ಅಪಘಾತ ಆರೈಕೆ ವೈಯಕ್ತಿಕ ವಿಮಾ ಪಾಲಿಸಿ

*I consent to be contacted by Star Health Insurance for health insurance product inquiries, overriding my NCPR/DND registration.

IRDAI UIN: IRDAI/HLT/SHAI/P-P/V.III/134/2017-18

HIGHLIGHTS

Plan Essentials

essentials

ಪ್ರವೇಶ ವಯಸ್ಸು

18 ರಿಂದ 70 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಗಳು ಈ ಪಾಲಿಸಿಯನ್ನು ಪಡೆಯಬಹುದು. ವಿಮಾದಾರರ ಅವಲಂಬಿತ ಮಕ್ಕಳಿಗೆ 5 ತಿಂಗಳಿಂದ 25 ವರ್ಷಗಳವರೆಗೆ ರಕ್ಷಣೆ ನೀಡಲಾಗುತ್ತದೆ.
essentials

ಪಾಲಿಸಿ ವಿಧ

ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದು. ಕುಟುಂಬ ಯೋಜನೆಯಡಿ ವಿಮಾದಾರರ ಸಂಗಾತಿ ಮತ್ತು ಅವಲಂಬಿತ ಮಕ್ಕಳು ರಕ್ಷಣೆ ನೀಡುತ್ತಾರೆ.
essentials

ಪ್ರೀಮಿಯಂ ರಿಯಾಯಿತಿ

ಪಾಲಿಸಿಯನ್ನು ಕುಟುಂಬದ ಆಧಾರವಾಗಿ ಆರಿಸಿಕೊಂಡರೆ ಪ್ರೀಮಿಯಂನಲ್ಲಿ 10% ರಿಯಾಯಿತಿ ಲಭ್ಯವಿದೆ.
essentials

ಆನ್‌ಲೈನ್ ರಿಯಾಯಿತಿ

ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ಪ್ರೀಮಿಯಂನಲ್ಲಿ 5% ರಿಯಾಯಿತಿ ಲಭ್ಯವಿದೆ.
DETAILED LIST

ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

ವಿಮಾ ಮೊತ್ತ

ಈ ಪಾಲಿಸಿಯ ಕನಿಷ್ಠ ವಿಮಾ ಮೊತ್ತ ರೂ. 1,00,000/- ಮತ್ತು ಇದನ್ನು 10,000/-ರೂ.ಗಳ ಗುಣಕಗಳಲ್ಲಿ ಹೆಚ್ಚಿಸಬಹುದು. ವಿಮಾದಾರರ ಗಳಿಕೆಯ ಸಾಮರ್ಥ್ಯವನ್ನು ಅವಲಂಬಿಸಿ ಗರಿಷ್ಠ ವಿಮಾ ಮೊತ್ತವು ಬದಲಾಗುತ್ತದೆ.

ಪಾಲಿಸಿ ಪ್ರಯೋಜನ

ಟೇಬಲ್ A - ಅಪಘಾತ ಮರಣಕ್ಕೆ ರಕ್ಷಣೆ ನೀಡುತ್ತದೆ. ಟೇಬಲ್ B - ಅಪಘಾತ ಸಾವು ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ರಕ್ಷಣೆ ನೀಡುತ್ತದೆ. ಟೇಬಲ್ C - ಅಪಘಾತ ಸಾವು, ಶಾಶ್ವತ ಅಂಗವೈಕಲ್ಯ ಮತ್ತು ತಾತ್ಕಾಲಿಕ ಒಟ್ಟು ಅಂಗವೈಕಲ್ಯಕ್ಕೆ ರಕ್ಷಣೆ ನೀಡುತ್ತದೆ.

ಅಪಘಾತ ಸಾವು

ಈ ಪಾಲಿಸಿಯು ವಿಮಾದಾರರ ಅಪಘಾತದಿಂದ ಮರಣದ ಸಂದರ್ಭದಲ್ಲ ಸಂಚಿತ ಬೋನಸ್ ಜೊತೆಗೆ ವಿಮಾ ಮೊತ್ತದ 100% ಅನ್ನು ಒದಗಿಸುತ್ತದೆ.

ಶಾಶ್ವತ ಪೂರ್ಣ ಅಂಗವೈಕಲ್ಯ

ಈ ಪಾಲಿಸಿಯು ಅಪಘಾತದ ಕಾರಣದಿಂದ ವಿಮಾದಾರರ ಶಾಶ್ವತ ಪೂರ್ಣ ಅಂಗವೈಕಲ್ಯದ ಸಂದರ್ಭದಲ್ಲಿ ಸಂಚಿತ ಬೋನಸ್‌ನೊಂದಿಗೆ ವಿಮಾ ಮೊತ್ತದ 150% ಅನ್ನು ಒದಗಿಸುತ್ತದೆ (ವಿಮಾ ಮೊತ್ತದ 100% ನಲ್ಲಿ ಮಾತ್ರ ಲೆಕ್ಕಹಾಕಲಾಗುತ್ತದೆ).

ಶಾಶ್ವತ ಭಾಗಶಃ ಅಂಗವೈಕಲ್ಯ

ಅಪಘಾತದ ಗಾಯಗಳ ನಂತರ ಶಾಶ್ವತ ಭಾಗಶಃ ಅಂಗವಿಕಲತೆಯ ಸಂದರ್ಭದಲ್ಲಿ ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಿರುವಂತೆ ಈ ಪಾಲಿಸಿಯು ವಿಮಾ ಮೊತ್ತದ ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ಒದಗಿಸುತ್ತದೆ.

ತಾತ್ಕಾಲಿಕ ಪೂರ್ಣ ನಿಷ್ಕ್ರಿಯತೆ

ಈ ಪಾಲಿಸಿಯು ಪೂರ್ಣಗೊಂಡ ವಾರಕ್ಕೆ ಟೇಬಲ್ ಸಿ ಅಡಿಯಲ್ಲಿ ವಿಮಾ ಮೊತ್ತದ 1% ಅನ್ನು 100 ವಾರಗಳವರೆಗೆ ರೂ. 15,000/- (ವಾರಕ್ಕೆ) ಒದಗಿಸುತ್ತದೆ, ವಿಮೆ ಮಾಡಿದ ವ್ಯಕ್ತಿಗೆ ಗಂಭೀರವಾದ ಗಾಯದ ಸಂದರ್ಭದಲ್ಲಿ ಕೇವಲ ಅಪಘಾತಗಳಿಂದಾಗಿ ಮತ್ತು ತಾತ್ಕಾಲಿಕ ಸಂಪೂರ್ಣ ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ.

ಟೇಬಲ್ A,B & C ಗಾಗಿ ಹೆಚ್ಚುವರಿ ಪ್ರಯೋಜನಗಳು

ಶೈಕ್ಷಣಿಕ ಅನುದಾನ

ಅಪಘಾತ ಮರಣ ಅಥವಾ ವಿಮಾದಾರರ ಶಾಶ್ವತ ಸಂಪೂರ್ಣ ಅಂಗವೈಕಲ್ಯ ಸಂದರ್ಭದಲ್ಲಿ, ವಿಮಾದಾರನ ಗರಿಷ್ಠ ಎರಡು ಅವಲಂಬಿತ ಮಕ್ಕಳಿಗೆ ಶೈಕ್ಷಣಿಕ ಅನುದಾನವನ್ನು ಒದಗಿಸಲಾಗುತ್ತದೆ. I) ಗರಿಷ್ಠ ರೂ. 10,000/- ಪ್ರತಿ ಮಗುವಿಗೆ, ಎರಡು ಅವಲಂಬಿತ ಮಕ್ಕಳವರೆಗೆ ನೀಡಲಾಗುತ್ತದೆ II) 18 ವರ್ಷದೊಳಗಿನ ಒಂದಕ್ಕಿಂತ ಹೆಚ್ಚು ಅವಲಂಬಿತ ಮಕ್ಕಳ ಸಂದರ್ಭದಲ್ಲಿ, 20,000ರೂ. ಮೀರದಂತೆ ಪ್ರತಿ ಮಗುವಿಗೆ ರೂ. 10,000/- ಪಾವತಿಸಲಾಗುತ್ತದೆ.

ಆಂಬ್ಯುಲೆನ್ಸ್ ಶುಲ್ಕಗಳು / ಶವ ಅವಶೇಷಗಳ ಸಾಗಣೆ

ವಿಮಾದಾರನ ನಿವಾಸದ ಸ್ಥಳದ ಹೊರಗಿನ ಅಪಘಾತಗಳಲ್ಲಿ ಸ್ವೀಕಾರಾರ್ಹ ಕ್ಲೈಮ್‌ಗಾಗಿ, ಪಾಲಿಸಿಯು ಆಸ್ಪತ್ರೆಗೆ ಹೋಗಲು ಆಂಬ್ಯುಲೆನ್ಸ್ ಶುಲ್ಕಕ್ಕಾಗಿ ಅಥವಾ ವಿಮಾದಾರನ ಮರಣದ ಅವಶೇಷಗಳನ್ನು ಅವನ/ಅವಳ ನಿವಾಸಕ್ಕೆ ಸಾಗಿಸಲು ಗರಿಷ್ಠ ರೂ. 5,000/-ಮೊತ್ತವನ್ನು ಒದಗಿಸುತ್ತದೆ.

ಒಬ್ಬ ಸಂಬಂಧಿಗೆ ಪ್ರಯಾಣ ವೆಚ್ಚಗಳು

ವಿಮೆ ಮಾಡಿದ ವ್ಯಕ್ತಿಯ ಅಪಘಾತ ಮರಣದ ಸಂದರ್ಭದಲ್ಲಿ ವಿಮಾದಾರರ ನಿವಾಸಕ್ಕೆ ಒಬ್ಬ ಸಂಬಂಧಿ ಪ್ರಯಾಣಿಸಲು ಕಂಪನಿಯು 50,000/- (ವಾಸ್ತವಕ್ಕೆ ಒಳಪಟ್ಟಿರುತ್ತದೆ) ವಿಮಾ ಮೊತ್ತದ 1% ರವರೆಗಿನ ಮೊತ್ತವನ್ನು ಒದಗಿಸುತ್ತದೆ.

ವಾಹನ / ನಿವಾಸ ಮಾರ್ಪಾಡು

ಭಾರತದಲ್ಲಿ ಮಾರ್ಪಾಡು ಮಾಡುವವರೆಗೆ ಮತ್ತು ಅಪಘಾತದ ಪರಿಣಾಮವಾಗಿ ಅಗತ್ಯವಿರುವ ವೈದ್ಯರಿಂದ ಪ್ರಮಾಣೀಕರಿಸಲ್ಪಟ್ಟವರೆಗೆ ವಿಮಾದಾರರ ವಸತಿ ಸೌಕರ್ಯಗಳು ಅಥವಾ ವಾಹನವನ್ನು ಮಾರ್ಪಡಿಸಲು ಉಂಟಾದ ವೆಚ್ಚಗಳು ಗರಿಷ್ಠ ರೂ. 50,000/ ವಿಮಾ ಮೊತ್ತದ 10% ವರೆಗೆ (ಟೇಬಲ್ B ಯಮತ್ತು ಸಿ) ಭರಿಸಲಾಗುತ್ತದೆ.

ರಕ್ತದ ಖರೀದಿ

ಈ ಪಾಲಿಸಿಯು  ವಿಮಾದಾರರ ವೈದ್ಯಕೀಯ ಅಥವಾ ಶಸ್ತ್ರ ಚಿಕಿತ್ಸೆಗಾಗಿ ರಕ್ತವನ್ನು ಖರೀದಿಸಲು ತಗಲುವ ವೆಚ್ಚಗಳಿಗೆ ವಿಮಾ ಮೊತ್ತದ ಜೊತೆಗೆ ವಿಮಾ ಮೊತ್ತದ 5% ರಷ್ಟು ಗರಿಷ್ಠ ರೂ. 10,000/- (ಯಾವುದು ಕಡಿಮೆಯೋ ಅದು) ನೀಡುತ್ತದೆ.

ಆಮದು ಮಾಡಿಕೊಂಡ ಔಷಧಿಗಳ ಸಾಗಣೆ

ಭಾರತಕ್ಕೆ ಔಷಧಿಗಳನ್ನು ಆಮದು ಮಾಡಿಕೊಳ್ಳಲು ಸರಕು ಸಾಗಣೆ ಶುಲ್ಕದ ವೆಚ್ಚಗಳಿಗೆ ಗರಿಷ್ಠ ರೂ 20,000/- ಕ್ಕೆ ಒಳಪಟ್ಟು ವಿಮಾ ಮೊತ್ತದ 5% ಅನ್ನು ಪಾಲಿಸಿ ಒದಗಿಸುತ್ತದೆ.

ಸಂಚಿತ ಬೋನಸ್

ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 50% ಗೆ ಒಳಪಟ್ಟು ವಿಮಾ ಮೊತ್ತದ 5% ನಲ್ಲಿ ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ.

ಐಚ್ಛಿಕ ಪ್ರಯೋಜನ

ವೈದ್ಯಕೀಯ ವೆಚ್ಚಗಳ ವಿಸ್ತರಣೆ

ಒಳರೋಗಿಯಾಗಿ ಮತ್ತು ಹೊರರೋಗಿಯಾಗಿ ತಗಲುವ ವೈದ್ಯಕೀಯ ವೆಚ್ಚಗಳು ಪ್ರತಿ ಪಾಲಿಸಿ ಅವಧಿಗೆ ಕ್ಲೈಮ್‌ನ 25% ಅಥವಾ 5,00,000/- ಒಟ್ಟು ವಿಮಾ ಮೊತ್ತದ 10% ರಷ್ಟು ಅಥವಾ ವಾಸ್ತವಿಕವಾಗಿ (ಯಾವುದು ಕಡಿಮೆಯೋ ಅದು) ಕವರೇಜ್‌ ಹೊಂದಿರುತ್ತದೆ.

ಚಳಿಗಾಲದ ಕ್ರೀಡೆಗಳಿಗೆ ವಿಮೆ ವ್ಯಾಪ್ತಿ

ವಿಮಾದಾರರು ಅಂತಹ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರಸ್ತಾಪಿಸುವ ಅವಧಿಗೆ ಈ ವಿಸ್ತರಣೆಯನ್ನು ನೀಡಬಹುದು.

ಆಸ್ಪತ್ರೆ ನಗದು

ಅಪಘಾತದ ದಿನಾಂಕದಿಂದ 30 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾದಾಗ ಆಸ್ಪತ್ರೆಯಲ್ಲಿ ಪೂರ್ಣಗೊಂಡ ಪ್ರತಿ ದಿನಕ್ಕೆ ರೂ.1000/- ನ ನಗದು ಪ್ರಯೋಜನವನ್ನು ಒದಗಿಸಲಾಗುತ್ತದೆ. ಈ ಪ್ರಯೋಜನವನ್ನು ಪ್ರತಿ ಘಟನೆಗೆ ಗರಿಷ್ಠ 15 ದಿನಗಳವರೆಗೆ ಮತ್ತು ಪ್ರತಿ ಪಾಲಿಸಿ ಅವಧಿಗೆ 60 ದಿನಗಳವರೆಗೆ ಒದಗಿಸಲಾಗುತ್ತದೆ.

ಮನೆಯಲ್ಲಿ ಚೇತರಿಕೆ

ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹಾಜರಾದ ವೈದ್ಯರ ಸಲಹೆಯೊಂದಿಗೆ ವಿಮಾದಾರರ ನಿವಾಸದಲ್ಲಿ ಒಬ್ಬ ಅಟೆಂಡರ್‌ಗೆ ತಗಲುವ ವೆಚ್ಚವನ್ನು ರೂ. 500/- ಪ್ರತಿ ಘಟನೆಗೆ ಗರಿಷ್ಠ 15 ದಿನಗಳು ಮತ್ತು ಪ್ರತಿ ಪಾಲಿಸಿ ಅವಧಿಗೆ 60 ದಿನಗಳಿಗೆ ಒಳಪಟ್ಟಿರುವ ಪ್ರತಿ ಪೂರ್ಣಗೊಂಡ ದಿನಕ್ಕೆ ನೀಡಲಾಗುತ್ತದೆ.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.
ಸ್ಟಾರ್ ಹೆಲ್ತ್

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಿರಬೇಕು?

ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?

ಪ್ರಾರಂಭಿಸಿ

ಅತ್ಯುತ್ತಮವಾದುದರ ಖಾತರಿ ಹೊಂದಿರಿ

ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.

Contact Us
ಹೆಚ್ಚಿನ ಮಾಹಿತಿ ಬೇಕೆ?