New

  "IGMS is now BIMA BHAROSA "- An Integrated Grievance Management System to facilitate the policyholders and complainants to file their grievances with IRDAI

|

Click here to link your KYC

|

Policies where the risk commencement date is on or after 1st October 2024, all the policy servicing shall be as per the IRDAI (Insurance Products) Regulations, 2024 dated 20th March 2024 and Master Circular on Health Insurance Business dated 29th May 2024

ಖರೀದಿ ನೀತಿ
Download
Star health iOS appStar health iOS app
Star Health Logo

ನಮ್ಮ ಕುರಿತು

ಒಟ್ಟಾರೆ ನೋಟ

ನಾವು ಸ್ಟಾರ್ ಹೆಲ್ತ್ & ಅಲೈಡ್ ಇನ್ಶುರೆನ್ಸ್ ಕಂ. ಲಿಮಿಟೆಡ್, ಭಾರತದ ಪ್ರಮುಖ ಖಾಸಗಿ ಆರೋಗ್ಯ ವಿಮಾ ಕಂಪನಿ ಆಗಿದಗದು, ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದೇವೆ. ನಾವು 2006 ರಲ್ಲಿ ಭಾರತದ ಮೊದಲ ಸ್ವತಂತ್ರ ಆರೋಗ್ಯ ವಿಮಾ ಪೂರೈಕೆದಾರರಾಗಿ ನಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ. ಇಂದು, ದೇಶಾದ್ಯಂತ 14,000 ಕ್ಕೂ ಹೆಚ್ಚು ನೆಟ್‌ವರ್ಕ್ ಆಸ್ಪತ್ರೆಗಳು, 835 ಶಾಖೆಗಳ ಕಛೇರಿಗನ್ನು ಹೊಂದಿದ್ದು, 6.30 ಲಕ್ಷಕ್ಕೂ ಹೆಚ್ಚು ಏಜೆಂಟ್‌ಗಳು ಮತ್ತು ರೂ. 30,300 ಕೋಟಿ ಪಾವತಿಸಿದ ಕ್ಲೈಮ್‌ಗಳೊಂದಿಗೆ, ನಾವು ನಿಜವಾಗಿಯೂ ದೇಶಕ್ಕೆ ಆರೋಗ್ಯ ವಿಮಾದಾರರಾಗಿದ್ದೇವೆ.


14,750 ಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ, ನಾವು ಆರೋಗ್ಯ, ವೈಯಕ್ತಿಕ ಅಪಘಾತ ಮತ್ತು ಸಾಗರೋತ್ತರ ಮತ್ತು ದೇಶೀಯ ಪ್ರಯಾಣ ವಿಮೆಯಲ್ಲಿ ಭಾರತೀಯ ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಗುಣವಾಗಿ ನವೀನ ಸೇವೆಗಳು ಮತ್ತು ಉತ್ಪನ್ನಗಳನ್ನು ಒದಗಿಸುತ್ತೇವೆ. ಸೂಕ್ಷ್ಮವಾಗಿ ರಚಿಸಲಾದ ವಿಮಾ ಪಾಲಿಸಿಗಳೊಂದಿಗೆ, ನಾವು ಜನರ ಅನನ್ಯ ಆರೋಗ್ಯ ಅಗತ್ಯಗಳನ್ನು ಪರಿಹರಿಸುವಿಕೆ ಮುಂದುವರಿಸುತ್ತೇವೆ. ಪ್ರಾರಂಭದಿಂದಲೂ 17 ಕೋಟಿಗೂ ಹೆಚ್ಚು ಜನರನ್ನು ಕವರ್ ಮಾಡಿದ್ದೇವೆ, ಹೆಚ್ಚಿನ ಜನರು ಆರೋಗ್ಯ ವಿಮೆಯ ಅಡಿಯಲ್ಲಿ ಬಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಸೇವೆಗಳನ್ನು ಹೆಚ್ಚಿಸುತ್ತಿದ್ದೇವೆ.


ಆರೋಗ್ಯ ವಿಮಾ ತಜ್ಞರಾಗಿರುವುದರಿಂದ, ಆರೋಗ್ಯ ತುರ್ತು ಸಂದರ್ಭಗಳಲ್ಲಿ ಸಕಾಲಿಕ ಸಹಾಯವನ್ನು ಒದಗಿಸಲಾಗಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮ್ಮ ಸಮರ್ಪಿತ ಇನ್-ಹೌಸ್ ಕ್ಲೈಮ್ ಸೆಟ್ಲ್‌ಮೆಂಟ್ ತಂಡವು ಪ್ರತಿ ಗಂಟೆಗೆ ಕ್ಲೈಮ್ ಮೊತ್ತವಾಗಿ 4 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಇತ್ಯರ್ಥಪಡಿಸುವ ಅತ್ಯುತ್ತಮ ದಾಖಲೆಯನ್ನು ಹೊಂದಿದೆ.


ನಾವು ವ್ಯಕ್ತಿಗಳಿಂದ ಕುಟುಂಬಗಳು ಮತ್ತು ಕಾರ್ಪೊರೇಟ್‌ಗಳವರೆಗೆ ಪ್ರತಿಯೊಂದು ಮಾರುಕಟ್ಟೆ ವಲಯಕ್ಕೂ ಉತ್ಪನ್ನಗಳನ್ನು ಒದಗಿಸುತ್ತೇವೆ. ಹೊಸ ಯುಗದ ಕಂಪನಿಯಾಗಿ, ನಾವು ಸಮಾಜದ ಎಲ್ಲಾ ವರ್ಗಗಳ ಅಗತ್ಯಗಳನ್ನು ಪೂರೈಸಲು ಡಿಜಿಟಲ್, ಅಗ್ರಿಗೇಟರ್‌ಗಳು, ಬ್ರೋಕರ್‌ಗಳು ಇತ್ಯಾದಿ ಸೇರಿದಂತೆ ವಿವಿಧ ಚಾನಲ್‌ಗಳ ಮೂಲಕ ನೇರವಾಗಿ ಕಾರ್ಯನಿರ್ವಹಿಸುತ್ತೇವೆ. ನಾವು ಬ್ಯಾಂಕ್‌ಶ್ಯೂರೆನ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದೇವೆ ಮತ್ತು ಹಲವಾರು ಬ್ಯಾಂಕ್‌ಗಳೊಂದಿಗೆ ದೀರ್ಘಾವಧಿಯ ಪಾಲುದಾರಿಕೆಯನ್ನು ಹೊಂದಿದ್ದೇವೆ.


ವ್ಯಾಪಕವಾದ ವಿಶೇಷ ಉತ್ಪನ್ನಗಳು ಮತ್ತು ಆರೋಗ್ಯ ವಿಮೆಯನ್ನು ನೀಡುವುದರ ಜೊತೆಗೆ, ನಾವು ನಮ್ಮ ಆಂತರಿಕ ವೈದ್ಯರ ತಂಡದೊಂದಿಗೆ ಉಚಿತ ಟೆಲಿಹೆಲ್ತ್ ಸಮಾಲೋಚನೆಗಳನ್ನು ಒದಗಿಸುತ್ತೇವೆ, ಜೊತೆಗೆ ಅಗತ್ಯವಿದ್ದರೆ ಉಚಿತ ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಸಹ ನೀಡುತ್ತೇವೆ. ನಾವು 8 ಲಕ್ಷಕ್ಕೂ ಹೆಚ್ಚು ಸಮಾಲೋಚನೆಗಳನ್ನು ಪೂರ್ಣಗೊಳಿಸಿದ್ದೇವೆ, ಇದು ಪ್ರಾಥಮಿಕ ಆರೈಕೆ, ತಜ್ಞರ ಶಿಫಾರಸ್ಸು, ದ್ವಿತೀಯ ಅಭಿಪ್ರಾಯಗಳು ಮತ್ತು ನಿರ್ಧಾರ ಬೆಂಬಲಗಳತ್ತ ಕೇಂದ್ರೀಕರಿಸಿದೆ.


ನಮ್ಮ ಅತ್ಯಂತ ಯಶಸ್ಸಿನ ಮೂಲವೆಂದರೆ ನಮ್ಮ ಗ್ರಾಹಕ ಸೇವೆ ಮತ್ತು ನಾವು ಒದಗಿಸುವ ಅನುಭವ. ನಾವು 24x7 ಬಹುಭಾಷಾ ಕರೆ ಕೇಂದ್ರವನ್ನು ಹೊಂದಿದ್ದೇವೆ, ಇದು ಕ್ಲೈಮ್‌ಗಳ ಸಹಾಯಕ್ಕಾಗಿ ಸಮರ್ಪಿತವಾಗಿದೆ. ಹೆಚ್ಚುವರಿಯಾಗಿ, ಗ್ರಾಹಕರು ಯಾವುದೇ TPA (ಮೂರನೇ ಪಕ್ಷದ ನಿರ್ವಾಹಕರು) ಇಲ್ಲದೆಯೇ ಕಿರಿಕಿರಿ ಆಂತರಿಕ ಕ್ಲೈಮ್‌ ನಿರ್ಣಯದಿಂದ ಪ್ರಯೋಜನ ಪಡೆಯಬಹುದು.


ಈ ಡಿಜಿಟಲ್ ಯುಗದಲ್ಲಿ, ನಮ್ಮ ಎಲ್ಲಾ ಗ್ರಾಹಕರಿಗೆ ಸೇವೆಯ ಗುಣಮಟ್ಟ,  ಸುಲಭ ಪ್ರವೇಶ ಮತ್ತು ತಡೆರಹಿತ ಬಳಕೆದಾರ ಅನುಭವವನ್ನು ಖಾತರಿಪಡಿಸಲು ನವೀನ ತಂತ್ರಜ್ಞಾನಗಳೊಂದಿಗೆ ಡಿಜಿಟಲ್ ಆಗಿ ನಮ್ಮನ್ನು ನಾವು ಪರಿವರ್ತಿಸಿಕೊಳ್ಳುವ ಮೂಲಕ ಪ್ರಸ್ತುತ ಟ್ರೆಂಡ್‌ಗಳಿಗೆ ಹೊಂದಿಕೊಂಡಿದ್ದೇವೆ.