಿಗೆ ನಿಮ್ಮ ಉದ್ಯೋಗಿಗಳ ಕಾಳಜಿವಹಿಸಿ
ನಿಮ್ಮ ಉದ್ಯೋಗಿಗಳ ಕಾಳಜಿಯನ್ನು ನೀವು ವಹಿಸಿದಾಗ, ಎಲ್ಲವೂ ಸಾಧ್ಯವಾಗುತ್ತದೆ
ನಿಮ್ಮ ಉದ್ಯೋಗಿಗಳ ಆರೋಗ್ಯ ಮತ್ತು ಕ್ಷೇಮಕ್ಕಾಗಿ ನಮ್ಮ ಗ್ರೂಪ್ ಪ್ಲ್ಯಾನ್‌ಗಳನ್ನು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ ಆದ್ದರಿಂದ ಅವರು ಕೆಲಸದ ಮೇಲೆ ಕೇಂದ್ರೀಕರಿಸಬಹುದು.
- ಅಗತ್ಯಕ್ಕೆ ಹೊಂದಿಸಬಹುದಾದ ಕವರ್
ಗ್ರೂಪ್ ಪಾಲಿಸಿಗಳಿಗಾಗಿ, ನಿಮ್ಮ ಉದ್ಯಮದ ಅಗತ್ಯತೆಗಳು ಮತ್ತು ಅಗತ್ಯವಿರುವ ಕವರ್ ಮಟ್ಟಕ್ಕೆ ಸರಿಹೊಂದುವಂತೆ ನಾವು ನಮ್ಮ ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿಸಬಹುದು.
- ಟೆಕ್ ಸ್ನೇಹಿ
ಸ್ಟಾರ್ ಹೆಲ್ತ್ ನಿಮ್ಮ ಟೆಕ್ ಸ್ನೇಹಿ ಆಯ್ಕೆಯಾಗಿದ್ದು ಅದು ನಿಮ್ಮ ಕ್ಲೈಮ್ ಪ್ರಕ್ರಿಯೆಯನ್ನು ಸರಳ ಮತ್ತು ಒತ್ತಡ ರಹಿತವಾಗಿಸುತ್ತದೆ.
- ಅಡ್ಮಿನ್ ಡ್ಯಾಶ್‌ಬೋರ್ಡ್
ನಿಮ್ಮ ಗ್ರೂಪ್ ಹೆಲ್ತ್ ಪ್ರಯೋಜನಗಳನ್ನು ನಿರ್ವಹಿಸಲು ಅಡ್ಮಿನ್ ಡ್ಯಾಶ್‌ಬೋರ್ಡ್. ನಮ್ಮ ಅಡ್ಮಿನ್ ಡ್ಯಾಶ್‌ಬೋರ್ಡ್ ನಿಮಗೆ ಅಗತ್ಯವಿರುವ ಎಲ್ಲಾ ಕಾರ್ಯಗಳನ್ನು ಒದಗಿಸುತ್ತದೆ.
ಸ್ಟಾರ್ ಹೆಲ್ತ್‌ನ ಸ್ಟಾರ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಬೇಕು
- 89.9% ನಗದು ರಹಿತ ಕ್ಲೈಮ್‌ಗಳನ್ನು 2 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸೆಟಲ್ ಮಾಡಲಾಗಿದೆ.
- ಭಾರತದಾದ್ಯಂತ 14,000+ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದು ರಹಿತ ಸೌಲಭ್ಯವನ್ನು ಪಡೆಯಿರಿ. ನಮ್ಮ 94% ಹೆಲ್ತ್ ಕ್ಲೈಮ್‌ಗಳನ್ನು 2021 ರ ಆರ್ಥಿಕ ವರ್ಷದಲ್ಲಿ 30 ದಿನಗಳೊಳಗೆ ಪ್ರಕ್ರಿಯೆಗೊಳಿಸಲಾಗಿದೆ
- ಯಾವುದೇ TPA ಇಲ್ಲದೆ ಕ್ಲೈಮ್ ಸೆಟಲ್‌ಮೆಂಟ್‌ಗಾಗಿ ಇನ್ ಹೌಸ್ ಡಾಕ್ಟರ್‌ಗಳು
- ಉದ್ಯಮದಲ್ಲೇ ಅತ್ಯುತ್ತಮ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ
ಸಹಾಯ ಕೇಂದ್ರ
ಗೊಂದಲಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ
ಹೆಲ್ತ್ ಇನ್ಶೂರೆನ್ಸ್‌ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಿ.